Advertisment

ಬಿಗ್​ಬಾಸ್​ ಶೋಗೆ ಎಂಟ್ರಿ ಕೊಡಲಿದ್ದಾರೆ ಈ ಇಬ್ಬರು ನಟಿಯರು; ಯಾರಿವರು ಗೊತ್ತಾ?

author-image
Veena Gangani
Updated On
ಬಿಗ್​ಬಾಸ್​ ಶೋಗೆ ಎಂಟ್ರಿ ಕೊಡಲಿದ್ದಾರೆ ಈ ಇಬ್ಬರು ನಟಿಯರು; ಯಾರಿವರು ಗೊತ್ತಾ?
Advertisment
  • ಈ ಬಾರಿಯ ಬಿಗ್​ಬಾಸ್​ ಸೀಸನ್​ 8ಕ್ಕೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ!
  • ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್​ಬಾಸ್ ತೆರೆಗೆ ಬರೋದು ಯಾವಾಗ?​
  • ಸ್ಟಾರ್​ ನಟನ ನೇತೃತ್ವದಲ್ಲಿ ಮೂಡಿ ಬರಲಿದೆ ಬಿಗ್​ಬಾಸ್​ ಸೀಸನ್​ 08

ಒಂದು ಕಡೆ ಕನ್ನಡದ ಬಿಗ್​ ರಿಯಾಲಿಟಿ ಶೋ ಶುರುವಾಗಲು ತೆರೆಮರೆಯಿಂದ ಸಿದ್ಧತೆ ನಡೆಸಲಾಗುತ್ತಿದೆ. ಮತ್ತೊಂದು ಕಡೆ ತೆಲುಗಿನ ಬಿಗ್​ಬಾಸ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದೇ ಸೆಪ್ಟೆಂಬರ್‌ನಿಂದ ತೆಲುಗಿನ ಬಿಗ್​ಬಾಸ್ ಸೀಸನ್- 8 ಶುರುವಾಗುವ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ.

Advertisment

publive-image

ಇದನ್ನೂ ಓದಿ:ಮದುವೆ ಆದ ಹೊಸ ಜೋಡಿ ತಿನ್ನಲೇಬೇಕು ಈ ಪಾನ್​​.. ಅಬ್ಬಬ್ಬಾ! ಇದರ ಬೆಲೆ 1 ಲಕ್ಷ ರೂ!

ಇದರ ಜೊತೆಗೆ ಈ ಬಾರಿಯ ತೆಲುಗಿನ ಬಿಗ್​ಬಾಸ್​ ಸೀಸನ್ 8ಕ್ಕೆ ಹೋಗುವ ಅನೇಕರ ಹೆಸರು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಅದರಲ್ಲೂ ಇಬ್ಬರು ಕನ್ನಡತಿಯರ ಹೆಸರು ಕೂಡ ಮುನ್ನಲೆಗೆ ಬಂದಿದೆ. ಈ ಬಾರಿಯ ಕನ್ನಡ ಬಿಗ್​ಬಾಸ್​ಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

publive-image

ಅತ್ತ ತೆಲುಗಿನ ಬಿಗ್​ಬಾಸ್​ಗೆ ಕನ್ನಡದ ಇಬ್ಬರು ನಟಿಯರು ಎಂ್ರಟಿ ಕೊಡಲಿದ್ದಾರೆ ಎಂದು ಹೇಳಲಾಗಿತ್ತಿದೆ. ಈ ಇಬ್ಬರು ಕೂಡ ಕನ್ನಡದವರಾಗಿದ್ದು, ಸದ್ಯ ತೆಲುಗು ಸೀರಿಯಲ್​ನಲ್ಲಿ ಮುಂಚುತ್ತಿದ್ದಾರೆ. ಇದೇ ಸೆಪ್ಟೆಂಬರ್ 08ರಂದು ಬಿಗ್​ಬಾಸ್ ತೆಲುಗಿಗೆ ಅದ್ಧೂರಿ ಚಾಲನೆ ಸಿಗಲಿದೆ. ಈಗಾಗಲೇ ಸೀಸನ್​ 8ರ ಪ್ರೋಮೋ ಕೂಡ ರಿಲೀಸ್​ ಆಗಿದ್ದು 08 ತಾರೀಖಿನಂದು ಸಂಜೆ 6ಗಂಟೆಗೆ ಶೋ ಪ್ರಾರಂಭವಾಗಲಿದೆ. ನಾಗಾರ್ಜುನ ಅಕ್ಕಿನೇನಿ ಅವರ ನೇತೃತ್ವದಲ್ಲಿ ಶೋ ಮೂಡಿ ಬರಲಿದೆ.

Advertisment

ಇದನ್ನೂ ಓದಿ:ಹಸಿ ಬಿಸಿ ಲುಕ್​ನಲ್ಲಿ ಕನ್ನಡತಿ ಸೀರಿಯಲ್​ ನಟಿ ಸಾರಾ ಅಣ್ಣಯ್ಯ.. ಖಾಲಿ ಹೃದಯದಲ್ಲಿ ಪ್ರೀತಿ ಕಂಡ ನಟಿ..!

publive-image

ಬಿಗ್​ಬಾಸ್ ಪ್ರೋಮೋ ರಿಲೀಸ್ ಆದ ಬೆನ್ನಲ್ಲೇ, ಸಂಭಾವ್ಯ ಅಭ್ಯರ್ಥಿಗಳ ಹೆಸರು ಕೂಡ ವೈರಲ್ ಆಗುತ್ತಿದೆ. ಅದರಂತೆ ತೆಲುಗು ಜ್ಯೋತಿಷಿ ವೇಣುಸ್ವಾಮಿ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಸ್ಟಾರ್​ಗಳ ಹೆಸರಿದೆ. ಈ ಬಾರಿಯ ಬಿಗ್​ಬಾಸ್​ಗೆ ಮೂಲತಃ ಕನ್ನಡದವರಾದ ಯಶ್ಮಿ ಗೌಡ ಹಾಗೂ ತೇಜಸ್ವಿನಿ ಗೌಡ ಅವರು ಕಾಲಿಡಲಿದ್ದಾರಂತೆ. ಸದ್ಯ ಇದೇ ಸೆಪ್ಟೆಂಬರ್ 8ರಂದು ಯಾರೆಲ್ಲಾ ಬರಲಿದ್ದಾರೆ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment