/newsfirstlive-kannada/media/post_attachments/wp-content/uploads/2025/07/kaustubha-mani.jpg)
ನನ್ನರಸಿ ರಾಧೆ ಸೀರಿಯಲ್ ಮೂಲಕ ಅತೀ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡ ನಟಿ ಕೌಸ್ತುಭ ಮಣಿ ಸಖತ್ ಖುಷಿಯಲ್ಲಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೈಲಿನಲ್ಲಿ ಭಾರೀ ಅನಾಹುತ.. ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಟ್ರೈನು.. VIDEO
ಆಗಾಗ ಪತಿ ಜೊತೆಗೆ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ಕೌಸ್ತುಭ ಮಣಿ ಬೇಬಿ ಬಂಪ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಕಿರುತೆರೆಯ ಜನಪ್ರಿಯ ಸೀರಿಯಲ್ ಎಂದರೆ ಅದು ನನ್ನರಸಿ ರಾಧೆ. ಇದೇ ಧಾರಾವಾಹಿ ಮೂಲಕ ಅತೀ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು.
ಇದೀಗ ನಟಿ ಕೌಸ್ತುಭ ಮಣಿ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ. ಈ ಬಗ್ಗೆ ಖುದ್ದು ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಇದೀಗ ನಟಿ ಮತ್ತೊಂದು ಬೇಬಿ ಬಂಪ್ ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಗುಲಾಬಿ ಬಣ್ಣದ ಲಾಂಗ್ ಸೀರೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅದೇ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಶೂಟ್ ನೋಡಿದ ಅಭಿಮಾನಿಗಳು, ಅವ್ನು ನಿಜವಾಗ್ಲೂ ಅದೃಷ್ಟ ವಂತ, ನನರಸಿ ರಾಧೆ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
View this post on Instagram
ಇನ್ನೂ, ಕಳೆದ ವರ್ಷ ಏಪ್ರಿಲ್‌ನಲ್ಲಿ ಸಿದ್ಧಾಂತ್ ಜೊತೆ ಕೌಸ್ತುಭ ಮಣಿ ಅದ್ಧೂರಿಯಾಗಿ ಮದುವೆಯಾದರು. ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆ ಕೌಸ್ತುಭ ಕೂಡ ನಟಿಸಿದ್ದಾರೆ. ಈ ಚಿತ್ರದಲ್ಲಿ ಆಗಸ್ಟ್ 15ರಂದು ಬಹುಭಾಷೆಗಳಲ್ಲಿ ’45’ ಚಿತ್ರ ರಿಲೀಸ್ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ