/newsfirstlive-kannada/media/post_attachments/wp-content/uploads/2024/01/namrutha-3.jpg)
ಕನ್ನಡದ ಕಿರುತೆರೆ ನಟಿ, ಬಿಗ್​ಬಾಸ್​ ಸೀಸನ್​ 10ರ ಮಾಜಿ ಸ್ಪರ್ಧಿ ನಮ್ರತಾ ಗೌಡ ಗರಂ ಆಗಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಕೆಂಡ ಕಾರಿದ್ದಾರೆ. ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರಲ್ಲಿ ಸಖತ್​ ಮಿಂಚಿದ್ದರು ನಮ್ರತಾ ಗೌಡ.
/newsfirstlive-kannada/media/post_attachments/wp-content/uploads/2024/09/NAMRUTHA-GOWDA-1.jpg)
ಬಿಗ್​ಬಾಸ್​ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಆದರೆ ಇದೀಗ ಕೆಲವರ ವಿರುದ್ಧ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಂಡು ಕೆಂಡ ಕಾರಿದ್ದಾರೆ. ಕನ್ನಡ ಕಿರುತೆರೆಯ ನಟಿ ನಮ್ರತಾ ಗೌಡ ಬಗ್ಗೆ ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ಪೋಸ್ಟ್ ಹಾಗೂ ಕಾಮೆಂಟ್‌ಗಳು ಹೆಚ್ಚಾಗಿದ್ದವು. ಇದರಿಂದ ಬೇಸರಗೊಂಡ ನಟಿ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಬರೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/NAMRUTHA2-1.jpg)
ನಾನು ಯಾವಾಗಲೂ ಪಾಲಿಸುವುದು ಒಂದೇ, ನೆಗೆಟಿವ್ ಜನರಿಗೆ ನಾನು ಪ್ರಿತಿಕ್ರಿಯೆ ನೀಡುವುದು ಕಡಿಮೆ ಮಾಡಿದರೆ ಶಾಂತಿಯುತವಾಗಿ ಇರಲು ಸಾಧ್ಯ. ಆದರೆ ನಿಮ್ಮ ನಡುವಳಿಕೆ ಮತ್ತು ಆಲೋಚನೆಗಳು ಬೇರೆಯವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅವರಿಗೆ ತೊಂದರೆ ಆಗುವುದು ಗ್ಯಾರೆಂಟಿ ಎಂದು ನಾನು ನಂಬಿದ್ದೀನಿ. ಟ್ರೋಲಿಂಗ್ ಮತ್ತು ಅರ್ಥವಿಲ್ಲದ ವಿಚಾರಕ್ಕೆ ನನ್ನ ಬಗ್ಗೆ ಮಾತನಾಡುವುದನ್ನು ನಾನು ಗಮನಿಸಿಯೂ ಇಷ್ಟು ದಿನ ಸುಮ್ಮನಿದೆ.
ಇದನ್ನೂ ಓದಿ: ಲವ್ವರ್ ಜೊತೆ ಸೇರಿ ಗಂಡನ ಉಸಿರು ನಿಲ್ಲಿಸಿದ ಹೆಂಡತಿ.. ಸುಂದರಿ ಡ್ರಾಮಾ ಮಾಡಿ ಸಿಕ್ಕಿಬಿದ್ದಿದ್ದು ಹೇಗೆ?
View this post on Instagram
ಯಾರೋ ಗೊತ್ತಿಲ್ಲದ ವ್ಯಕ್ತಿಗಳು, ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಒಂದು ರಿಯಾಲಿಟಿ ಶೋಯಿಂದ ಬಂದ ಹೆಸರನ್ನು ಇಟ್ಟುಕೊಂಡು ಈಗಲೂ ನನ್ನನ್ನು ಮತ್ತೊಬ್ಬರ ಜೊತೆ ಹೊಲಿಸುತ್ತಿದ್ದಾರೆ. ಈ ವ್ಯಕ್ತಿಗಳಿಗೆ ನನ್ನ ಜೀವನ ಮತ್ತು ನನ್ನ ಜರ್ನಿ ಬಗ್ಗೆ ಏನೂ ಗೊತ್ತಿಲ್ಲ. ನೀವು ಗಮನ ಸೆಳೆಯುವ ಸಲುವಾಗ ಮತ್ತೊಬ್ಬರ ಹೆಸರು ಬಳಸಿಕೊಳ್ಳುವುದು ನಿಮ್ಮ ಸಣ್ಣತನವನ್ನು ತೋರಿಸುತ್ತದೆ. ನೀವು ಮಾಡುತ್ತಿರುವುದನ್ನು ನಂಬಿ ಜನರು ಮೋಸ ಹೋಗುತ್ತಿದ್ದಾರೆ. ಈ ರೀತಿ ಮಾಡುತ್ತಿರುವ ಜಡ್ಜ್‌ಮೆಂಟ್‌ಗಳಿಂದ ಕಷ್ಟ ಪಟ್ಟಿಕೊಂಡು ಕಟ್ಟಿರುವ ಸಾಮ್ರಾಜ್ಯವನ್ನು ಸುಲಭವಾಗಿ ನನ್ನ ಜೀವನವನ್ನು ಹಾಳು ಮಾಡುತ್ತಿದ್ದೀರಿ. ಬೇಸರದ ವಿಚಾರ ಏನೆಂದರೆ ಮೀಡಿಯಾ ಜರ್ನಲಿಸ್ಟ್‌ಗಳು ಸಹ ನನ್ನ ಹೆಸರನ್ನು ಬಳಸಿಕೊಂಡು ಲೇಬಲಿಂಗ್ ಮಾಡಿಕೊಂಡು ಜನರ ಆಲೋಚನೆಯನ್ನು ಬದಲಾಯಿಸುತ್ತಿದ್ದಾರೆ. ಈ ರೀತಿ ಮಾತುಗಳು ಮತ್ತೊಬ್ಬ ಮಹಿಳೆಯಿಂದ ಬರುತ್ತಿದೆ? ನಾವು ನಿಮ್ಮನ್ನು ಮನೋರಂಜಿಸಲು ಒಂದು ರಿಯಾಲಿಟಿ ಶೋಗೆ ಸಹಿ ಮಾಡುತ್ತೀವಿ. ನಿಮ್ಮ ಮುಂದೆ ಒಂದು ಗಂಟೆಗಳ ಕಾಲ ಇರುತ್ತೇವೆ ಅಂದ್ರೆ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಇಲ್ಲಸಲ್ಲದನ್ನು ಮಾತನಾಡಲು ನಿಮಗೆ ಹಕ್ಕಿಲ್ಲ. ಹೀಗೆ ಮಾಡುವ ಬದಲು ಪಾಸಿಟಿವ್ ಮತ್ತು ಒಳ್ಳೆಯ ವಿಚಾರಗಳನ್ನು ಹಂಚಿ ಸುಮ್ಮನೆ ನಮ್ಮ ಹೆಸರು ಬಳಸಿಕೊಂಡು ನಿಮ್ಮ ಕಂಟೆಂಟ್ ಮಾಡಿಕೊಳ್ಳಬೇಡಿ.
/newsfirstlive-kannada/media/post_attachments/wp-content/uploads/2024/05/namrutha3.jpg)
ಹೀಗೆ ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದನ್ನೇ ನೋಡಿದ ಅಭಿಮಾನಿಗಳು ಅಕ್ಕ ನೀವು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ, ಯಾರು ಏನೇ ಹೇಳಿದ್ರು ನಿಮ್ಮ ಮೇಲೆ ನಮಗೆಲ್ಲಾ ಗೌರವ ಇದೆ. ಈ ಸೋಷಿಯಲ್​ ಮೀಡಿಯಾ ಅನ್ನೋದೆ ಹಾಗೇ ಅಂತ ಕಾಮೆಂಟ್ಸ್​ ಹಾಕಿ ನಟಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ ನಟಿ ಕವಿತಾ ಗೌಡ ಕೂಡ ನಮ್ರತಾ ಗೌಡ ಅವರ ಪೋಸ್ಟ್​ಗೆ ರಿಯಾಕ್ಟ್​ ಮಾಡಿದ್ದಾರೆ. ಇಂದು ಟಿವಿ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಟಿಆರ್‌ಪಿಯ ಬಗ್ಗೆ ಹೆಚ್ಚು ಬದಲಾಗಿದೆ. ಅದು ಒಬ್ಬರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಜನರು ಗೌರವ ಮತ್ತು ಸಂಸ್ಕೃತಿಯನ್ನು ಮರೆತಿದ್ದಾರೆ. ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ಇದು ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ನಮ್ಮ ಮಾಧ್ಯಮಗಳು ತಮ್ಮ ಪ್ರಯೋಜನಕ್ಕಾಗಿ ವಿಷಯಗಳನ್ನು ಹೇಳುವ ಬದಲು ಜನರು ಮತ್ತು ಅವರ ಜೀವನವನ್ನು ಗೌರವಿಸಲು ಪ್ರಾರಂಭಿಸುತ್ತವೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us