ತರುಣ್​ ಸುಧೀರ್​​ ಜೊತೆ ಸೋನಾಲ್​ ಮದುವೆ ಎಷ್ಟು ನಿಜ? ಈ ಬಗ್ಗೆ ನಟಿ ಏನಂದ್ರು?

author-image
Veena Gangani
Updated On
‘ನನ್ನ ಮದುವೆಗೆ ದರ್ಶನ್ ರಿಲೀಸ್‌ ಆಗಿ ಬರ್ತಾರೆ’- ಕಾಟೇರನ ಭೇಟಿಯಾದ ತರುಣ್ ಸುಧೀರ್; ಹೇಳಿದ್ದೇನು?
Advertisment
  • ಸಾಕಷ್ಟು ಹಲ್​​ಚಲ್ ಎಬ್ಬಿಸಿದ ಸ್ಟಾರ್​ ನಟಿ ಮದುವೆ ಆಗುತ್ತಾರೆ ಎಂಬ ಸುದ್ದಿ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ನಟಿಯ ಹೇಳಿಕೆ ವಿಡಿಯೋ
  • ನಟಿ ಸೋನಾಲ್ ಮಂಥೆರೊ ಮಾತು ಕೇಳಿ ಬೇಸರಗೊಂಡ ಅಭಿಮಾನಿಗಳು

ಮಂಗಳೂರು ಮೂಲದ ಸೋನಾಲ್ ಮಂಥೆರೊ ಮೊದಲು ತುಳು ಚಿತ್ರಗಳಲ್ಲಿ ಅಭಿನಯಿಸಿ ಆನಂತರ ‘ಅಭಿಸಾರಿಕೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ನಟಿ ಸೋನಾಲ್ ಮಂಥೆರೊ ಅವರು ತರುಣ್ ಸುಧೀರ್ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಹಲ್​​ಚಲ್ ಎಬ್ಬಿಸಿತ್ತು.

ಇದನ್ನೂ ಓದಿ:ನಟಿ ಸೋನಾಲ್ ಮದುವೆ ಆಗ್ತಾರಾ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್; ಇದು ಎಷ್ಟು ನಿಜ?

ಇದೀಗ ನಟ ತಮ್ಮ ಲವ್ ಬಗ್ಗೆ ಮೌನ ಮುರಿದಿದ್ದಾರೆ. ಹೌದು, ಖಾಸಗಿ ಸುದ್ದಿ ವಾಹಿನಿ ಜೊತೆ ಮಾತಾಡಿದ ನಟಿ ಸೋನಾಲ್ ಮಂಥೆರೊ ಅವರು, ನನಗೆ ಬಾಯ್ ಫ್ರೆಂಡ್, ಕ್ರಶ್ ಅಂತ ನಿಜವಾಗಲೂ ಯಾರು ಇಲ್ಲ. ನನಗೆ ಹಿಂದೆ ಬ್ರೇಕ್ ಅಪ್ ಆಗಿತ್ತು. ಆಮೇಲೆ ನಾನು ಖುಷಿಯಿಂದ ಸಿಂಗಲ್​ ಆಗಿದ್ದೇನೆ ಅಂತಾ ಹೇಳಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಏನ್​ ಮೇಡಂ ಇದು, ತರುಣ್​ ಅವರನ್ನು ಮದುವೆ ಆಗಿ ಅಂತ ಕಮೆಂಟ್ಸ್​ ಮಾಡಿದ್ದಾರೆ.

ಇತ್ತೀಚೆಗೆಷ್ಟೇ​ ನಟ ತರುಣ್ ಸುಧೀರ್ ಅವರು ನಟಿ ಸೋನಾಲ್ ಮಂಥೆರೊ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗುತ್ತಿದ್ದವು. ಇದೀಗ ನಟಿ ಸೋನಾಲ್ ಮಂಥೆರೊ ಅವರೇ ಖುದ್ದು ನಾನು ಸಿಂಗಲ್​ ಅಂತ ಹೇಳಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಟಿ ಸೋನಾಲ್ ಮಂಥೆರೊ ಅವರು ತರುಣ್​ ಸುದೀರ್​ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ನಟಿಸಿದ್ದರು. ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸೋನಾಲ್ ಮಂಥೆರೊ ಅಭಿನಯಿಸಿದ್ದರು.  ಪಂಚತಂತ್ರ, ಡೆಮೊ ಪೀಸ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾದಲ್ಲಿ ಸೋನಾಲ್ ಮಂಥೆರೊ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment