Advertisment

ಬಿಗ್​ಬಾಸ್​​ಗೆ ಎಂಟ್ರಿ ಕೊಟ್ಟ ಕನ್ನಡ ಕಿರುತೆರೆಯ ಇಬ್ಬರು ನಟಿಯರು; ಯಾರಿವರು ಗೊತ್ತಾ?

author-image
Veena Gangani
Updated On
ಬಿಗ್​ಬಾಸ್​​ಗೆ ಎಂಟ್ರಿ ಕೊಟ್ಟ ಕನ್ನಡ ಕಿರುತೆರೆಯ ಇಬ್ಬರು ನಟಿಯರು; ಯಾರಿವರು ಗೊತ್ತಾ?
Advertisment
  • ರಂಗನಾಯಕಿ, ಹರಹರ ಮಹಾದೇವ ಸೀರಿಯಲ್​ನಲ್ಲಿ ಅಭಿನಯಿಸಿದ ನಟಿ
  • ಸ್ಟಾರ್​ ನಟನ ನೇತೃತ್ವದಲ್ಲಿ ಮೂಡಿ ಬರಲಿದೆ ಬಿಗ್​ಬಾಸ್​ ಸೀಸನ್​ 08
  • ಈ ಬಾರಿಯ ಬಿಗ್​ಬಾಸ್​ ಸೀಸನ್​ 8ಕ್ಕೆ ಯಾರೆಲ್ಲಾ ಎಂಟ್ರಿ ಕೊಟ್ಟಿದ್ದಾರೆ?

ಒಂದು ಕಡೆ ಕನ್ನಡದ ಬಿಗ್​ ರಿಯಾಲಿಟಿ ಶೋ ಶುರುವಾಗಲು ತೆರೆಮರೆಯಿಂದ ಸಿದ್ಧತೆ ನಡೆಸಲಾಗುತ್ತಿದೆ. ಮತ್ತೊಂದು ಕಡೆ ತೆಲುಗಿನ ಬಿಗ್​ಬಾಸ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇಂದಿನಿಂದ ತೆಲುಗಿನ ಬಿಗ್​ಬಾಸ್ ಸೀಸನ್- 8 ಶುರುವಾಗಿಲಿದೆ. ಒಟ್ಟು 14 ಸ್ಪರ್ಧಿಗಳಲ್ಲಿ ಮೂವರು ಕನ್ನಡಿಗರಿಗೆ ಬಿಗ್​​ಬಾಸ್​ಗೆ ಹೋಗುವ ಅವಕಾಶ ಸಿಕ್ಕಿದೆ.

Advertisment

publive-image

ಈ ಬಾರಿಯ ತೆಲುಗಿನ ಬಿಗ್​ಬಾಸ್​ ಸೀಸನ್ 8ಕ್ಕೆ ಹೋಗುವ ಅನೇಕರ ಹೆಸರುಗಳು ವೈರಲ್​ ಆಗಿದ್ದವು. ಅದರಲ್ಲೂ ಇಬ್ಬರು ಕನ್ನಡತಿಯರ ಹೆಸರು ಕೂಡ ಮುನ್ನಲೆಗೆ ಬಂದಿತ್ತು. ಇದೀಗ ಈ ಬಾರಿಯ ಕನ್ನಡ ಬಿಗ್​ಬಾಸ್​ಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬ ಚರ್ಚೆಗೆ ತೆರೆ ಬಿದ್ದಿದೆ.

ಇದನ್ನೂ ಓದಿ: ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ರಂಗನಾಯಕಿ’ ನಟಿ ಪ್ರೇರಣಾ; ಹುಡುಗ ಯಾರು ಗೊತ್ತಾ?

ತೆಲುಗು ಬಿಗ್​ಬಾಸ್​ ಸೀಸನ್ 8ಕ್ಕೆ ಕನ್ನಡ ಕಿರುತೆರೆಯ ನಟಿ ಪ್ರೇರಣಾ ಕಂಬಂ ಎಂಟ್ರಿ ಕೊಟ್ಟಿದ್ದಾರೆ. ನಟಿ ಪ್ರೇರಣಾ ಕಂಬಂ ರಂಗನಾಯಕಿ ಸೀರಿಯಲ್​ ಖ್ಯಾತಿಯ ಪಡೆದಿಕೊಂಡಿದ್ದರು. ತಮ್ಮ ಅದ್ಭುತ ನಟನೆ ಮೂಲಕ ನಟಿ ಪ್ರೇರಣಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅದರಲ್ಲೂ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಮಿನಿ ಸೀಸನ್​​ಗೂ ಎಂಟ್ರಿ ಕೊಟ್ಟಿದ್ದರು.

Advertisment

publive-image

2021 ಆಗಸ್ಟ್​ನಲ್ಲಿ ನಡೆದ ಬಿಗ್​ಬಾಸ್​ ಮಿನಿ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ 2023 ನವೆಂಬರ್​ 24ರಂದು ಶ್ರೀಪಾದ್ ದೇಶಪಾಂಡೆ ಎಂಬುವವರ ಜೊತೆ ಪ್ರೇರಣಾ ಕಂಬಂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ತೆಲುಗು ಬಿಗ್​ಬಾಸ್​ ಸೀಸನ್​ 8ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೇ ವಿಚಾರ ತಿಳಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಜೊತೆಗೆ ನಮ್ಮ ಸಪೋರ್ಟ್​ ನಮ್ಮ ಕನ್ನಡತಿಗೆ ಮಾತ್ರ ಅಂತ ಅಭಿಮಾನಿಗಳು ಕಾಮೆಂಟ್ಸ್​ ಹಾಕಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ ಶೋಗೆ ಎಂಟ್ರಿ ಕೊಡಲಿದ್ದಾರೆ ಈ ಇಬ್ಬರು ನಟಿಯರು; ಯಾರಿವರು ಗೊತ್ತಾ?

publive-image

ಮತ್ತೊಬ್ಬ ಕನ್ನಡದ ನಟಿ ಯಶ್ಮಿ ಗೌಡ ಕೂಡ ಈ ಬಾರಿಯ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ಯಶ್ಮಿ ಗೌಡ ಅವರು ಮೂಲತಃ ಕನ್ನಡದವರು. ಈ ಬಾರಿಯ ಬಿಗ್​​ಬಾಸ್​ ಸೀಸನ್​ 8ಕ್ಕೆ ಮೊದಲ ಸ್ಪರ್ಧಿಯಾಗಿ ಜನಪ್ರಿಯ ಕಿರುತೆರೆ ನಟಿ ಯಶ್ಮಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ಬೆಳ್ಳಿತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಕನ್ನಡತಿ ಯಶ್ಮಿ ಗೌಡ ಅವರು ಕನ್ನಡದ ವಿದ್ಯಾವಿನಾಯಕ ಸೇರಿದಂತೆ ಹಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Advertisment

ತೆಲುಗಿನಲ್ಲಿ ಇವರು ಕೃಷ್ಣ ಮುಕುಂದ ಮುರಾರಿ ಧಾರಾವಾಹಿಯಲ್ಲಿ ನಟಿಸಿ ಫೇಮಸ್‌ ಆದವರು. ನಟಿ ಬಿಗ್​ಬಾಸ್​ಗೆ ವಿಚಾರ ತಿಳಿದ ಕೂಡಲೇ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಕನ್ನಡದ ನಟ ನಿಖಿಲ್ ಮಳಿಯಕ್ಕಲ್ ಕೂಡ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ.  ಕಲರ್ಸ್ ಸೂಪರ್​ನ ಮನೆಯೇ ಮಂತ್ರಾಲಯ ಎಂಬ ಧಾರವಾಹಿಯಲ್ಲಿ ನಟಿಸಿದ್ದರು. ಈ ನಟ ಹಲವಾರು ಟಿವಿ ಧಾರಾವಾಹಿಗಳನ್ನು ಮಾಡುವ ಮೂಲಕ ತೆಲುಗಿನಲ್ಲಿ ಜನಪ್ರಿಯರಾಗಿದ್ದಾರೆ. ಬಿಗ್​ಬಾಸ್​ ಸೀಸನ್​ 08 ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿ ಅವರ ನೇತೃತ್ವದಲ್ಲಿ ಶೋ ಮೂಡಿ ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment