Advertisment

ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾದ ನಟಿ ಹರಿಪ್ರಿಯ; ಸೀರಿಯಲ್ಲಾ.. ರಿಯಾಲಿಟಿ ಶೋನಾ?

author-image
Veena Gangani
Updated On
ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾದ ನಟಿ ಹರಿಪ್ರಿಯ; ಸೀರಿಯಲ್ಲಾ.. ರಿಯಾಲಿಟಿ ಶೋನಾ?
Advertisment
  • ಹೆಚ್ಚೆಚ್ಚು ಕಲಾವಿದರು ವೀಕ್ಷಕರಿಗೆ ಹತ್ತಿರ ಆಗುವುದೇ ಸೀರಿಯಲ್​ಗಳಿಂದ
  • ಸ್ಟಾರ್​ ನಟ ನಟಿಯರೇ ಸೀರಿಯಲ್​ ಲೋಕಕ್ಕೆ ಎಂಟ್ರಿ ಕೊಟ್ಟರೆ ಹೇಗಿರುತ್ತೆ?
  • ಶೀಘ್ರದಲ್ಲೇ ಅಹನಾ ಆಗಿ ಪ್ರತಿದಿನ ನಿಮ್ಮ ಮನೆಗೆ ಬರಲಿದ್ದಾರೆ ಖ್ಯಾತ ನಟಿ

ಬೆಂಗಳೂರು: ಈಗಾಗಲೇ ಕಿರುತೆರೆಯಲ್ಲಿ ಹೊಸ, ಹೊಸ ಬಗೆಯ ವಿಭಿನ್ನ ಕಥೆಗಳುಳ್ಳ ಧಾರಾವಾಹಿ ರೂಪ ಪಡೆದುಕೊಂಡಿವೆ. ವೀಕ್ಷಕರು ಕೂಡ ಇಷ್ಟಪಟ್ಟು ಸೀರಿಯಲ್​ಗಳನ್ನ ನೋಡುತ್ತಿದ್ದಾರೆ. ನಿಜ ಹೇಳುವುದಾದ್ರೆ ಸಿನಿಮಾಗಳಿಗಿಂತ ಹೆಚ್ಚು ಕಲಾವಿದರು ವೀಕ್ಷಕರಿಗೆ ಹತ್ತಿರ ಆಗೋದು ಸೀರಿಯಲ್​ ಮೂಲಕವೇ. ಬೇಗ ಜನಕ್ಕೆ ಕನೆಕ್ಟ್​ ಆಗೋ ಅದ್ಭುತವಾದ ಪ್ಲಾಟ್​ ಫಾರ್ಮ್​ ಧಾರಾವಾಹಿ. ಚಂದನವನದ ಬ್ಯೂಟಿ ಹರಿಪ್ರಿಯಾ ಸೀರಿಯಲ್​ಗೆ ಎಂಟ್ರಿ ಕೊಡುತ್ತಿದ್ದಾರೆ.

Advertisment

publive-image

ಇದನ್ನೂ ಓದಿ:ರಣ ಬಿಸಿಲಿಗೆ ತೆಂಗಿನ ಮರದ ತುದಿಯಲ್ಲೇ ಪ್ರಜ್ಞೆತಪ್ಪಿದ ಯುವಕ.. ಆತನನ್ನು ಕಾಪಾಡಲು ಅವರೇ ಬರಬೇಕಾಯ್ತು!

ಸಾಮಾನ್ಯವಾಗಿ ಕಲಾವಿದರು ಸೀರಿಯಲ್​​ನಿಂದ ಸಿನಿಮಾಗೆ ಎಂಟ್ರಿ ಕೊಟ್ಟಿದ್ದನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಬೆಳ್ಳಿತೆರೆಯಿಂದ ಕಿರುತೆರೆ ಲೋಕಕ್ಕೆ ಬರುವುದು ಅಚ್ಚರಿಯ ವಿಚಾರ. ಅದರಲ್ಲೂ ಸ್ಟಾರ್​ ನಟ ನಟಿಯರೇ ಸೀರಿಯಲ್​ ಲೋಕಕ್ಕೆ ಎಂಟ್ರಿ ಕೊಟ್ಟರೆ ಹೇಗಿರುತ್ತೆ. ಇದೀಗ ಸ್ಯಾಂಡಲ್​ವುಡ್​​ ಖ್ಯಾತ ನಟಿ ಹರಿಪ್ರಿಯಾ ಸೀರಿಯಲ್​ಗೆ ಬರ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಹೌದು, ಕಲಾವಿದರಿಗೆ ಯಾವ ಮಾಧ್ಯಮ ಆದ್ರೇ ಏನೂ ಉತ್ತಮ ಪಾತ್ರ ಸಿಕ್ಕಿದ್ದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ ಅನ್ಸುತ್ತೆ. ಸದ್ಯ ಅಂತಹದ್ದೇ ಒಂದು ಪವರ್​ಫುಲ್​ ಪಾತ್ರವನ್ನ ನಿಭಾಯಿಸಲಿದ್ದಾರೆ ನಟಿ ಹರಿಪ್ರಿಯಾ.

publive-image

ಅಹನಾ ಅಗ್ನಿಹೋತ್ರಿ ಎಂಬ ಹೊಸ ಸೀರಿಯಲ್​ಗೆ ನಾಯಕಿ ಆಗಿ ಬಣ್ಣ ಹಚ್ಚಿದ್ದಾರೆ. ಖಡಕ್​ ಡೈಲಾಗ್​, ಖದರ್​ ಆಗಿರೋ ಲಾಯರ್​ ಪಾತ್ರ ಅಹನಾ. ಡಿಫ್ರೆಂಟ್​ ಸ್ಟೋರಿ ಲೈನ್​ ಇದ್ದು, ಅಹನಾ ಪಾತ್ರದ ಮೂಲಕ ಹರಿಪ್ರಿಯಾ ಸೀರಿಯಲ್​ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು, ಈ ಧಾರಾವಾಹಿ ಸ್ಟಾರ್​ ಜಲ್ಸಾ ವಾಹಿನಿಯ ಬೆಂಗಾಲಿ ಭಾಷೆಯ ರಿಮೇಕ್​ ಕಥೆ ಆಗಿದ್ದು, ಗೀತಾ ಎಲ್​ಎಲ್​ಬಿ ಎಂಬ ಟೈಟಲ್​ನೊಂದಿಗೆ ಯಶಸ್ವಿಯಾಗಿ ಬೆಂಗಾಲಿ ಪ್ರೇಕ್ಷಕರನ್ನ ರಂಜಿಸುತ್ತಿದೆ. ಅದೇ ಕಥೆಯನ್ನ ಕನ್ನಡದಲ್ಲಿ ಅಹನಾ ಅಗ್ನಿಹೋತ್ರಿ ಎಂಬ ಹೆಸರಿನಲ್ಲಿ ತರಲಾಗುತ್ತಿದೆ.

Advertisment

ಸ್ಟಾರ್​ ನಟಿ ಹರಿಪ್ರಿಯಾ ಅವರಿಗೆ ನಾಯಕರಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕೂತಹಲವಿದ್ದು, ಅಹನಾ ವೀಕ್ಷಕರ ಮನಸ್ಸು ಗೆಲುವುದರಲ್ಲಿ ಡೌಟ್​​ ಇಲ್ಲ ಅನಿಸುತ್ತದೆ. ಈಗಾಗಲೇ ನಮ್ಮ ಲಚ್ಚಿ ಸೀರಿಯಲ್​ ಮುಕ್ತಾಯವಾಗಿದ್ದು, ಅದೇ ಸ್ಲಾಟ್​ನಲ್ಲಿ ಅಹನಾ ಅಗ್ನಿಹೋತ್ರಿ ಸೀರಿಯಲ್​ ತರೋ ಪ್ಲ್ಯಾನ್​ ನಡೆಯುತ್ತಿರಬಹುದು. ಒಟ್ಟಿನಲ್ಲಿ ನಟಿ ಹರಿಪ್ರಿಯಾ ಅವರು ಶೀಘ್ರದಲ್ಲೇ ಅಹನಾ ಆಗಿ ಪ್ರತಿದಿನ ನಿಮ್ಮ ಮನೆಗೆ ಬರಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment