ಬಂಗಾರದ ಹುಡುಗಿಯಾದ ಕರ್ಣನ ಹೀರೋಯಿನ್; ನಮ್ರತಾ ಗೌಡ ಲುಕ್​ನ ಆ ಕ್ಲಿಕ್​​ ನೋಡಿ ಹೇಗಿದೆ..

author-image
Veena Gangani
Updated On
ಬಂಗಾರದ ಹುಡುಗಿಯಾದ ಕರ್ಣನ ಹೀರೋಯಿನ್; ನಮ್ರತಾ ಗೌಡ ಲುಕ್​ನ ಆ ಕ್ಲಿಕ್​​ ನೋಡಿ ಹೇಗಿದೆ..
Advertisment
  • ನಮ್ರತಾ ಗೌಡ ಫೋಟೋಸ್​ ನೋಡಿ ಫ್ಯಾನ್ಸ್ ಆದ್ರೂ ಫುಲ್ ಫಿದಾ
  • ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ಈ ಕಿರುತೆರೆ ನಟಿ
  • ಸಖತ್​​ ಲುಕ್​ನಲ್ಲಿ ನೆಟ್ಟಿಗರ ಕಣ್ಮನ ಸೆಳೆದ ಬಿಗ್​ಬಾಸ್​ ಸುಂದರಿ

ಕರ್ಣ ಸೀರಿಯಲ್​ ಮೂಲಕ ತೆರೆಯಲ್ಲಿ ರಾರಾಜಿಸೋಕೆ ನಮ್ರತಾ ರೆಡಿಯಾಗಿದ್ರು. ಆದ್ರೆ ಕಾರಾಣಂತರಗಳಿಂದ ಸೀರಿಯಲ್​ ತೆರೆಗೆ ಬರೋದು ತಡವಾಗ್ತಿದೆ. ಪಕ್ಕಾ ಕರ್ಣ ಬಂದೇ ಬರ್ತಾನೆ ಅನ್ನೋದು ತಂಡದ ಭರವಸೆ.

ಇದನ್ನೂ ಓದಿ: ಜೋಗನ ಹಕ್ಕಲು ಜಲಪಾತ ವೀಕ್ಷಣೆಗೆ ಹೋದಾಗ ಘೋರ ದುರಂತ.. ಕಾಲು ಜಾರಿ ಯುವಕ ಕಣ್ಮರೆ

publive-image

ಕರ್ಣನ ಬಗೆಗಿನ ನಿರೀಕ್ಷೆ ಒಂದ್​ ಕಡೆಯಾದ್ರೇ ಮತ್ತೊಂದು ಕಡೆ ನಮ್ರತಾ ಹೊಸ ಲುಕ್​ ಅಭಿಮಾನಿಗಳ ದಿಲ್​ ಕದ್ದಿದೆ. ಸ್ಟೈಲ್​ನಲ್ಲೂ.. ಸ್ಮೈಲ್​ನಲ್ಲೂ ನಮ್ರತಾ ಚಂದಕ್ಕಿಂತ ಚಂದ. ಹೊಸ ಟ್ರೆಂಡ್​ ಸೃಷ್ಟಿಸೋ ಬೆಡಗಿ.

ಹೊಸ ಫೋಟೋಶೂಟ್​ ಮಾಡಿಸಿರೋ ನಟಿ ಬಂಗಾರ ಬಣ್ಣದ ಉಡುಗೆ ತೊಟ್ಟಿದ್ದು, ಅದಕ್ಕೆ ಒಪ್ಪುವ ಬಂಗರಾ ಬಣ್ನದ ಬ್ಯಾಂಗಲ್​ ತೊಟ್ಟಿದ್ದಾರೆ. ಈ ಲುಕ್​ನಲ್ಲಿ ಚಿನ್ನದ ಗೊಂಬೆ ತರ ಕಂಗೋಳಿಸ್ತಿದ್ದಾರೆ ನಟಿ.

publive-image

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸೌಂಡ್ ಮಾಡ್ತಿರೋ ಹಾಡು ಬ್ಯಾಂಗಲ್​ ಬಂಗಾರಿ. ನಮ್ಮು ಹೊಸ ಫೋಟೋಸ್​ಗೂ ಈ ಹಾಡಿಗೂ ಅಭಿಮಾನಿಗಳು ಲಿಂಕ್​ ಮಾಡಿದ್ದು, ನಮ್ಮ ನೆಚ್ಚಿನ ಬ್ಯಾಂಗಲ್​ ಬಂಗಾರಿ ಅಂತ ಹಾಡಿ ಹೋಗಳ್ತಿದ್ದಾರೆ. ಒಟ್ಟಿನಲ್ಲಿ ಆಗಾಗ ನಮ್ರತಾ ಹೊಸ ಪ್ರಯತ್ನಗಳನ್ನ ಮಾಡ್ತಾನೆ ಇರ್ತಾರೆ. ಈಗ ಅವ್ರ ಬಂಗಾರಿ ಲುಕ್ ತೆರೆಮೇಲೆ​ ಅದ್ಧೂರಿ ಫೀಲಿಂಗ್​ ಕೊಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment