/newsfirstlive-kannada/media/post_attachments/wp-content/uploads/2025/02/sreeleela.jpg)
ಕನ್ನಡ, ತೆಲುಗು ಸಿನಿಮಾಗಳ ನಂತರ ಸ್ಯಾಂಡಲ್‌ವುಡ್ ಈ ನಟಿಯ ಲಕ್ ಬದಲಾಗಿದೆ. ಟಾಲಿವುಡ್ ಬಳಿಕ ಈ ಸ್ಟಾರ್ ನಟಿ ಬಾಲಿವುಡ್ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಕನ್ನಡ, ತೆಲುಗು ಬೆನ್ನಲ್ಲೇ ಈ ಕ್ಯೂಟ್ ನಟಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ನಟಿಯಾಗಲಿದ್ದಾರೆ. ‘ಡೈಲಾರ್’ ಚಿತ್ರದಲ್ಲಿ ಕನ್ನಡ ನಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ಇದನ್ನೂ ಓದಿ:ಕಬಿನಿಯಲ್ಲಿ ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ಮೋಜು ಮಸ್ತಿ.. ನಟಿ ರಕ್ಷಿತಾ ಪ್ರೇಮ್ ಕ್ಯೂಟ್ ವಿಡಿಯೋ ಇಲ್ಲಿದೆ!
ಹೌದು, ಅವರು ಬೇರೆ ಯಾರು ಅಲ್ಲ ಅವರೇ ಕಿಸ್ ಕುವರಿ ನಟಿ ಶ್ರೀಲೀಲಾ. ಸಿನಿಮಾ ರಂಗದಲ್ಲಿ ಒಳ್ಳೆಯ ಚಾನ್ಸ್ ಸಿಗೋದಕ್ಕೂ ಅದೃಷ್ಟ ಬೇಕು. ಅವಕಾಶ ಸಿಕ್ಕ ಮೇಲೆ ಒಳ್ಳೆ ಒಳ್ಳೆಯ ಪಾತ್ರಗಳು ಸಿಗಬೇಕು. ಸಿಕ್ಕ ಪಾತ್ರಗಳು ಗೆಲ್ಲಬೇಕು, ಸಾಲು ಸಾಲು ಪ್ರಶಂಸೆ ಪ್ಲಸ್ ಅವಕಾಶ ಎಲ್ಲವೂ ಇದ್ದರೆ ಮಾತ್ರ ಈ ಬಣ್ಣದ ಲೋಕದಲ್ಲಿ ಕಲಾವಿದರಿಗೆ ಒಂದು ಬೆಲೆ ಬದುಕಿಗೊಂದು ಕಳೆ. ಭರಾಟೆ ಬ್ಯೂಟಿ, ಕಿಸ್ ಕುವರಿ ಶ್ರೀಲೀಲಾಗೆ ಈಗ ಸಾಲು ಸಾಲು ಅಪ್ಪಟ್ಟ ಅವಕಾಶ ಪ್ಲಸ್ ಅಸಲಿ ಅದೃಷ್ಟ ಎಲ್ಲವೂ ಒಲಿದು-ನಲಿದು ಬರುತ್ತಿವೆ.
ಅಂದು ರಾಕಿಂಗ್ ಸ್ಟಾರ್ ಯಶ್ ಹೇಳಿದಂಗೆ ಶ್ರೀಲೀಲಾ ಇಡೀ ಚಿತ್ರರಂಗಗಳಲ್ಲಿ ರೌಂಡ್ ಹೊಡೆಯೋಕ್ಕೆ ಸಖತ್ ಆಗಿಯೇ ಸಜ್ಜಾಗಿದ್ದಾರೆ. ಪಕ್ಕದ ಟಾಲಿವುಡ್ನಲ್ಲಿ ಬೈಟುಲವ್ ಪ್ಯಾರಿಗೆ ದಿಲ್ಕಿ ಸ್ಯಾಂಡಲ್ವುಡ್ನ ಈ ಸುಂದರಿಗೆ ಪಕ್ಕದ ಟಾಲಿವುಡ್ನಲ್ಲಿ ಸಖತ್ ಡಿಮ್ಯಾಂಡ್ ಶುರುವಾಗಿದೆ. ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ ಕಿಸ್ ಕುವರಿ ಶ್ರೀಲೀಲಾ. ಹಗಲು ರಾತ್ರಿ ಬಣ್ಣ, ಬಣ್ಣದ ಪಾತ್ರದಲ್ಲಿ ಮಿಂದೇಳುತ್ತಿದ್ದಾರೆ. ತೆಲುಗಿನ ಟಾಪ್ ಮೋಸ್ಟ್ ಆಲ್ ಸ್ಟಾರ್ಗಳ ಜೊತೆ ಶ್ರೀಲೀಲಾ ಬಣ್ಣ ಹಚ್ಚಿ ಬಳುಕುತ್ತಿದ್ದಾರೆ. ಒಳ್ಳೆ ಒಳ್ಳೆಯ ಪಾತ್ರಗಳ ಮೂಲಕ ತಳುಕುತ್ತಿದ್ದಾರೆ.
ಟಾಲಿವುಡ್ ಲೆಂಜೆಂಡ್ ಬಾಲಯ್ಯ ಜೊತೆ ವಿಜಯ್ ದೇವರಕೊಂಡ ಜೊತೆ ಮಹೇಶ್ ಬಾಬು ಜೊತೆ ರಾಮ್ ಪೋತಿನೇನಿ ಹಾಗೂ ಇನ್ನೂ ಅನೌನ್ಸ್ ಆಗದ ಹಲವು ಸಿನಿಮಾಗಳಲ್ಲಿ ಕಿಸ್ ಕುವರಿ ಕರಾಮತ್ ತೋರುತ್ತಿದ್ದಾರೆ. ಇತ್ತೀಚೆಗಷ್ಟೇ ಶ್ರೀಲೀಲಾ ಅವರು ಅಲ್ಲು ಅರ್ಜುನ್ ಜೊತೆ ‘ಕಿಸ್ಸಿಕ್’ ಸಾಂಗ್ಗೆ ಹೆಜ್ಜೆ ಹಾಕಿದ್ದರು. ‘ಪುಷ್ಪ 2’ ಎಟಂ ಸಾಂಗ್ಗೆ ಡ್ಯಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದರು ನಟಿ ಶ್ರೀಲೀಲಾ. ಒಟ್ಟಿನಲ್ಲಿ ಶ್ರೀಲೀಲಾ ಟಾಲಿವುಡ್ ಸಿನಿಮಾರಂಗದಲ್ಲಿ ಸಖತ್ ಬ್ಯೂಸಿ ಯಾಗಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲೂ ನಟಿಸೋದಕ್ಕೆ ಸಜ್ಜಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ