/newsfirstlive-kannada/media/post_attachments/wp-content/uploads/2025/03/kavya-gowda1.jpg)
ಕನ್ನಡದ ಕಿರುತೆರೆ ನಟಿ ಕಾವ್ಯಾ ಗೌಡ ಮಗಳ ಆರೈಕೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಶುಭ ವಿವಾಹ, ಗಾಂಧಾರಿ, ರಾಧಾ ರಮಣ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಕಾವ್ಯಾ ಗೌಡ.
ಇದನ್ನೂ ಓದಿ: ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಪೈ ಸರ್‌ಪ್ರೈಸ್ ಎಂಟ್ರಿ; ಅಸಲಿಗೆ ಬಂದಿದ್ದು ಯಾರಿಗೋಸ್ಕರ ಗೊತ್ತಾ?
ಸದ್ಯ ಅಭಿನಯದಿಂದ ಬ್ರೇಕ್ ತಗೊಂಡಿರುವ ಕಾವ್ಯಾ ಗೌಡ ಫ್ಯಾಮಿಲಿ ಜೊತೆ ಸಂತಸದ ಸಮಯ ಕಳೆಯುತ್ತಿದ್ದಾರೆ. ಕಳೆದ ಜನವರಿ 22ರಂದು ಮುದ್ದಾದ ಹೆಣ್ಣು ಮಗುವಿಗೆ ಕಾವ್ಯಾ ಗೌಡ ಜನ್ಮ ನೀಡಿದರು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪ್ರತಿಷ್ಠಾಪನೆ ದಿನವೇ ಮಗುವನ್ನು ವೆಲ್ಕಮ್ ಮಾಡಿ, ಮಗಳಿಗೆ ಪ್ರೀತಿಯಿಂದ ಸಿಯಾ ಎಂದು ಕರೆದಿದ್ದರು. ಕಿರುತೆರೆ ನಟಿ ಕಾವ್ಯಾ ಗೌಡ ಆಗಾಗ ಮಗಳ ಜೊತೆಗೆ ಪ್ಯಾರಿಸ್ಗೆ ಹೋಗಿ ಬರುತ್ತಾ ಇರುತ್ತಾರೆ.
ಇದರ ಮಧ್ಯೆ ಕಾವ್ಯಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಒಂದು ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮಗಳು ಸಿಯಾ ತುಂಟಾಟ ಮಾಡುತ್ತಿದ್ದಾಳೆ. ಇದೇ ವಿಡಿಯೋ ಜೊತೆಗೆ ನನಗೆ ಮಗಳು ಹುಟ್ಟಿದ್ದಷ್ಟೇ ಅಲ್ಲ, ನನ್ನ ಜೀವನದುದ್ದಕ್ಕೂ ಸಂಗಾತಿಯಾಗಿರುವ ಅತ್ಯಂತ ತಂಪಾದ ಪುಟ್ಟ ಆತ್ಮ ಸಿಕ್ಕಿತು. ಆ ಅಪ್ಪುಗೆ ಅದು ಎಲ್ಲವನ್ನೂ ಹೇಳುತ್ತದೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಗಳ ಕ್ಯೂಟ್ನೆಸ್ ನೋಡಿದ ಅಭಿಮಾನಿಗಳು ಸಖತ್ ಕ್ಯೂಟ್, ಮುದ್ದಾದ ಮಗಳು ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
View this post on Instagram
2021 ಡಿಸೆಂಬರ್ 1ರಂದು ನಟಿ ಕಾವ್ಯಾ ಗೌಡ ಅವರು ಉದ್ಯಮಿ ಸೋಮಶೇಖರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಬಳಿಕ ನಟನೆಯಿಂದ ಕಾವ್ಯಾ ಗೌಡ ದೂರ ಉಳಿದುಕೊಂಡಿದ್ದರು. ಈಗ ಮುದ್ದಾದ ಮಗಳ ಜೊತೆಗೆ ದೇಶ ವಿದೇಶ ಸುತ್ತುತ್ತಿದ್ದಾರೆ ಸ್ಟಾರ್ ನಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ