/newsfirstlive-kannada/media/post_attachments/wp-content/uploads/2025/03/Swetha-Changappa5.jpg)
ಕನ್ನಡ ಕಿರುತೆರೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಸುಮತಿ, ಕಾದಂಬರಿ ಧಾರಾವಾಹಿಯ ಮೂಲಕ ನಟಿ ಶ್ವೇತಾ ಚೆಂಗಪ್ಪ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು.
ಇದನ್ನೂ ಓದಿ: ಅನಂತ್ ಅಂಬಾನಿ ವಂತಾರಾದಲ್ಲಿ ಪ್ರಧಾನಿ ಮೋದಿ ಹುಲಿ, ಸಿಂಹದ ಮರಿಗಳ ಜೊತೆ ಆಟ; ವಿಡಿಯೋ ಇಲ್ಲಿದೆ!
ಸದ್ಯ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮತ್ತು ನಿರೂಪಕಿಯಾಗಿ ಎರಡು ದಶಕಗಳಿಂದ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ ಕಾಶ್ಮೀರದಲ್ಲಿ ಕಾಲ ಕಳೆಯುತ್ತಿದ್ದಾರೆ. ನಟಿ ಶ್ವೇತಾ ಚೆಂಗಪ್ಪ ನಿರೂಪಣೆಗೆ ಬ್ರೇಕ್ ಕೊಟ್ಟು ಕೊಂಚ ಫ್ರೀಯಾಗಿ ದೇಶ-ವಿದೇಶ ಸಂಚಾರ ಮಾಡುತ್ತಿದ್ದಾರೆ.
ಮೊದಲೇ ಟ್ರಾವೆಲ್ ಪ್ರಿಯೆ ಆಗಿರೋ ಶ್ವೇತಾ ಚೆಂಗಪ್ಪಾ ಹೆಚ್ಚಾಗಿ ತಮ್ಮ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ಈಗ ಶ್ವೇತಾ ತಮ್ಮ ಪತಿ ಕಿರಣ್ ಅಪ್ಪಚ್ಚು ಹಾಗೂ ಮಗ ಜಿಯಾನ್ ಜೊತೆ ಜಮ್ಮು ಕಾಶ್ಮೀರಕ್ಕೆ ಹೋಗಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಕಾಶ್ಮೀರಕ್ಕೆ ಹೋಗಿರೋ ನಟಿ ಕಾಶ್ಮೀರಿ ಹೆಣ್ಣು ಮಗಳ ಹಾಗೇ ರೆಡಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಶೇರ್ ಮಾಡಿಕೊಂಡ ಫೋಟೋ ಜೊತೆಗೆ ಕರ್ನಾಟಕದಿಂದ ಕಾಶ್ಮೀರಕ್ಕೆ ಹೋಗಿ ಕಾಶ್ಮೀರದ ಬೆಡಗಿ ಆದ ಕ್ಷಣ ಕಾಶ್ಮೀರಿ ಹೆಣ್ಣುಮಗಳ ತರಹ ಕಾಣ್ತಾ ಇದ್ದೀನಾ ಇದು ಶ್ರೀನಗರದ very famous DAL LAKE A different experience all together ಕೇವಲ ಸ್ವಲ್ಪ ಹೊತ್ತಿಗೆ ಅವರ ಉಡುಪುನ್ನ ಧರಿಸಿ ಫೋಟೋ ಕ್ಲಿಕ್ ಮಾಡಿಸಿದ್ದು. ಆಮೇಲೆ beautiful sunset ಎಂದು ಬರೆದುಕೊಂಡಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ