/newsfirstlive-kannada/media/post_attachments/wp-content/uploads/2024/10/sangetha1.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿದ್ದಾರೆ. ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ಯಾವುದೇ ಪ್ರಾಜೆಕ್ಟ್​ಗೆ ಕೈ ಹಾಕಿಲ್ಲ. ಆದರೆ ಬಿಗ್​ಬಾಸ್​ನಿಂದ ಹೊರ ಬಂದ ಬಳಿಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.
/newsfirstlive-kannada/media/post_attachments/wp-content/uploads/2024/10/sangeetha.jpg)
ಸದಾ ಹೊಸ ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಗಿರೋ ನಟಿ ಸದ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಕೂದಲಿಗೆ ಕಲರಿಂಗ್​ ​ಮಾಡಿಸಿಕೊಳ್ಳಲು ಸೆಲೂನ್​ವೊಂದಕ್ಕೆ ಹೋಗಿದ್ದರು. ಈ ವೇಳೆ ನಟಿ ಹೇರ್ ವಾಶ್​ ಮಾಡಿಸಿಕೊಳ್ಳುತ್ತಿದ್ದ ಸೆಲೂನ್​ ಸಿಬ್ಬಂದಿ ಅವರ ಕೂದಲಿಗೆ ಬೇರೆ ಬಣ್ಣ ಹಚ್ಚಿದ್ದಾರೆ. ನಟಿ ಹೇಳಿದ್ದು ಬೂದು ಬಣ್ಣ (Ash Grey Hair Color). ಆದರೆ ಅಲ್ಲಿನ ಸಿಬ್ಬಂದಿ ಕೆಂಪು ಬಣ್ಣದ ಕಲರ್​ ಹಚ್ಚಿದ್ದಾರೆ.
/newsfirstlive-kannada/media/post_attachments/wp-content/uploads/2024/10/sangetha1.jpg)
ಇನ್ನೂ ಹೇರ್​ ವಾಶ್​ ಮಾಡುತ್ತಿದ್ದಾಗ ನಟಿ ಕೇಳಿದ್ದಾರೆ. ಆಗ ಸಿಬ್ಬಂದಿ ಇದು ಗ್ರೇ ಕಲರ್​ ಅಲ್ಲ, ಬದಲಾಗಿ ಕೆಂಪು ಬಣ್ಣದ್ದಾಗಿದೆ ಅಂತ ಹೇಳುತ್ತಾರೆ. ಇದಕ್ಕೆ ನಟಿ ನಾನು ಹೇಳಿದ್ದು ಗ್ರೇ ಕಲರ್ ಆದರೆ ರೆಡ್​ ಏಕೆ ಹಚ್ಚಿದ್ರಿ ಅಂತ ಕೊಂಚ ಕೋಪಗೊಂಡಿದ್ದಾರೆ. ಇದೇ ವಿಡಿಯೋವನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಇನ್ನು ಪದೇ ಪದೇ ಹೇರ್ ಕಲರಿಂಗ್ ಮಾಡಿಸಿಕೊಳ್ಳುವುದರಿಂದ ಕೂದಲು ಹಾನಿಗೊಳಿಸುತ್ತದೆ. ಮತ್ತು ಅದರ ನೈಸರ್ಗಿಕ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಇದು ನಿಮ್ಮ ಕೂದಲನ್ನು ಮಂದವಾಗಿಸುವುದು ಮಾತ್ರವಲ್ಲದೆ ಅವುಗಳನ್ನು ಸುಲಭವಾಗಿ ಮತ್ತು ಸತ್ತಂತೆ ಮಾಡುತ್ತದೆ. ಇನ್ನೂ ನಟಿ ಶೇರ್ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us