/newsfirstlive-kannada/media/post_attachments/wp-content/uploads/2025/03/llb.jpg)
ಭಾರ್ಗವಿ LLB ಹೊಸದಾಗಿ ಎಂಟ್ರಿ ಕೊಟ್ಟಿರೋ ಧಾರಾವಾಹಿ. ಸತ್ಯ ಖ್ಯಾತಿಯ ಸ್ವಪ್ನ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಸ್ಟೋರಿಗೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. 4.9 ರೇಟಿಂಗ್ನೊಂದಿಗೆ ಟಾಪ್ 10 ಧಾರಾವಾಹಿಗಳ ಪಟ್ಟಿಯಲ್ಲಿ ಸತತವಾಗಿ ಎರಡು ವಾರ ಸ್ಥಾನ ಪಡೆದು, ಭರವಸೆ ಮೂಡಿಸಿದೆ.
ಇದನ್ನೂ ಓದಿ:ಇನ್ನೂ 2 ದಿನ ಭಯಂಕರ ಸೆಕೆ; ಕರ್ನಾಟಕದ ಈ ಭಾಗದಲ್ಲಿ ಭಾರೀ ಬಿಸಿಲು; ಹವಾಮಾನ ಇಲಾಖೆ ಎಚ್ಚರಿಕೆ
ಭಾರ್ಗವಿ ದಿಟ್ಟ ಲಾಯರ್. ಅನ್ಯಾಯದ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಡೋ ವ್ಯಕ್ತಿತ್ವ. ಈಗತಾನೇ LLB ಮುಗಿಸಿರೋ ಭಾರ್ಗವಿಗೆ ಮೊದಲ ಕೇಸ್ ಬಂದಿದೆ. MLA ಮಗ ಒಂದು ಹುಡುಗಿ ಜೊತೆ ಕೆಟ್ಟದಾಗಿ ನಡ್ಕೋತಾನೆ. ಭಾರ್ಗವಿ ಕಣ್ಮುಂದೆನೇ ಈ ಘಟನೆ ನಡೆಯುತ್ತೆ. ಸ್ವತಹ ಕೇಸ್ ದಾಖಲಿಸಿಕೊಂಡು ಜೀವನದಲ್ಲೇ ಸೋಲೇ ಕಾಣದ ಅಡ್ವಕೇಟ್ ಜೆ.ಪಿ ಪಾಟೀಲ್ ವಿರುದ್ಧ ಸೆಣಸಾಟಕ್ಕೆ ನಿಂತಿದ್ದಾಳೆ ಭಾರ್ಗವಿ.
ಈ ನಡುವೆ ಜೆಪಿ ಪಾಟೀಲ್ ಮಗ ಅರ್ಜುನ್ಗೆ ಲವ್ ಆಗಿದೆ. ಭಾರ್ಗವಿ ದಿಟ್ಟತನಕ್ಕೆ ಮನಸೋತಿದ್ದಾನೆ. ಭಾರ್ಗವಿ ಪ್ರೀತಿ ಪಡೆಯಲು ಹಿಂದೆ ಮುಂದೆ ಸುತ್ತುತ್ತಿರೋ ಅರ್ಜುನ್ ಕನಸಲ್ಲೇ ಪ್ರೀತಿಯ ಹುಡುಗಿಯನ್ನ ಮುದ್ದಾಡುತ್ತಿರ್ತಾನೆ. ಆ ಕನಸಲ್ಲೇ ಶುರುವಾಗೋ ಪ್ರೀತಿಯ ಹಾಡೇ ಕಿರುಗಣ್ಣ ಕರೆಯೋಲೆ.
ಭಾರ್ಗವಿ ಕಥೆಗೋಸ್ಕರನೇ ಈ ಸ್ಪೆಷಲ್ ಸಾಂಗ್ನ ಕಂಪೋಸ್ ಮಾಡಿಸಲಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯ, ಅನಿರುದ್ಧ ಶಾಸ್ತ್ರೀ ಹಿನ್ನಲೆ ಗಾಯನ ಹಾಗೂ ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಿದ್ದಾರೆ.
View this post on Instagram
ಅರ್ಜುನ್ ಪಾತ್ರಕ್ಕೆ ಮನೋಜ್ ಹಾಗೂ ಭಾರ್ಗವಿ ಪಾತ್ರಕ್ಕೆ ರಾಧಾ ಭಗವತಿ ಜೀವ ತುಂಬಿದ್ದಾರೆ. ಸಾಂಗ್ ಶೂಟಿಂಗ್ ಬೆಂಗಳೂರು ಹೊರವಲದಲ್ಲಿರೋ ಬ್ಯೂಟಿಫುಲ್ ಲೋಕೇಶನ್ನಲ್ಲಿ ಶೂಟಿಂಗ್ ಮಾಡಲಾಗಿದೆ. ನಾಲ್ಕೈದು ಕಾಸ್ಟ್ಯೂಮ್ಗಳನ್ನ ಟ್ರೈ ಮಾಡಿದ್ದಾರೆ. ಎಲ್ಲಾ ಔಟ್ಫಿಟ್ ವೆಸ್ಟರ್ನ್ ಲುಕ್ನಲ್ಲೇ ಇದ್ದು, ಹಾಡು ಸೊಗಸಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ಭಾರ್ಗವಿ LLB ಸದ್ದು ಮಾಡ್ತಿದೆ. ಜೆಪಿ ಪಾಟೀಲ್ ವಿರುದ್ಧ ಹೇಗೆ ಗೆಲುವು ಸಾಧಿಸ್ತಾಳೆ? ಅರ್ಜುನ್ ಪ್ರೀತಿನ ಒಪ್ಪಿಕೊಳ್ತಾಳಾ? ಇದೆಲ್ಲಾ ಕುತೂಹಲದ ಅಂಶಗಳನ್ನ ಭಾರ್ಗವಿ LLB ಸೀರಿಯಲ್ನಲ್ಲಿ ನೋಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ