/newsfirstlive-kannada/media/post_attachments/wp-content/uploads/2025/05/ragini1.jpg)
ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿಯಾಗಿ ಆಗುತ್ತಿದ್ದಂತೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಒಬ್ಬರಾದ ಮೇಲೆ ಒಬ್ಬರು ರಾಜ್ಯ ಸರ್ಕಾರ ಹಾಗೂ ನೇಮಕ ಮಾಡಿದವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ:ಮೈಸೂರು ಸ್ಯಾಂಡಲ್ ಸೋಪ್ಗೆ ಅಂಬಾಸಿಡರ್ ಅಗತ್ಯವಿಲ್ಲ.. ಮೋಹಕತಾರೆ ರಮ್ಯಾ ಖಡಕ್ ಟಾಂಗ್; ಏನಂದ್ರು?
ನಟಿ ರಮ್ಯಾ, ಕಾರುಣ್ಯಾ ರಾಮ್ ಸೇರಿದಂತೆ ನಟಿಯರು ಕನ್ನಡದವರನ್ನು ಬಿಟ್ಟು ಪರಭಾಷಿಕರನ್ನು ನೇಮಕ ಮಾಡಿದ್ದು ಸರಿಯಲ್ಲ ಅಂತ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ 2 ವರ್ಷಗಳ ಅವಧಿಗೆ 6 ಕೋಟಿ ರೂಪಾಯಿ ನೀಡಿ ಸ್ಟಾರ್ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿದ ವಿಚಾರದ ಬಗ್ಗೆ ತುಪ್ಪದ ಬೆಡಗಿ ರಾಗಿಣಿ ಕಿಡಿ ಕಾರಿದ್ದಾರೆ.
ಈ ಬಗ್ಗೆ ಮಾತಾಡಿದ ನಟಿ, ಕನ್ನಡದಲ್ಲೇ ಸಾಕಷ್ಟು ನಟಿಯರು ಇದ್ದಾರೆ. ನಮಗೆ ಮೊದಲ ಆದ್ಯತೆ ಕೊಡಲಿ. ಪ್ರಾದೇಶಿಕವಾಗಿರೋ ಪ್ರಾಜೆಕ್ಟ್ಗಳಿಗೆ ನಮ್ಮ ನಟಿಯರ ಆಯ್ಕೆ ಆಗಬೇಕು. ನಮ್ಮ ಸ್ಥಳೀಯ ಬ್ರ್ಯಾಂಡ್ ಅಂದಾಗ ನಾವು ಫ್ರೀಯಾಗಿ ಎಷ್ಟೋ ಜಾಹೀರಾತು ಮಾಡಿದ್ದೀವಿ. ಆರು ಕೋಟಿ ಕೊಟ್ಟು ಹೊರಗಡೆಯಿಂದ ನಟಿಯರನ್ನು ತರೋ ಅವಶ್ಯಕತೆ ಇರಲಿಲ್ಲ ಅಂತ ಕೆಂಡಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ