/newsfirstlive-kannada/media/post_attachments/wp-content/uploads/2025/03/ramya4.jpg)
ಸ್ಯಾಂಡಲ್‌ವುಡ್ ನಟಿ, ಮೋಹಕ ತಾರೆ ಅಂತಲೇ ಖ್ಯಾತಿ ಗಳಿಸಿರುವ ರಮ್ಯಾ ಅವರು ಇಂದು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿದ್ದರು. 16ನೇ ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ಗೆ ಆಗಮಿಸಿದ್ದ ನಟಿ ರಮ್ಯಾ ಅವರು ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡಿದ್ದಾರೆ.
ಇದನ್ನೂ ಓದಿ: ಗಂಡನ ಮನೆಗೆ ಬಂದ 3 ದಿನದಲ್ಲೇ 5 ತಿಂಗಳ ಬಾಣಂತಿ ಕೊಲೆ ಆರೋಪ.. ಹಸುಗೂಸು ಅನಾಥ
ಇದೇ ವೇಳೆ ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ನಟಿ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ರಾಜಕೀಯ ಜೀವನ ಆಧರಿತ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಿನಿಮಾದಲ್ಲಿ ಇಂದಿರಾ ಗಾಂಧಿಯಾಗಿ ಕಂಗನಾ ಅವರು ಕಾಣಿಸಿಕೊಂಡಿದ್ದರು.
ಆದ್ರೆ, ಇದೇ ಸಿನಿಮಾದ ಬಗ್ಗೆ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಮಾತಾಡಿದ ರಮ್ಯಾ, ಕಂಗನಾ ರಣಾವತ್ ಅವರು ತುಂಬಾ ಸಕ್ಸಸ್ ಕಂಡಿದ್ದಾರೆ. ಕಂಗನಾರ ಎಮರ್ಜೆನ್ಸಿ ಸಿನಿಮಾ ಕೆಟ್ಟ ಸಿನಿಮಾ. ಆ ಸಿನಿಮಾ ಚೆನ್ನಾಗಿ ಇಲ್ಲದಿರೋ ಕಾರಣ ನಾನು ನೋಡಿಲ್ಲ. ರಾಜಕೀಯ ಸ್ಟೋರಿ ಇರೋದ್ರಿಂದ ಜನ ಕೂಡ ಈ ಸಿನಿಮಾವನ್ನು ಇಷ್ಟ ಪಡಲಿಲ್ಲ. ಹೀಗಾಗಿ ಎಮರ್ಜೆನ್ಸಿ ಸಿನಿಮಾ ಗೆದ್ದಿಲ್ಲ. ಮಣಿಕರ್ಣಿಕ ಸಿನಿಮಾ ತುಂಬಾ ಚೆನ್ನಾಗಿತ್ತು. ಹೀಗಾಗಿ ಈ ಸಿನಿಮಾವನ್ನ ಜನ ನೋಡಿದ್ದಾರೆ ಅಷ್ಟೇ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ