/newsfirstlive-kannada/media/post_attachments/wp-content/uploads/2025/05/harini.jpg)
ಕನ್ನಡ ಕಿರುತೆರೆ ನಟಿ ಹರಿಣಿ ಎಲ್ಲರ ಮುಂದೆ ಸತ್ಯವೊಂದನ್ನು ರಿವೀಲ್​ ಮಾಡಿದ್ದಾರೆ. ನಟಿ ಹರಿಣಿ ಮಾತು ಕೇಳಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಫುಲ್ ಶಾಕ್​ ಆಗಿದ್ದಾರೆ.
ಹೌದು, ಸ್ಯಾಂಡಲ್​ವುಡ್​ ಸ್ಟಾರ್ ನಟ​ ಉಪೇಂದ್ರ ಅವರ ಮನೆಯ ಕಾಂಪೌಂಡ್​ಗೆ ಗುದ್ದಿ ಅಲ್ಲಿದ್ದ ಕುಂಡಗಳನ್ನು ಹಾಳು ಮಾಡಿದ್ದು ನಾನೇ ಅಂತ ಖುದ್ದು ನಟಿ ಹರಿಣಿ ಅವರೇ ಒಪ್ಪಿಕೊಂಡಿದ್ದಾರೆ. ಕಲರ್ಸ್​ ಕನ್ನಡದ ಮಜಾ ಟಾಕೀಸ್​ ವೇದಿಕೆ ಮೇಲೆ ಈ ಸತ್ಯವನ್ನು ರಿವೀಲ್​ ಮಾಡಿದ್ದಾರೆ. ಇದನ್ನು ಕೇಳುತ್ತಿದ್ದಂತೆ ನಟಿ ಪ್ರಿಯಾಂಕಾ ಉಪೇಂದ್ರ ಶಾಕ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/05/harini1.jpg)
ಈ ಬಾರಿಗೆ ಮಜಾ ಟಾಕೀಸ್​ಗೆ ನಟಿಯರಾದ ಪ್ರಿಯಾಂಕಾ ಉಪೇಂದ್ರ, ಹರಿಣಿ ಸೇರಿದಂತೆ ಕೆಲವು ನಟ-ನಟಿಯರು ಆಗಮಿಸಿದ್ದಾರೆ. ಇದೇ ವೇಳೆ ತಾವು ಕಾರು ಕಲಿಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿರುವ ಹರಿಣಿ, ಅಂದು ನಡೆದ ಘಟನೆಯನ್ನು ವಿವವರಿಸಿದ್ದಾರೆ. ಆಗ ಕಾರು ಕಲಿಯುವ ಹೊಸದರಲ್ಲಿ ನಟಿ ಅಪಘಾತವನ್ನು ಮಾಡಿದ್ದಾರೆ.
View this post on Instagram
ನಾನು ಆಗ ಕಾರು ಕಲೆಯುತ್ತಿದ್ದೆ. ಆಗ ನಟಿಯಿದ್ದ ಕಾರಿನ ಮುಂದೆ ದೊಡ್ಡದೊಂದು ಕಾರು ಬಂದುಬಿಟ್ಟಿದೆಯಂತೆ. ಆಗ ಭಯಪಟ್ಟು ಆಕ್ಸಿಲರೇಟರ್​ ತಿರುಗಿಸಿಬಿಟ್ಟೆ. ಅಲ್ಲಿಯೇ ಇದ್ದ ಮನೆಯೊಂದರ ಎದುರಿಗೆ ಇದ್ದ ಕುಂಡಗೆಳೆಲ್ಲಾ ಪುಡಿಪುಡಿಯಾದವು. ಕೊನೆಗೆ ನೋಡಿದ್ರೆ ಸೌಂಡ್​ ಕೇಳಿ ಮೇಲಿನಿಂದ ಉಪೇಂದ್ರ ಸರ್ ಬಂದರು. ಅದು ಉಪೇಂದ್ರ ಅವರ ಮನೆಯೆಂದು ಆಗ ಗೊತ್ತಾಯ್ತು. ನನಗೆ ತುಂಬಾ ಭಯವಾಗಿತ್ತು. ಆಗ ಉಪೇಂದ್ರ ಅವರು ನನ್ನನ್ನು ನೋಡಿ, ಏನ್ರೀ ನೀವಾ? ಕಾರನ್ನು ಇಲ್ಲೆಲ್ಲಾ ಬಂದು ಕಲೀತಾರಾ? ಯಾವುದಾದ್ರೂ ಗ್ರೌಂಡ್​ಗೆ ಹೋಗಬಾರದಾ ಎಂದು ಕೇಳಿದ್ರು. ಆಗ ನಾನು ತಪ್ಪಾಯ್ತು ಸರ್, ನಾನು ಎಲ್ಲಾ ರಿಪೇರಿ ಮಾಡಿ ಕೊಡ್ತೀನಿ ಸರ್​ ಅಂತ ಹೇಳ್ದೆ, ಅದಕ್ಕೆ ಅವರು ಏನೂ ಬೇಡ ಮೊದಲು ನೀವು ಇಲ್ಲಿಂದ ಹೋಗಿ ಅಂತ ಹೇಳಿದ್ರು. ಕೊನೆಗೆ ಉಪೇಂದ್ರ, ಅವರ ಮಗ, ನನ್ನ ಮಗ ಎಲ್ಲಾ ಸೇರಿ ಕಾರನ್ನು ತಳ್ಳಿಕೊಂಡು ಹೊರಕ್ಕೆ ತೆಗೆದರು ಎಂದು ವಿವರಿಸಿದ್ದಾರೆ. ಪ್ರಿಯಾಂಕಾ ಹಾಗಿದ್ರೆ ಅಂದು ಅಪಘಾತ ಮಾಡಿದ್ದು ನೀವಾ ಎಂದು ಶಾಕ್​ ಆಗಿ ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us