/newsfirstlive-kannada/media/post_attachments/wp-content/uploads/2025/06/vishnavi-gowda.jpg)
ಕನ್ನಡ ಕಿರುತೆರೆ ಸ್ಟಾರ್​ ನಟಿ ವೈಷ್ಣವಿ ಗೌಡ ಸಖತ್​ ಖುಷಿಯಲ್ಲಿದ್ದಾರೆ. ಇಷ್ಟು ದಿನ ಸೀರಿಯಲ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ನಟಿ ವೈಷ್ಣವಿ ಗೌಡ ಈಗ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/06/vishnavu.jpg)
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಸಖತ್​ ಫೇಮಸ್​ ಆಗಿದ್ದರು ನಟಿ ವೈಷ್ಣವಿ ಗೌಡ. ತಮ್ಮ ಕ್ಯೂಟ್​ ನಟನೆ ಮೂಲಕವೇ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡರು. ಇದಾದ ಬಳಿಕ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೀತಾ ರಾಮ ಸೀರಿಯಲ್​ನಲ್ಲಿ ಸೀತಾ ಪಾತ್ರದಲ್ಲಿ ನಟಿಸಿದ್ದರು.
/newsfirstlive-kannada/media/post_attachments/wp-content/uploads/2025/06/vishnavi-gowda1.jpg)
ಸದ್ಯ ಸೀತಾರಾಮ ಸೀರಿಯಲ್​ ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ನಟಿ ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಹೌದು, ಮೊನ್ನೆಯಷ್ಟೇ ನಟಿ ವೈಷ್ಣವಿ ಗೌಡ ಮನೆಯಲ್ಲಿ ಅರಶಿಣ ಶಾಸ್ತ್ರವನ್ನು ಮಾಡಲಾಗಿತ್ತು.
ಈಗ ವೈಷ್ಣವಿ ಗೌಡ ಅವರ ಮನೆಯಲ್ಲಿ ಎರಡೆರಡು ಸಂಭ್ರಮ. ಒಂದು ಮದುವೆ, ಮತ್ತೊಂದು ಆರ್​ಸಿಬಿ ಗೆಲುವು.
/newsfirstlive-kannada/media/post_attachments/wp-content/uploads/2025/06/vishnavi-gowda.jpg)
ಹೌದು, ನಿನ್ನೆ ವೈಷ್ಣವಿ ಗೌಡ ಅವರ ಸಂಗೀತ ಕಾರ್ಯಕ್ರಮ ನಡೆದಿದೆ. ನಟಿ ವೈಷ್ಣವಿ ಗೌಡ ಆರ್​ಸಿಬಿಯ ದೊಡ್ಡ ಅಭಿಮಾನಿ ಆಗಿರುವುದರಿಂದ ಆ ಜೋಶ್​ ಇನ್ನೂ ಜೋರಾಗಿತ್ತು. ಹೀಗಾಗಿ ಸಂಗೀತ ಕಾರ್ಯಕ್ರಮದಲ್ಲಿ ದೊಡ್ಡದಾಗಿ ಸ್ಕ್ರಿನ್ ಹಾಕಲಾಗಿತ್ತು. ಈ ಸ್ಕ್ರಿನ್​ನಲ್ಲಿ ವೈಷ್ಣವಿ ಗೌಡ, ಆಪ್ತರು ಹಾಗೂ ನೆಂಟರು ಆರ್​ಸಿಬಿ vs ಪಂಜಾಬ್ ಮ್ಯಾಚ್ ಲೈವ್ ನೋಡಿ ಸಂಭ್ರಮಿಸಿದ್ದಾರೆ.
View this post on Instagram
ಅಲ್ಲಿ ಹಾಡಿಗಿಂತ, ಆರ್​ಸಿಬಿ ಸಿಕ್ಸ್​ ಹಾಗೂ ಫೋರ್ ಬೀಳುತ್ತಿದ್ದಂತೆ ಜೋರಾಗಿ ಕಿರುಚಾಟ, ಕೂಗಾಟ, ಘೋಷಣೆ ಮೊಳಗಿತ್ತು. ಇನ್ನು, ಪಂಜಾಬ್ ತಂಡದ ವಿಕೆಟ್ ಬಿಳುತ್ತಿದ್ದಂತೆ ವೈಷ್ಣವಿ ಗೌಡ, ಅಮೂಲ್ಯ ಗೌಡ ಕುಣಿದು ಕುಪ್ಪಳಿಸಿದ್ದಾರೆ. ಇದೇ ಖುಷಿಯಲ್ಲಿ ನಟಿ ವೈಷ್ಣವಿ ಗೌಡ ತಮ್ಮ ಖುಷಿಯ ವಿಡಿಯೋವನ್ನು ಇನ್​ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us