/newsfirstlive-kannada/media/post_attachments/wp-content/uploads/2025/06/annaya-1.jpg)
ಅಣ್ಣಯ್ಯ ಧಾರಾವಾಹಿಗೆ ವರ್ಷ ತುಂಬುತ್ತಿದೆ. ಇವತ್ತಿನವರೆಗೂ ಸೀರಿಯಲ್​ ಟಾಪ್​ 3 ಲಿಸ್ಟ್​ನಲ್ಲಿ ರಾರಾಜಿಸ್ತಿದೆ. ಪಾರು ಶಿವು ಜೋಡಿಯ ಮೋಡಿ, ಸೀನ ಗುಂಡಮ್ಮನ ಕಾಮಿಡಿ ಕಿಕ್, ಮಾದಪ್ಪಣ್ಣನ ಸೆಂಟಿಮೆಂಟ್​ ಹಾಗೂ ವೀರಭದ್ರ ಕುತಂತ್ರಗಳ ಜಾಲದ ಮಸಾಲಾ ಭರಿತ ಸಂಚಿಕೆಗಳು ವೀಕ್ಷಕರಿಗೆ ಮಜಾ ನೀಡ್ತಿವೆ. ​
ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!
/newsfirstlive-kannada/media/post_attachments/wp-content/uploads/2025/03/annaya1.jpg)
ಸದ್ಯ ಶಿವು ಮೂರನೇ ತಂಗಿ ರಾಣಿ ಮದುವೆ ಹಿಂದೆ ನಡೀತಿರೋ ಪಿತೂರಿ ಕುರಿತು ಸ್ಟೋರಿ ಸಾಗ್ತಿದೆ. ರಾಣಿ ಮದುವೆ ಆಗುತ್ತಾ? ವೀರಭದ್ರನ ಲೆಕ್ಕಾಚಾರ ಉಲ್ಟಾ ಹೊಡುಯುತ್ತಾ? ಎಂಬ ಕೌತುಕದ ಜೊತೆ ಸಂಚಿಕೆಗಳು ಮೂಡಿಬರ್ತಿವೆ. ಶಿವು ಪಾತ್ರದಲ್ಲಿ ವಿಕಾಶ್​ ಉತ್ತಯ್ಯ, ಪಾರ್ವತಿ ಪಾತ್ರದಲ್ಲಿ ನಿಶಾ ರವಿಕೃಷ್ಣನ್​, ರಶ್ಮಿ ಗುಂಡಮ್ಮ ಪಾತ್ರ ಪ್ರತೀಕ್ಷಾ, ಜಿಮ್​ ಸೀನ ಪಾತ್ರದಲ್ಲಿ ಸುಷ್ಮಿತ್​ ಜೈನ್​, ಪರಶು ಪಾತ್ರದಲ್ಲಿ ಚಿರಂಜೀವಿ, ರತ್ನಾ ಪಾತ್ರದಲ್ಲಿ ನಾಗಶ್ರೀ, ರಾಣಿ ಪಾತ್ರದಲ್ಲಿ ರಾಘವಿ ಹಾಗೂ ಕೊನೆಯ ತಂಗಿ ಪಾತ್ರದಲ್ಲಿ ಅಂಕಿತಾ ಅಭಿನಯಿಸ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/annaya1.jpg)
ತಾರಾಬಳಗಳದಲ್ಲಿ ಯಂಗ್​ ಕಲಾವಿದರೇ ಇರೋದ್ರಿಂದ ಸಹಜವಾಗಿಯೇ ಎಲ್ಲರ ಬಾಂಡಿಂಗ್​ ಚನ್ನಾಗಿದೆ. ಪರಸ್ಪರ ಕಾಲ್​ ಎಳ್ಕೊಂಡು, ಮಜಾ ಮಾಡ್ಕೊಂಡು ಶೂಟಿಂಗ್​ ಮಾಡ್ತಿರ್ತಾರೆ. ಗ್ಯಾಪ್​ ಸಿಕ್ಕಿದಾಗ ಔಟಿಂಗ್​, ಚಾಟಿಂಗೂ ಅಂತ ಜಾಲಿ ಮಾಡ್ತಿರ್ತಾರೆ. ಇತ್ತೀಚಿಗೆ ನಿಶಾ, ವಿಕಾಶ್​, ನಾಗಶ್ರೀ, ಚಿರಂಜೀವಿ ಹಾಗೂ ಸುಷ್ಮಿತ್​ ಜೈನ್​ ಕಾಫಿ ಡೇಲಿ ಹರಟೆ ಹೊಡಿತಿರೋ ಫೋಟೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ರು. ವಿಷ್ಯ ಇದಲ್ಲ. ಎಲ್ಲರ ಕಣ್ಣು ಬಿದ್ದಿದ್ದು ಅಲ್ಲಿಂದು ಕ್ಯೂಟ್​ ಜೋಡಿ ಮೇಲೆ.
/newsfirstlive-kannada/media/post_attachments/wp-content/uploads/2025/06/annaya2.jpg)
ಹೌದು, ನಿಶಾ ಹಾಗೂ ವಿಕಾಶ್​ ನಡುವೆ ಸ್ನೇಹ ಮೀರಿದ ಬಾಂಡಿಂಗ್ ಇದೆ ಅಂತ ಸಾರಿ.. ಸಾರಿ ಹೇಳುವಂತ ಸನ್ನಿವೇಶಗಳು ಎಷ್ಟೋ ಬಾರಿ ಬೇರೆ ಬೇರೆ ವೇದಿಕೆಗಳಲ್ಲಿ ಕಣ್ಣೀಗೆ ಬದ್ದೀವಿ. ಈ ಇಬ್ಬರೂ ಟ್ವಿನಿಂಗ್​ ರೀತಿ ಉಡುಗೆ ತೊಟ್ಟು ಕಾಣಿಸಿಕೊಂಡಿರೋದು. ಅಭಿಮಾನಿಗಳು ಆಹಾ... ಓಹೋ.. ಎಂದು ಕಣ್ಣರಳಿಸಿ ನೋಡುವಂತೆ ಮಾಡಿದೆ. ನೀವು ರಿಯಲ್​ ಲೈಫ್​ನಲ್ಲೂ ಜೋಡಿ ಆದ್ರೆ ಸಖತ್​ ಆಗಿರುತ್ತೆ. ಈಡು ಜೋಡು ಸೂಪರ್​ ಆಗಿದೆ. ಜೋಡಿ ನೋಡದೆ ಚಂದ.. ಯಾರ್ ದೃಷ್ಟಿನೂ ಬಿಳ್ದಿರಲಿ ನಿಮ್ಮ ಮೇಲೆ ಎಂದು ಫ್ಯಾನ್ಸ್​ ಹಾರೈಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us