ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಿರುತೆರೆ ಮತ್ತೊಂದು ಜೋಡಿ; ಯಾರಿದು..?

author-image
Veena Gangani
Updated On
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಿರುತೆರೆ ಮತ್ತೊಂದು ಜೋಡಿ; ಯಾರಿದು..?
Advertisment
  • ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹು ಭಾಷೆಗಳಲ್ಲಿ ನಟನೆ
  • ರಾಧಿಕಾ ಧಾರಾವಾಹಿಯಲ್ಲಿ ನಟಿಸುತ್ತಿರೋ ಸ್ಟಾರ್ ಜೋಡಿ
  • ತೇಜಸ್ವಿನಿ ಹಾಗೂ ವಿರಾಟ್​ ಮಾಡೋ ರೀಲ್ಸ್​ಗೆ ಫ್ಯಾನ್ಸ್ ಫಿದಾ

ಕಿರುತೆರೆ ಮುದ್ದಾದ ಜೋಡಿ ಸದ್ಯದಲ್ಲೇ ಮದುವೆ ಆಗ್ತಾರೆ ಅನ್ನೋ ಸುದ್ದಿ ಓಡಾಡ್ತಿದೆ. ಪ್ರೀತಿ ಹಕ್ಕಿಗಳು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ರಿಲೇಷನ್​ಶಿಪ್​ನ ಕನ್ಫರ್ಮ್​ ಮಾಡಿವೆ.
ಹೌದು, ಉದಯ ವಾಹಿಯಲ್ಲಿ ಪ್ರಸಾರವಾಗ್ತಿದ್ದ ರಾಧಿಕಾ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತೇಜಸ್ವಿನಿ ಹಾಗೂ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದ ವಿರಾಟ್​ ಡೇಟಿಂಗ್​ ಮಾಡ್ತಿದ್ದಾರೆ.

ಇದನ್ನೂ ಓದಿ: ಥಗ್ ಲೈಫ್ ಬಿಡುಗಡೆ ಮಾಡಿದರೆ ಸಂಪೂರ್ಣ ರಕ್ಷಣೆ ನೀಡುತ್ತೇವೆ -ಕರ್ನಾಟಕ ಸರ್ಕಾರ ಅಫಿಡವಿಟ್

publive-image

ಮೈಸೂರಿನ ಬೆಡಗಿ ನಟಿ ತೇಜಸ್ವಿನಿ. ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹು ಭಾಷೆಗಳಲ್ಲಿ ನಾಯಕಿ ಆಗಿ ಮಿಂಚ್ತಿದ್ದಾರೆ. ಬೆಣ್ಣೆ ನಗರಿ ದಾವಣಗೆರೆಯ ಸ್ಪರದ್ರೂಪಿ ನಟ ವಿರಾಟ್. ಇವರ ತಾಯಿ ನಾಗವೇಣಿ ಅವರು ರಂಗಭೂಮಿ ಕಲಾವಿದೆ. ​ ಬಣ್ಣದ ನಂಟು ಚಿಕ್ಕವಯಸ್ಸನಿಂದ ವಿರಾಟ್​ಗೆ ಒಲಿದು ಬಂದಿದೆ. ಸಂಘರ್ಷ, ರಾಧಿಕಾ ಹಾಗೂ ನನ್ನ ದೇವ್ರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

publive-image

ತೇಜಸ್ವಿನಿ ಹಾಗೂ ವಿರಾಟ್​ ಸಂಘರ್ಷ ಧಾರಾವಾಹಿ ಮೂಲಕ ಪರಿಚಯವಾದವ್ರು. ಅಲ್ಲಿಂದ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಮತ್ತೊಮ್ಮೆ ರಾಧಿಕಾ ಧಾರಾವಾಹಿಯಲ್ಲಿ ಜೋಡಿಯಾಗಿ ಮಿಂಚ್ತಾರೆ. ಇದು ಇವ್ರ ಬಾಂಡಿಂಗ್​ನ ಮತ್ತಷ್ಟು ಗಟ್ಟಿ ಮಾಡಿತ್ತು.

publive-image

ಸದ್ಯ ಈ ಮುದ್ದಾದ ಜೋಡಿ ಜೊತೆಗೆ ಇರ್ತಾರೆ. ಎರಡು ಕುಟುಂಬಗಳು ಇವರ ಪ್ರೀತಿಗೆ ಅಸ್ತು ಅಂದಿವೆ. ಸೋಷಿಯಲ್​ ಮೀಡಿಯಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಜೋಡಿಗೆ ಮದುವೆ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗ್ತಾನೆ ಇರ್ತಾವೆ. ಇತ್ತಿಚೀಗೆ ತೇಜಸ್ವಿನಿ ಅವರು ನಾನು ವಿರಾಟ್​ ಡೇಟಿಂಗ್​ ಹೊರಟ್ಟಿದ್ದೀವಿ ಅಂತ ಒಂದು​ ವಿಡಿಯೋ ಶೇರ್ ಮಾಡಿದ್ರು.

ಅಭಿಮಾನಿಗಳು ನಿವಿಬ್ರು ಕಪಲ್ಸ್​? ರಿಯಲ್ ಲೈಫ್​ನಲ್ಲಿ ಮದುವೆ ಆಗ್ತೀರಾ ಅಂತ ಪ್ರಶ್ನೆ ಮಾಡಿದ್ರು. ಈವರೆಗೂ ಇವರನ್ನು ಫಾಲೋ ಮಾಡಿದ ಫ್ಯಾನ್ಸ್ ಮುಂದೆ ಮದುವೆ ಆಗೋ ಜೋಡಿ ಅಂತ ಉತ್ತರ ಕೊಟ್ಟಿದ್ದರು. ತೇಜಸ್ವಿನಿ ಅವರು ಹೌದು ಎನ್ನುವ ರೀತಿಯಲ್ಲಿ ಕಾಮೆಂಟ್​ನ ಲೈಕ್​ ಮಾಡಿದ್ರು. ಒಟ್ಟಿನಲ್ಲಿ ತೇಜಸ್ವಿನಿ ಹಾಗೂ ವಿರಾಟ್ ಜೋಡಿ ಸದ್ಯದಲ್ಲೇ ಮದುವೆ ಸುದ್ದಿ ಕೊಡೋದಂತು ಫಿಕ್ಸು ಎಂಬುದು ಅವ್ರ ಸೋಷಿಯಲ್​ ಮೀಡಿಯಾ ಪೇಜ್​ಗಳ ಮೂಲಕ ತಿಳಿದುಬರ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment