/newsfirstlive-kannada/media/post_attachments/wp-content/uploads/2025/07/mouna.jpg)
ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಫೇವರೆಟ್​ ಆಗಿ ಉಳಿದುಕೊಂಡಿದೆ ರಾಮಾಚಾರಿ ಸೀರಿಯಲ್. ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಸದ್ಯ ಚಾರು ಈಗ ಗರ್ಭಿಣಿಯಾಗಿದ್ದಾರೆ. ಇದೇ ಕಥೆಯಲ್ಲಿ ಸ್ಟೋರಿ ಸಾಗುತ್ತಿದೆ.
ಇದನ್ನೂ ಓದಿ:ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್.. ರಶ್ಮಿಕಾ ಮಂದಣ್ಣ ಎಡವಟ್ಟು​!​
ರಾಮಾಚಾರಿ ಸೀರಿಯಲ್​ ಮೂಲಕ ದೊಡ್ಡ ಮಟ್ಟದಲ್ಲಿ ನಟಿ ಮೌನ ಗುಡ್ಡೆಮನೆ ಮಿಂಚುತ್ತಿದ್ದಾರೆ. ಇದೀಗ ನಟಿ ಮೈಜುಮ್​ ಎನಿಸುವ ವಿಡಿಯೋವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಮೌನ ನಟನೆಗೆ ಜೈ ಎನ್ನುತ್ತಿದ್ದಾರೆ.
ಹೌದು, ಸೋಷಿಯಲ್​ ಮೀಡಿಯಾದಲ್ಲಿ ಸದಾ ಆಕ್ಟೀವ್​ ಆಗಿರೋ ಮೌನ ಹೊಸ ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಯಾವಾಗಲೂ ಹಾಟ್​ ಲುಕ್​ನಲ್ಲಿ, ಹಾಗೂ ಸೀರೆಯಲ್ಲಿ ಕ್ಯೂಟ್​ ಆಗಿ ಕಾಣಿಸಿಕೊಳ್ಳುವ ಮೌನ ಈಗ ಅರುಂಧತಿ ಸಿನಿಮಾದಲ್ಲಿ ನಟಿಸಿರೋ ಅನುಷ್ಕಾ ಶೆಟ್ಟಿ ಲುಕ್ ಅನ್ನು ರೀ ಕ್ರಿಯೇಟ್ ಮಾಡಿದ್ದಾರೆ.
View this post on Instagram
ನಟಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಮೌನ್​ ಥೇಟ್​ ಅನುಷ್ಕಾ ಶೆಟ್ಟಿಯಂತೆ ಕಾಣಿಸಿಕೊಂಡಿದ್ದಾರೆ. ಮೌನ ಲುಕ್​, ವಾಕ್​, ಸ್ಟೈಲ್ ಎಲ್ಲವೂ ಅನುಷ್ಕಾ ಶೆಟ್ಟಿ ಹಾಗೇ ರೆಡಿಯಾಗಿ ವಿಡಿಯೋ ಶೂಟ್ ಮಾಡಿಸಿದ್ದಾರೆ. ಸದ್ಯ ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೇ ಈ ತೆರೆ ಹಿಂದೆ ಶೂಟ್​ ಮಾಡಿರೋ ವಿಡಿಯೋವನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್​, ಅಬ್ಬಬ್ಬಾ ಬೆಂಕಿ ಆಕ್ಟಿಂಗ್ ಮೌನ ಅಮೇಜಿಂಗ್, ಇದಪ್ಪ ನಮ್ಮ ಚಾರು ಅಂದ್ರೆ ವಾರೆವ್ವಾ ಎಂಥಾ ಆಕ್ಟಿಂಗ್ ಅಕ್ಕಾ, ಯಾವುದೇ ಪಾತ್ರ ಕೊಟ್ರು ತುಂಬಾ ಚೆನ್ನಾಗಿ ಅಭಿನಯ ಮಾಡ್ತೀಯಾ ಮುದ್ದು ಮುದ್ದಾದ ಮೌನ ಒಳ್ಳೆಯದಾಗಲಿ ಇನ್ನು ಒಳ್ಳೊಳ್ಳೆ ಸಿನಿಮಾಗಳಲ್ಲಿ ಅವಕಾಶ ಸಿಗಲಿ ಎಂದು ಕಾಮೆಂಟ್ಸ್​ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ