/newsfirstlive-kannada/media/post_attachments/wp-content/uploads/2024/07/milana.jpg)
ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಿವರಾತ್ರಿ ಹಬ್ಬದ ದಿನವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫ್ಯಾನ್ಸ್​ಗಳಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಬಿಗ್‌ಬಾಸ್ ಸೀಸನ್ 11ಗೆ ಭರ್ಜರಿ ತಯಾರಿ; ಪಾರು ಖ್ಯಾತಿಯ ಮೋಕ್ಷಿತಾ ಹೋಗೋದು ಪಕ್ಕಾನಾ?
ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್​ವುಡ್ ನಟಿ ಮಿಲನಾ ನಾಗರಾಜ್ ಹೊಸ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು ನಟಿ ಮಿಲನಾ ನಾಗರಾಜ್​ ಸುಂದರವಾದ ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಮಿಲನಾ ನಾಗರಾಜ್​ ಹಾಗೂ ಪತಿ ಡಾರ್ಲಿಂಗ್​ ಕೃಷ್ಣ ಅವರು​ ಕಾಣಿಸಿಕೊಂಡಿದ್ದಾರೆ.
View this post on Instagram
ಕೆಲವು ದಿನಗಳ ಹಿಂದೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ಬೇಬಿ ಮೂನ್ ಎಂಜಾಯ್ ಮಾಡಲು ವಿದೇಶಕ್ಕೆ ಹೋಗಿದ್ದರು. ಬಾಲಿಯಲ್ಲಿ ಸಖತ್​ ಎಂಜಾಯ್​ ಮಾಡಿರೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ನಟಿಯ ಬೇಬಿ ಬಂಪ್ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ. ಈ ಫೋಟೋಸ್​ ನೋಡಿದ ಅಭಿಮಾನಿಗಳು, ನಿಧಿಮಾ, ಸೂಪರ್​, ಲುಕಿಂಗ್​ ಕ್ಯೂಟ್, ಎಲ್ಲಾ ಒಳ್ಳೆಯದು ಆಗಲಿ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ, ನೂರು ವರ್ಷ ಕಾಲ ಸುಖವಾಗಿ ನೆಮ್ಮದಿಯಿಂದ ಬಾಳಿ, ಒಳ್ಳೆಯದಾಗಲಿ ಪುಟ್ಟ ಕಂದಮ್ಮನಿಗೆ ಅಂತ ಕಾಮೆಂಟ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ