ಅಣ್ಣಯ್ಯ ಸೀರಿಯಲ್ ಶಿವು, ಪಾರು ರಿಯಲ್​ ಲೈಫ್​ನಲ್ಲೂ ಕಪಲ್​ ಆಗ್ತಾರಾ?

author-image
Veena Gangani
Updated On
ಅಣ್ಣಯ್ಯ ಸೀರಿಯಲ್ ಶಿವು, ಪಾರು ರಿಯಲ್​ ಲೈಫ್​ನಲ್ಲೂ ಕಪಲ್​ ಆಗ್ತಾರಾ?
Advertisment
  • ಪಾರುಗೆ ಡೀಪ್​ ಆಗಿ ಮಾವ ಶಿವು​ ಮೇಲೆ ಲವ್ ಆಗಿದೆ
  • ಈ ಇಬ್ಬರ ಕೆಮಿಸ್ಟ್ರಿ ನೋಡಿದ ಫ್ಯಾನ್ಸ್​ ಹೇಳಿದ್ದೇನು ಗೊತ್ತಾ?
  • ವೀಕ್ಷಕರಿಗೆ ನಟನೆ ಮೂಲಕವೇ ಕಚಗುಳಿ ನೀಡ್ತಿದ್ದಾರೆ ಸ್ಟಾರ್ಸ್​

ಪಾರುಗೆ ಡೀಪ್​ ಆಗಿ ಮಾವ ಶಿವು​ ಮೇಲೆ ಲವ್ ಆಗಿದೆ. ಶಿವು ಮುಂದೆ ಹೇಗೆ​ ಹೇಳೋದು ಅಂತ ಗೊತ್ತಾಗದೇ ಮಾವನಿಗೆ ಬೇಜಾನ್​ ಕ್ವಾಟ್ಲೇ ಕೊಡ್ತಿದ್ದಾಳೆ. ಈ ಇಬ್ಬರ ಕೆಮಿಸ್ಟ್ರಿ ನೋಡಿದ ಅಭಿಮಾನಿಗಳು ಬೇಗ ನಿಜ ಜೀವನದಲ್ಲೂ ಜೋಡಿಯಾಗಿ ಅಂತ ಆಶೀರ್ವಾದ ಮಾಡ್ತಿದ್ದಾರೆ.

publive-image

ಇದಕ್ಕೆ ತಕ್ಕನಾಗೆ ಇಬ್ಬರ ನಡುವೆ ಕ್ಯೂಟ್​ ಕ್ಯೂಟ್​ ಮೂಮೆಂಟ್ಸ್​ ಕ್ರಿಯೇಟ್​ ಆಗ್ತಿರೋದು ಫ್ಯಾನ್ಸ್​ ಆಸೆ ಹೆಚ್ಚುವಂತೆ ಮಾಡಿದೆ. ಆ ಶಿವನಿಗೆ ನಾನೇ ಪಾರ್ವತಿ ಬೆಲ್ದಚ್ಚಂಗೆ ನಮ್ಮ ಪ್ರೀತಿ.. ಅಂತ ಕದ್ದು ಮುಚ್ಚಿ ಮಾವನನ್ನ ಮನಸಾರೆ ಪ್ರೀತಿ ಮಾಡ್ತಿದ್ದಾಳೆ ಪಾರು.

ಇದನ್ನೂ ಓದಿ:ಬರೋಬ್ಬರಿ 280 KG ತೂಕ.. ಇದು ಯಾರು ಅರಿಯದ ಬಂಗಾರದ ಬಾಗಿಲು; ಏನಿದರ ಇತಿಹಾಸ?

ಪಾರುನ ಆರಾಧಿಸೋ ಶಿವುಗೆ ಪಾರು ಎಷ್ಟೇ ಸಿಗ್ನಲ್​ ಕೊಟ್ರು, ಪ್ರೀತಿ ಅರ್ಥ ಆಗ್ತಿಲ್ಲ. ಇದೊಂತರ ವೀಕ್ಷಕರಿಗೆ ಕಚಗುಳಿ ಇಡ್ತಿದೆ. ಆಹಾ..! ಏನ್​ ಮುದ್ದಾದ ಜೋಡಿ ಇದೆ. ಇದ್ರೇ ಹೀಗ್​ ಇರ್ಬೇಕು ಅಂತ ಪ್ರತಿ ಮನೆಯಲ್ಲೂ ಇವ್ರದ್ದೇ ಮಾತು. ಸೀರಿಯಲ್​ನಲ್ಲಿಷ್ಟೇ ಅಲ್ಲ.. ರಿಯಲ್​ನಲ್ಲೂ ಜೋಡಿಯಾಗಿ ಅಂತ ಹಾರೈಸಿದ್ದಾರೆ. ಅಷ್ಟು ಇಷ್ಟ ಆಗಿದೆ ಪಾರು-ಶಿವು ಜೋಡಿ. ಪ್ರೀತಿಯ ತುಂಟಾಟ. ಫ್ಯಾನ್ಸ್​ ಹೀಗೆ ಆಸೆ ಪಡೋಕು ಕಾರಣ ಇದೆ.

publive-image

ರಿಯಾಲಿಟಿ ಶೋಗಳಲ್ಲಿ ಪಾರು ಪಾತ್ರ ಮಾಡ್ತಿರೋ ನಿಶಾ ಹಾಗೂ ಶಿವು ಪಾತ್ರ ಮಾಡ್ತಿರೋ ವಿಕಾಸ್​ ಜೋಡಿಯ ಫ್ರೆಂಡ್ಶಿಪ್​ ನೋಡೋಗರು ಬ್ಲಶ್​ ಆಗುವಂತೆ ಮಾಡುತ್ತೆ. ಅದರಲ್ಲೂ ಜೀ ಎಂಟರ್​ಟೈನರ್ಸ್​ ಶೋನಲ್ಲಿ ನಿಶಾ ಅಮ್ಮನಿಗೆ ಫ್ರಾಂಕ್​ ಕಾಲ್​ ಮಾಡಿದ್ದರು. ಆಗ ಅಮ್ಮ ನಾನು ಒಂದ್​ ಹುಡುಗನ ಇಷ್ಟ ಪಡ್ತಿದ್ದೀನಿ ಅಂತಾರೆ. ಅದು ಗೊತ್ತಿರೋ ವಿಚಾರ ಅಂತ ಅಮ್ಮ ಹೇಳಿ ಬೀಡ್ತಾರೆ. ಕಾರ್ಯಕ್ರಮದಲ್ಲಿ ನೆರದಿದ್ದವರಿಗೆಲ್ಲ ಫುಲ್​ ಶಾಕ್​ ಆಗುತ್ತದೆ. ಮಾತು ಮುಂದುವರೆಸಿದ ಅಕುಲ್​ ಮಾತ್ನಾಡಿ, ಅಮ್ಮ ಇದು ಫ್ರಾಂಕ್​ ಕಾಲ್​. ಪಾರು ಶಿವನ ಇಷ್ಟ ಪಡ್ತಿದ್ದೀನಿ ಅಂತ ಹೇಳ್ತಾರೆ. ಅದಕ್ಕೆ ಮತ್ತೇ ಉತ್ತರಿಸಿದ ಅಮ್ಮ, ಗೊತ್ತು ಅಪ್ಪ. ನಿಶಾನ ವಿಕಾಸ್​ ದಿನ ಮನೆಗೆ ಡ್ರಾಪ್​ ಮಾಡೋದು ಅಂತ ಹೇಳಿಬಿಡ್ತಾರೆ. ಈ ಮಾತು ನೆರದಿದ್ದವ್ರಲ್ಲಿ ಮೊಗ ಅರಳುವಂತೆ ಮಾಡಿತ್ತು.

publive-image

ಅಲ್ಲಿಂದ ಈ ಜೋಡಿಗೆ ಕಾಲ್​ ಎಳಿಯೋದು ಕಾಮನ್​ ಆಯ್ತು. ಮೊನ್ನೆ ಸರಿಗಮಪ ವೇದಿಕೆಗೆ ಬಂದಿದ್ದ ನಿಶಾ ಹಾಗೂ ವಿಕಾಸ್​ ಅಣ್ಣಯ್ಯ ಸೀರಿಯಲ್​ನ ಸಣ್ಣ ತುಣಕನ್ನ ಎನಾಕ್ಟ್ ಮಾಡಿದ್ರು. ಇದಾದ ಬಳಿಕ ಅನುಶ್ರೀ ಅವ್ರು ನಿಶಾ-ವಿಕಾಸ್​ ಮೋಡಿ ಬಗ್ಗೆ ಕಣ್ಣ ಸನ್ನೆಲೆ ಕಾಲ್​ ಎಳಿದಿದ್ರು. ಇದಷ್ಟೇ ಅಲ್ಲ ನಿಶಾ ಜೊತೆಗೆ ತಮ್ಮ ಸಿನಿಮಾ ಹಾಡೊಂದಕ್ಕೆ ವಿಕಾಸ ರೀಲ್ಸ್ ಮಾಡಿದ್ರು. ಇದು ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡಿತ್ತು. ಒಟ್ಟಿನಲ್ಲಿ ಗಟ್ಟಿಮೇಳದ ವೇದ್ಯಾ ಅಭಿಮಾನಿಗಳೂ ಪಾರು-ಶಿವುಗೂ ಅಷ್ಟೇ ಪ್ರೀತಿ ಕೊಡ್ತಿದ್ದಾರೆ. ಇಬ್ಬರೂ ಆದಷ್ಟೂ ಬೇಗ ಸೀರಿಯಲ್​ನಲ್ಲಿ ಒಂದಾಗಲಿ. ಇದ್ರ ಜೊತೆಗೆ ರಿಯಲ್​ನಲ್ಲೂ ಜೋಡಿಯಾದ್ರೂ ಚಂದಕ್ಕಿಂತ ಚಂದ ಅಂತಿದ್ದಾರೆ ಫ್ಯಾನ್ಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment