‘ರಶ್ಮಿಕಾ ಚಿಕ್ಕ ಹುಡುಗಿ.. ಗೊತ್ತಿಲ್ಲದೇ ತಪ್ಪು ಮಾಡಿದ್ದಾರೆ’; ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಹೇಳಿದ್ದೇನು?

author-image
Veena Gangani
Updated On
‘ರಶ್ಮಿಕಾ ಚಿಕ್ಕ ಹುಡುಗಿ.. ಗೊತ್ತಿಲ್ಲದೇ ತಪ್ಪು ಮಾಡಿದ್ದಾರೆ’; ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಹೇಳಿದ್ದೇನು?
Advertisment
  • ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ರಶ್ಮಿಕಾ ಮಂದಣ್ಣ
  • ಕೊಡವ ಸಮುದಾಯದಿಂದ ಸಿನಿಮಾಗೆ ಬಂದವರಲ್ಲಿ ನಾನೇ ಮೊದಲು!
  • ಸಂದರ್ಶನದಲ್ಲಿ ಮಾತಾಡಿದ್ದಾಗ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು..?

ನ್ಯಾಷನಲ್​​ ಕ್ರಶ್ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಸ್ಯಾಂಡಲ್​ವುಡ್​ನಿಂದ ಟಾಲಿವುಡ್‌, ಟಾಲಿವುಡ್​ನಿಂದ ಬಾಲಿವುಡ್‌.. ಹೀಗೆ ಒಂದಾದ ನಂತರ ಒಂದರಂತೆ ಬಹುಭಾಷೆಗಳಲ್ಲಿ ಸರಣಿ ಸಿನಿಮಾಗಳನ್ನು ಮಾಡುತ್ತಾ ತಮ್ಮ ವೃತ್ತಿಜೀವನದಲ್ಲಿ ಸಖತ್​​ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.

ಕೊಡವ ಸಮುದಾಯದಿಂದ ಸಿನಿಮಾಗೆ ಬಂದವರಲ್ಲಿ ನಾನೇ ಮೊದಲು ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೀಡಾಗುತ್ತಿದ್ದಾರೆ. ನಟಿ ರಶ್ಮಿಕಾ ಮಾತಾಡಿರೋ ವಿಡಿಯೋ ನೋಡಿದ ನೆಟ್ಟಿಗರು ಹಾಗಾದ್ರೆ ನಟಿ ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ತಪಸ್ವಿನಿ ಪೂಣಚ್ಚ, ಶುಭ್ರ ಅಯ್ಯಪ್ಪ ಯಾವ ಸಮುದಾಯದವರು ಅಂತಾ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್.. ರಶ್ಮಿಕಾ ಮಂದಣ್ಣ ಎಡವಟ್ಟು​!​

publive-image

ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಮಾತಾಡಿದ್ದಾರೆ. ಇದನ್ನೂ ವಿವಾದ ಅಂತ ಹೇಳೋದಿಲ್ಲ. ಯಾವುದೋ ಸಂದರ್ಶನವೊಂದರಲ್ಲಿ ಗೊತ್ತಿಲ್ಲದೇ ಮಾತಾಡಿದ್ದಾರೆ ಅನ್ಸುತ್ತೆ. ತೆಲುಗು ಹಾಗೂ ಹಿಂದಿ ಇಂಡಸ್ಟ್ರಿಯಲ್ಲಿ ನಾನು ಹೆಸರು ಮಾಡಿದ್ದೇನೆ ಅನ್ನೋ ಅರ್ಥದಲ್ಲಿ ಹೀಗೆ ಹೇಳಿರಬಹುದು. ಅದೇ ಮೇಳೆ ನಾನೇ ಫಸ್ಟ್​ ಅನ್ನೋದು ಬಂದಿದೆ. ಹಾಗೇ ನೋಡೋದಕ್ಕೆ ಹೋದ್ರೇ ನಾವು ಆಗ ಹುಟ್ಟೇ ಇರಲಿಲ್ಲ. ಆಗಿನ ಕಾಲದಲ್ಲೇ ಡಾ. ರಾಜ್​ ಕುಮಾರ್​ ಅವರ ಜೊತೆಗೆ ಕೊಡಗಿನ ಶಶಿಕಲಾ ನಟನೆ ಮಾಡಿದ್ದಾರೆ ಎಂದರು.

ಇನ್ನೂ, ಮಾತನ್ನು ಮುಂದುವರೆಸಿದ ಅವರು, ನಾವೆಲ್ಲ ನಟಿ ಪ್ರೇಮಾ ಅವರನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಅವರು ಎಂತಹ ಅದ್ಭುತ ನಟಿ. ಸಿನಿಮಾನೇ ಅವರಿಂದ ನಡೆಯುತ್ತಾ ಇತ್ತು. ಅವರು ಸಿನಿಮಾದಲ್ಲಿ ಇದಾರೆ ಎಂದರೆ ಸಖತ್​ ಬ್ಯುಸಿನೆಸ್ ಆಗೋದು. ಈಗಿನ ಕಾಲದಲ್ಲಿ ಸಾಕಷ್ಟು ನಟಿಯರು ಕೊಡಗಿನವರಾಗಿದ್ದಾರೆ. ಆದ್ರೆ ಬಾಯ್ತಪ್ಪಿ ಹಾಗೇ ಹೇಳಿದ್ದಾರೆ ಅನ್ಸುತ್ತೆ. ನನಗೆ ರಶ್ಮಿಕಾ ಮಂದಣ್ಣ ಮೇಲೆ ತುಂಬಾ ಗೌರವ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮೂದಾಯಕ್ಕೆ ಹೆಸರನ್ನು ತಂದು ಕೊಟ್ಟಿದ್ದಾರೆ. ನಮಗೆ ರಶ್ಮಿಕಾ ಮಂದಣ್ಣ ಅವರ ಮೇಲೆ ಹೆಮ್ಮೆ ಇದೆ. ತುಂಬಾ ಹೆಸರು ಮಾಡಿದ್ದಾರೆ. ರಶ್ಮಿಕಾ ಗೊತ್ತಿಲ್ಲದೇ ತಪ್ಪು ಮಾಡಿರಬಹುದು. ಎಲ್ಲರೂ ಅವರನ್ನು ಕ್ಷಮಿಸೋಣ, ಚಿಕ್ಕ ಹುಡುಗಿ ಎಲ್ಲೋ ತಪ್ಪು ಮಾಡಿದ್ದಾರೆ.

publive-image

ರಶ್ಮಿಕಾ ಮಂದಣ್ಣ ಹೇಳಿದ್ದೇನು..?

ನನ್ನ ಮೊದಲ ಚೆಕ್ ಸಿಕ್ಕಾಗ, ಮನೆಯಲ್ಲಿ ಏನೆಲ್ಲಾ ಮಾತಾಡುತ್ತಿದ್ದರು ಅಂತ ನನಗೆ ನೆನಪಿದೆ. ಅದು ಸುಲಭವೂ ಆಗಿರಲಿಲ್ಲ. ಯಾಕಂದ್ರೆ ಕೂರ್ಗ್ ಸಮುದಾಯದಲ್ಲಿ, ಯಾರೂ ಸಿನಿಮಾ ಜಗತ್ತಿಗೆ ಬಂದಿರಲಿಲ್ಲ ಅಂತ ನನಗನಿಸುತ್ತೆ, ಇಡೀ ಸಮುದಾಯದಲ್ಲಿ ನಾನೇ ಮೊದಲು ಇಂಡಸ್ಟ್ರಿಗೆ ಬಂದಿದ್ದು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment