/newsfirstlive-kannada/media/post_attachments/wp-content/uploads/2025/07/Rajini.jpg)
ರಜಿನಿ.. ಕಿರುತೆರೆಯ ಅದ್ಭುತ ಕಲಾವಿದೆ. ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ, ದಶಕಗಳ ನಂತರ ಮತ್ತೆ ಸ್ಟಾರ್ ಸುವರ್ಣಗೆ ಮರಳಿದ್ದಾರೆ. ಹೊಸ ಲುಕ್, ರಗಡ್ ಪರ್ಫಾರ್ಮೆನ್ಸ್ ಸೀರಿಯಲ್ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
ಇದನ್ನೂ ಓದಿ:ಕಾಲೇಜು ಉಪನ್ಯಾಸಕರಿಂದ ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್.. ಮೂವರು ಕೀಚಕರು ಅರೆಸ್ಟ್..!
ಹೌದು, ಇತ್ತಿಚೀಗೆ ರಜಿನಿ ಅವರು ನೆಗೆಟಿವ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಿಟ್ಲರ್ ಕಲ್ಯಾಣದಲ್ಲಿ ವಿಲನ್ ಆಗಿ ಮಿಂಚಿದ್ರು. ಸದ್ಯ ಹೊಸ ಪಾತ್ರ ಕೂಡ ಅದೇ ಶೇಡ್ನಲ್ಲಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿರೋ 'ನೀ ಇರಲು ಜೊತೆಯಲ್ಲಿ' ಸೀರಿಯಲ್ ನಲ್ಲಿ ಉರ್ಮಿಳಾ ದಿವಾನ್ ಆಗಿ ಕಾಣಿಸಿಕೊಳ್ತಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರೋ ನಟಿ, ನಿಮ್ಮೆಲ್ಲರ ಪ್ರೀತಿ ಪ್ರೋತ್ಸಹದಿಂದ.. ನೀ ಇರಲು ಜೊತೆಯಲಿ ಧಾರಾವಾಹಿ ಮೂಲಕ ಉರ್ಮಿಳಾ ದಿವಾನ್ ಪಾತ್ರಧಾರಿ ಆಗಿ ನಿಮ್ಮ ಮುಂದೆ ಬರ್ತಿದೀನಿ ಇಂತಿ ನಿಮ್ಮ ರಜಿನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾಯಕನ ಅತ್ತಿಗೆ ಪಾತ್ರ ಉರ್ಮಿಳಾ ದಿವಾನ್. ಮನೆಯವರ ಮೇಲೆ ದಬ್ಬಾಳಿಕೆ ಮಾಡೋ ಹಠಮಾರಿ, ದರ್ಪದ ಪಾತ್ರ. ಇಡೀ ಮನೆ ಉರ್ಮಿಳಾಗೆ ತಲೆ ಬಾಗಿದ್ರೇ ನಾಯಕ ಮಾತ್ರ ತಲೆನೇ ಕೆಡಿಸಿಕೊಳ್ಳೋದಿಲ್ಲ. ಅತ್ತಿಗೆ ವಿರುದ್ಧ ಧ್ವನಿ ಎತ್ತೋ ಏಕೈಕ ವ್ಯಕ್ತಿ. ಇವ್ರ ಇಬ್ಬರ ಟಗ್ ಆಫ್ ವಾರ್ ಸೀರಿಯಲ್ನ ಹೈಲೈಟ್.
View this post on Instagram
ರಂಗನಾಯಕಿ ಖ್ಯಾತಿಯ ಪವನ್ ನಾಯಕನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ನಾಯಕಿ ಪಾತ್ರದ್ದಲ್ಲಿ ಸಲೋಮಿ ಡಿಸೋಜಾ ಕಾಣಿಸಿಕೊಳ್ತಿದ್ದಾರೆ. ಸಲೋಮಿ ಕನ್ನಡದವ್ರೇ ಆದ್ರೂ ಹೆಚ್ಚು ತೆಲುಗು ಭಾಷೆಯಲ್ಲಿ ಚಿರಪರಿಚಿತರು. ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಾಲು ಸಾಲು ಜನಪ್ರಿಯ ಧಾರವಾಹಿಗಳನ್ನು ನಿರ್ದೇಶಿಸಿದ ನಿರ್ದೇಶಕ ಧರಣಿ ಜಿ ರಮೇಶ್ ಅವರು ನೀ ಇರಲು ಜೊತೆಯಲ್ಲಿ ಧಾರಾವಾಹಿಯ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸೊಕ್ಕಿನ ಉರ್ಮಿಳಾ ಗರ್ವವನ್ನ ಮುರಿಯೋಕೆ ಬರ್ತಿರೋ ಮುದ್ದು ಕೃಷ್ಣನ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ರಜನಿ ಅಭಿನಯ ಮಿಸ್ ಮಾಡಿಕೊಳ್ತಿದ್ದ ಫ್ಯಾನ್ಸ್ಗೆ ನೀ ಇರಲು ಜೊತೆಯಲ್ಲಿ ಕಣ್ಣೀಗೆ ಹಬ್ಬ ನೀಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ