/newsfirstlive-kannada/media/post_attachments/wp-content/uploads/2025/06/vishnavu.jpg)
ಸೀತಾರಾಮ ಸೀರಿಯಲ್ ಮುಗಿಯುತ್ತಿದ್ದಂತೆ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಶುರುವಾಗಿವೆ.
ಏಪ್ರಿಲ್ 14ರಂದು ಅನಕೂಲ್ ಮಿಶ್ರಾ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರು ನಟಿ.
ಇದನ್ನೂ ಓದಿ:RCBಗೆ ಶುಭ ಹಾರೈಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ.. ತಂಡದ ಬಗ್ಗೆ ಏನು ಹೇಳಿದರು?
ಅನಕೂಲ್ ಮಿಶ್ರಾ ಮೂಲತಹ ಉತ್ತರ ಭಾರತದವರು. ಏರ್ಪೋರ್ಸ್ನಲ್ಲಿ ಕೆಲಸ ಮಾಡ್ತಿದ್ದಾರೆ. ಇದೊಂದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದೆ.
ಇನ್ನೂ, ನಟಿ ವೈಷ್ಣವಿ ಗೌಡ ಅವರು ಗುರು ಹಿರಿಯರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಹಸಮಣೆ ಏರಲಿದ್ದಾರೆ.
ನಾಳೆ ಎಂದರೆ ಜೂನ್ 4ರಂದುಬನ್ನೇರುಘಟ್ಟ ರಸ್ತೆಯಲ್ಲಿರೋ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ನಡಿಯಲಿದೆ.
ಈಗಾಗಲೇ ನಟಿ ವೈಷ್ಣವಿ ಗೌಡ ಮನೆಯಲ್ಲಿ ಚಪ್ಪರ ಪೂಜೆ, ಮೆಹೆಂದಿ ಶಾಸ್ತ್ರ ಹಾಗೂ ಅರಶಿಣ ಶಾಸ್ತ್ರ ಸೇರಿದಂತೆ ಗೌಡರ ಸಂಪ್ರದಾಯದಂತೆ ಶಾಸ್ತ್ರಗಳು ನಡೀತಿವೆ.
ವೈಷ್ಣವಿ ಅನಕೂಲ್ ಮಿಶ್ರಾ ಕಲ್ಯಾಣದಲ್ಲಿ ಸಾಕಷ್ಟು ಕಲಾವಿದರು, ಆತ್ಮಿಯರು ಭಾಗಿಯಾಗಲಿದ್ದು, ನವ ಜೋಡಿಗೆ ಶುಭ ಹಾರೈಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ