20 ವರ್ಷದ ಹಿಂದೆ ಪ್ರೀತಿಸಿ ಮದ್ವೆ, ಇಬ್ಬರು ಮುದ್ದಾದ ಮಕ್ಕಳು.. ಕಿರುತೆರೆ ನಟಿ ಶ್ರುತಿ ಬಾಳಲ್ಲಿ ಆಗಿದ್ದೇನು..?

author-image
Veena Gangani
Updated On
20 ವರ್ಷದ ಹಿಂದೆ ಪ್ರೀತಿಸಿ ಮದ್ವೆ, ಇಬ್ಬರು ಮುದ್ದಾದ ಮಕ್ಕಳು.. ಕಿರುತೆರೆ ನಟಿ ಶ್ರುತಿ ಬಾಳಲ್ಲಿ ಆಗಿದ್ದೇನು..?
Advertisment
  • ಮಕ್ಕಳು ಕಾಲೇಜಿಗೆ ಹೋದಾಗ ಹೆಂಡತಿ ಮೇಲೆ ಹಲ್ಲೆ ಮಾಡಿದ ಪತಿ
  • ಹನುಮಂತ ನಗರದಲ್ಲಿ ಲೀಸ್​ಗೆ ಮನೆ ಪಡೆದು ವಾಸವಿದ್ದ ದಂಪತಿ
  • ಗಂಡ, ಹೆಂಡತಿ ಇಬ್ಬರ ನಡುವೆ ಹೊಂದಾಣಿಕೆ ಕೂಡ ಸರಿಯಿರಲಿಲ್ಲ!

ಬೆಂಗಳೂರು: ಕನ್ನಡ ಕಿರುತೆರೆಯ ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದ ನಟಿ ಮೇಲೆ ಖುದ್ದು ಪತಿಯೇ ಹಲ್ಲೆ ಮಾಡಿರೋ ಘಟನೆ ಬೆಳಕಿಗೆ ಬಂದಿದೆ. ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಯಾಗಿದ್ದ ಶ್ರುತಿ ಮೇಲೆ ಪತಿಯೇ ಚಾಕುವಿನಿಂದ ಇರಿದು ಹಲ್ಲೆ ಮಾಡಿರೋ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್​ನಲ್ಲಿ ನಡೆದಿದೆ. ಮಂಜುಳ ಅಲಿಯಾಸ್​ ಶ್ರುತಿ ಚಾಕು ಇರಿತಕ್ಕೊಳಗಾದ ನಟಿ.

ಇದನ್ನೂ ಓದಿ: ಟ್ರೋಫಿ ಅಲ್ಲ, ಕಲೆ ಮುಖ್ಯ.. ಸರಿಗಮಪ ಲಹರಿಗೆ ಒಲಿದು ಬಂತು ಬಂಪರ್ ಆಫರ್..

publive-image

ಇನ್ನೂ, ಪತ್ನಿಯ ಶೀಲ ಶಂಕಿಸಿ, ಕಳೆದ ಜುಲೈ​ 4ರಂದು ನಟಿ ಶ್ರುತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 20 ವರ್ಷದ ಹಿಂದೆ ಅಮರೇಶ್ ಎಂಬಾತನ ಪ್ರೀತಿಸಿ ಮದುವೆಯಾಗಿದ್ದ ನಟಿ ಶ್ರುತಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ದಂಪತಿ ಹನುಮಂತ ನಗರದಲ್ಲಿ ಲೀಸ್​ಗೆ ಮನೆ ಪಡೆದು ವಾಸವಿದ್ದರು. ನಂತರ ಶ್ರುತಿ ನಡವಳಿಕೆ ಗಂಡ ಅಮರೇಶ್​ಗೆ ಇಷ್ಟವಾಗುತ್ತಿರಲಿಲ್ಲ. ಇಬ್ಬರ ನಡುವೆ ಹೊಂದಾಣಿಕೆ ಕೂಡ ಸರಿ ಇರಲಿಲ್ಲವಂತೆ. ಹೀಗಾಗಿ ಕಳೆದ ಏಪ್ರಿಲ್​ನಲ್ಲಿ ನಟಿ ಗಂಡನಿಂದ ದೂರಾಗಿ ಅಣ್ಣನ ಮನೆಯಲ್ಲಿದ್ದರಂತೆ. ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತಂತೆ.

publive-image

ಈ ಬಗ್ಗೆ ನಟಿ ಶ್ರುತಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರಂತೆ. ಇದಾದ ಬಳಿಕ ಕಳೆದ ಗುರುವಾರ ರಾಜಿ ಸಂಧಾನ ಮಾಡಿ ಒಂದಾಗಿದ್ದರಂತೆ. ಇಬ್ಬರು ಒಂದಾದ ಮಾರನೇ ದಿನವೇ ಹೆಂಡತಿಗೆ ಪತಿ ಚಾಕು ಇರಿದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಶುಕ್ರವಾರ ಮಕ್ಕಳು ಕಾಲೇಜಿಗೆ ಹೋದ ನಂತರ ಹೆಂಡತಿ ಮೇಲೆ ಪೆಪ್ಪರ್ ಸ್ಪ್ರೇ ಹೊಡೆದು ಪತಿ ಹಲ್ಲೆ ಮಾಡಿದ್ದಾರಂತೆ.

publive-image

ಚಾಕುವಿನಿಂದ ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾರಂತೆ. ಸಿನಿಮಾ ಸ್ಟೈಲ್​ನಲ್ಲಿ ತಲೆ ಕೂದಲು ಹಿಡಿದು, ಗೋಡೆಗೆ ತಲೆ ಗುದ್ದಿಸಿ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಘಟನೆ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹತ್ಯೆಗೆ ಯತ್ನ ಪ್ರಕರಣ ದಾಖಲಿಸಿ ಆರೋಪಿ ಅಮರೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡ ನಟಿ ಶ್ರುತಿ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment