ಪುಷ್ಪ 2 ಸಿನಿಮಾದ ಮೂರು ನಿಮಿಷದ ಹಾಡಿಗೆ 2 ಕೋಟಿ ಸಂಭಾವನೆ ಪಡೆದ ಕನ್ನಡತಿ..!

author-image
Veena Gangani
Updated On
ಪುಷ್ಪ 2 ಸಿನಿಮಾದ ಮೂರು ನಿಮಿಷದ ಹಾಡಿಗೆ 2 ಕೋಟಿ ಸಂಭಾವನೆ ಪಡೆದ ಕನ್ನಡತಿ..!
Advertisment
  • ತನ್ನ 14ನೇ ವಯಸ್ಸಿಗೆ ನಟನೆಗೆ ಎಂಟ್ರಿ ಕೊಟ್ಟಿರುವ ಬ್ಯೂಟಿ
  • ಕನ್ನಡ, ತೆಲುಗು, ಬಾಲಿವುಡ್​ನಲ್ಲೂ ಮಿಂಚುತ್ತಿರೋ ನಟಿ
  • ಸೌಂದರ್ಯ ಅಷ್ಟೇ ಅಲ್ಲ, ನಟನೆಯಲ್ಲೂ ಸಿಕ್ಕಾಪಟ್ಟೆ ಕ್ಯೂಟಿ

ಕನ್ನಡ, ತೆಲುಗು ಸಿನಿಮಾಗಳ ನಂತರ ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರ ಲಕ್​ ಬದಲಾಗಿದೆ. ಟಾಲಿವುಡ್​ ಬಳಿಕ ಇದೀಗ ಬಾಲಿವುಡ್​ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಆದರೆ ಇದರ ಮಧ್ಯೆ ನಟಿ ಶ್ರೀಲೀಲಾ ಪುಷ್ಪ 2 ದಿ ರೂಲ್ ಸಿನಿಮಾದ ಎಟಂ ಸಾಂಗ್​ಗೆ ತೆಗೆದುಕೊಂಡ ಸಂಭಾವನೆ ಎಷ್ಟು ಅಂತ ಚರ್ಚೆ ಶುರುವಾಗಿದೆ.

ಇದನ್ನೂ ಓದಿ:ಕನ್ನಡಿಗರ ಹೃದಯ ಗೆದ್ದ ದೀಪಿಕಾ ಪಡುಕೋಣೆ.. ಬೆಂಗಳೂರಲ್ಲಿ ದಿಲ್ಜಿತ್‌ಗೆ ಕನ್ನಡ ಪಾಠ; ವಿಡಿಯೋ ಸಖತ್ ವೈರಲ್‌!

ಹೌದು, ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ದಿ ರೂಲ್ ಸಿನಿಮಾ ಮೊನ್ನೆಯಷ್ಟೇ ತೆರೆಗೆ ಅಪ್ಪಳಿಸಿತ್ತು. ಸಿನಿಮಾ ರಿಲೀಸ್​ ಆದ ಮೊದಲ ದಿನವೇ ಕಲೆಕ್ಷನ್​ನಲ್ಲಿ ಪುಷ್ಪ 2 ದಾಖಲೆ ಮಾಡಿತ್ತು. ಇದೇ ಸಿನಿಮಾದ ‘ಕಿಸ್ಸಿಕ್’ ಸಾಂಗ್​ಗೆ ಹೆಜ್ಜೆ ಹಾಕಿದ ಕನ್ನಡದ ನಟಿ ಶ್ರೀಲೀಲಾ ಬಳುಕಿಸಿದ ಸೊಂಟ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಆದರೆ ಇದೀಗ ನಟಿ ಶ್ರೀಲೀಲಾ ಇದೇ ‘ಕಿಸ್ಸಿಕ್’ ಸಾಂಗ್​ಗೆ ಹೆಜ್ಜೆ ಹಾಕಲು ಪಡೆದ ಸಂಭಾವನೆ ಎಷ್ಟು ಅಂತ ಕೇಳಿದ್ರೆ ನಿಜಕ್ಕೂ ನೀವು ಶಾಕ್​ ಆಗ್ತೀರಾ.

publive-image

ಕನ್ನಡದ ಸ್ಟಾರ್​ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗ ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ತೆಲುಗಿನಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ತನ್ನ 14ನೇ ವಯಸ್ಸಿಗೆ ನಟನೆಗೆ ಎಂಟ್ರಿ ಕೊಟ್ಟಿರುವ ನಟಿ ಕಿಸ್ ಸಿನಿಮಾದ ಮೂಲಕ ಸಖತ್ ಫೇಮಸ್​ ಆದರು. ನಂತರದ ದಿನಗಳಲ್ಲಿ ಒಂದಾದ ಮೇಲೆ ಒಂದು ಸಿನಿಮಾಗಳನ್ನು ಮಾಡುತ್ತಾ ಹೋದರು.

ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ, ವಿಜಯ್ ದೇವರಕೊಂಡ ಇನ್ನೂ ಕೆಲವು ಸ್ಟಾರ್‌ಗಳೊಟ್ಟಿಗೆ  ಸಿನಿಮಾದಲ್ಲಿ ನಟಿಸಿದ್ದಾರೆ ಶ್ರೀಲೀಲಾ. ಅಷ್ಟೇ ಅಲ್ಲದೇ ಶ್ರೀಲೀಲಾ ಕೈಯಲ್ಲಿ ಈಗ ಹಲವು ಅವಕಾಶಗಳು ಇವೆ. 'ಪುಷ್ಪ' ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್‌ನ 'ರಾಬಿನ್‌ ಹುಡ್' ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಅಲ್ಲದೇ ಸ್ಟಾರ್ ನಟ ಪವನ್ ಕಲ್ಯಾಣ್ ಜೊತೆ ನಟಿಸುತ್ತಿರುವ 'ಉಸ್ತಾದ್ ಭಗತ್ ಸಿಂಗ್' ಚಿತ್ರೀಕರಣ ಮತ್ತೆ ಶುರುವಾಗಲಿದೆ.  

publive-image

ಈಗಂತೂ ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರ ಲಕ್​ ಬದಲಾಗಿದೆ. ಟಾಲಿವುಡ್​ ಅಷ್ಟೇ ಅಲ್ಲದೇ ಬಾಲಿವುಡ್​ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಪೆಲ್ಲಿ ಸಂದಡಿ ಚಿತ್ರದ ಯಶಸ್ಸಿನ ನಂತರ ಶ್ರೀಲಿಗೆ ತೆಲುಗು ಚಿತ್ರಗಳಲ್ಲಿ ಸಾಕಷ್ಟು ಆಫರ್‌ಗಳು ಬಂದವು. ಸದ್ಯ ಶ್ರೀಲೀಲಾ ಕೈಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಚಿತ್ರಗಳಿವೆ. ಪೆಲ್ಲಿ ಸಂದದಿ ನಂತರ ಧಮಾಕಾ ಚಿತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಸ್ಕಂದ, ಭಗವಂತ ಕೇಸರಿ, ಆದಿಕೇಶವ, ಅಸಾಧಾರಣ ಮನುಷ್ಯ, ಗುಂಟೂರು ಕರಂ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಗುಂಟೂರು ಕರಮ್ ಮತ್ತು ಭಗವಂತ ಕೇಸರಿ ಉತ್ತಮವಾಗಿ ನಟಿಸ ಸೈ ಎನಿಸಿಕೊಂಡರು. ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಪವನ್ ಕಲ್ಯಾಣ್ ಎದುರು ನಟಿಸಲಿದ್ದಾರೆ ಈ ಚೆಲುವೆ.

publive-image

ಕನ್ನಡದ ನಟಿ ಶ್ರೀಲೀಲಾ ಪುಷ್ಪ 2 ದಿ ರೂಲ್ ಸಿನಿಮಾದಲ್ಲಿ ಮೂಡಿ ಬಂದ ಮೂರು ನಿಮಿಷದ ‘ಕಿಸ್ಸಿಕ್’ ಸಾಂಗ್​ಗೆ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಹೌದು, ಇದೇ ವಿಚಾರ ಕೇಳಿದ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಕೇವಲ ಮೂರು ನಿಮಿಷದ ಹಾಡಿಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಾ ಅಂತ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಕನ್ನಡದ ನಟಿ ಬೇರೆ ಭಾಷೆಗಳಲ್ಲಿ ಅಷ್ಟರ ಮಟ್ಟಿಗೆ ಮಿಂಚುತ್ತಿರುವುದು ಅಭಿಮಾನಿಗಳಿಗೆ ಮತ್ತಷ್ಟೂ ಖುಷಿ ತಂದುಕೊಟ್ಟಿದೆ.

ವಿಶೇಷ ವರದಿ: ವೀಣಾ ಗಂಗಾಣಿ ಡಿಜಿಟಲ್​ ಡೆಸ್ಕ್​ ನ್ಯೂಸ್​ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment