/newsfirstlive-kannada/media/post_attachments/wp-content/uploads/2025/06/vishnavi-1.jpg)
ಕನ್ನಡದ ಸ್ಟಾರ್ ನಟಿ ವೈಷ್ಣವಿ ಗೌಡ ಸಖತ್ ಖುಷಿಯಲ್ಲಿದ್ದಾರೆ. ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ನಟಿ ವೈಷ್ಣವಿ ಗೌಡ ಸದ್ಯ ಪತಿ ಜೊತೆಗೆ ಅಮೂಲ್ಯವಾದ ಸಮಯ ಕಳೆಯುತ್ತಿದ್ದಾರೆ.
ಇದನ್ನೂ ಓದಿ: Yoga Day: ನೀವು ಸ್ಲಿಮ್ ಅಂಡ್ ಫಿಟ್ ಆಗಿ ಕಾಣಬೇಕೇ? ಯೋಗಾಸನದಿಂದ ಇರೋ ಲಾಭಗಳೇನು?
ಇದೀಗ ನಟಿ ನಟಿ ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಹೌದು, ಬರೋಬ್ಬರಿ ಗಂಡ ಹೇಳಿದಕ್ಕೆ 117 ಅಡಿ ಎತ್ತರದಿಂದ ನಟಿ ವೈಷ್ಣವಿ ಗೌಡ ಹಾಗೂ ಪತಿ ಅನಕೂಲ್ ಮಿಶ್ರಾ ಕೆಳಗೆ ಜಿಗಿದಿದ್ದಾರೆ. ಇದೇ ವಿಡಿಯೋ ಶೇರ್ ಮಾಡಿಕೊಂಡು ಆ ಜೊತೆಗೆ 117 ಅಡಿ ಎತ್ತರ. ಪ್ರತಿ ಸೆಕೆಂಡ್‌ಗೆ ಯೋಗ್ಯವಾಗಿದೆ. ನನ್ನ ಪತಿ ನನ್ನನ್ನು ಹೀಗೆ ಮಾಡುವಂತೆ ಹೇಳಿದ್ರು ಅಂತ ಬರೆದುಕೊಂಡಿದ್ದಾರೆ.
ಸದ್ಯ ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಸದ್ಯ ನಿಮಗೆ ಏನೂ ಆಗಿಲ್ಲ ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಸೀತಾರಾಮ ಸೀರಿಯಲ್ ಮುಗಿಯುತ್ತಿದ್ದಂತೆ ನಟಿಯ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿದ್ದವು.
View this post on Instagram
ಈ ಹಿಂದೆ ಏಪ್ರಿಲ್ 14ರಂದು ಅನಕೂಲ್ ಮಿಶ್ರಾ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರು ನಟಿ. ಅಲ್ಲದೇ ಅದ್ಧೂರಿಯಾಗಿ ರಿಸೆಪ್ಷನ್ ಕೂಡ ಮಾಡಿಕೊಂಡಿದ್ದರು. ಸದ್ಯ ಪತಿಯ ಜೊತೆಗೆ ಜಾಲಿ ಮೂಡ್ನಲ್ಲಿ ಕಾಲ ಕಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ