Advertisment

ಥೇಟ್ ರಂಬೆಯಂತೆ ಕಾಣುತ್ತಿರುವ ಸಂಗೀತಾ ಶೃಂಗೇರಿ; ನಟಿ ಮೈಮಾಟಕ್ಕೆ ಫಿದಾ ಆದ್ರು ಅಭಿಮಾನಿಗಳು

author-image
Veena Gangani
Updated On
ಥೇಟ್ ರಂಬೆಯಂತೆ ಕಾಣುತ್ತಿರುವ ಸಂಗೀತಾ ಶೃಂಗೇರಿ; ನಟಿ ಮೈಮಾಟಕ್ಕೆ ಫಿದಾ ಆದ್ರು ಅಭಿಮಾನಿಗಳು
Advertisment
  • ಸೋಷಿಯಲ್​ ಮಿಡಿಯಾದಲ್ಲಿ ವೈರಲ್​ ಆಗುತ್ತಿರೋ ವಿಡಿಯೋ ಇದು
  • ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳನ್ನು​ ಗಳಿಸಿಕೊಂಡ ನಟಿ
  • ನಿನ್ನ ಕಮಲದ ಮೊಗದ ಬಗ್ಗೆ ಏನೆಂದು ಹೇಳಲಿ ಎಂದ ಅಭಿಮಾನಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿ ಇದ್ದಾರೆ. ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ಯಾವುದೇ ಪ್ರಾಜೆಕ್ಟ್​ಗೆ ಕೈ ಹಾಕಿಲ್ಲ. ಆದರೆ ಬಿಗ್​ಬಾಸ್​ನಿಂದ ಹೊರ ಬಮದ ಬಳಿಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.

Advertisment

ಇದನ್ನೂ ಓದಿ:ನಿಮ್ಮಿಬ್ಬರ ಮೇಲೆ ಯಾರ ಕಣ್ಣು ಬೀಳದಿರಲಿ.. ನೇಹಾ ಗೌಡ, ಅನುಪಮಾ ಗೌಡ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ!

publive-image

ಆದರೆ ಸದಾ ಸೋಷಿಯಲ್​ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸದಾ ಹೊಸ ಹೊಸ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಟ್ರೆಂಡಿಂಗ್​ನಲ್ಲಿ ಇರುತ್ತಾರೆ. ಇದೀಗ ಕೈಯಲ್ಲಿ ಕಮಲವನ್ನು ಹಿಡಿದುಕೊಂಡು ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. ಹೌದು, ನಟಿ ಸಂಗೀತಾ ಶೃಂಗೇರಿ ಅವರು ಮದುಮಗಳ ರೀತಿಯಲ್ಲಿ ಸಿಂಗಾರಗೊಂಡಿದ್ದಾರೆ. ಕ್ಯಾಮೆರಾನೇ ನಾಚಿ ನೀರಾಗುವಂತೆ ಪೋಸ್​ ಕೊಟ್ಟಿದ್ದಾರೆ.

Advertisment

ಇದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ವಿಡಿಯೋ ನೋಡಿದ ನಟಿಯ ಅಭಿಮಾನಿಗಳು ಮೊದಲೇ ಹೇಳಿದಂತೆ ಲಕ್ಷ್ಮೀ ಕಳೆ ಎದ್ದು ಕಾಣುತ್ತಿದೆ. ಯಾರು ಏನೇ ಹೇಳಿ ನನ್ ಸಂಗೀತ ಶೃಂಗೇರಿ ಅವರು ಸೂಪರ್. ಎಷ್ಟೇ ನೋವಿದ್ದರೂ ನೋಡಿದ ತಕ್ಷಣ ಮುಖದಲ್ಲಿ ನಗು ಚೆಲ್ಲುವ ನಿನ್ನ ಕಮಲದ ಮೊಗದ ಬಗ್ಗೆ ಏನೆಂದು ಹೇಳಲಿ? ಅಂತಾ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment