/newsfirstlive-kannada/media/post_attachments/wp-content/uploads/2024/01/BIG_BOSS_PRATAP_SANGEETHA.jpg)
ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳು ಈಗ ತಮ್ಮ ಅಸಲಿ ಆಟದ ಪಕ್ಕಾ ಗೇಮ್ ಪ್ಲೇ ಮಾಡುತ್ತಿದ್ದಾರೆ. ಸ್ಪರ್ಧಿಗಳು ಜಿದ್ದಾಜಿದ್ದಿಗೆ ಬಿದ್ದಿದ್ದು ಬಿಗ್​ ಬಾಸ್​ ಸೀಸನ್​- 10 ಫಿನಾಲೆಯ ಟಿಕೆಟ್​ ಡಿಸೈಡ್ ಗೇಮ್ ಸ್ಟಾರ್ಟ್​ ಆಗಿದೆ. ಹಾಗಾಗಿ ಮನೆಯ ವಾತಾವರಣವೆಲ್ಲ ಫುಲ್ ಬದಲಾವಣೆಯಾಗಿದೆ. ಸಂಗೀತಾ ಅವರು ಕಾರ್ತಿಕ್​ ವಿರುದ್ಧ ತಿರುಗಿ ಬಿದ್ದಿದ್ದರೇ ಇದೀಗ ಡ್ರೋನ್ ಪ್ರತಾಪ್​ ಸಂಗೀತಾರನ್ನು ಹೊರಗಿಟ್ಟಿದ್ದಾರೆ.
ಬಿಗ್​ ಹೌಸ್​ನಲ್ಲಿ ನಿರ್ಣಾಯಕ ಟಾಸ್ಕ್​​​ ಪ್ರಾರಂಭವಾಗಿದೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಡ್ರೋನ್ ಪ್ರತಾಪ್ ಗೆಲ್ಲದಿದ್ದರೇ ನಾನು ಲೀಡ್​​ಗೆ ಬರುತ್ತೇನೆಂದು ಸಂಗೀತಾ ಮತ್ತು ನಮ್ರತಾ ಮಾತನಾಡಿಕೊಳ್ಳುತ್ತಿರುತ್ತಾರೆ. ಈ ವೇಳೆ ಸಂಗೀತಾ ಓ ಮೈ ಗಾಡ್ ಎಂದು ಹೇಳುತ್ತಾರೆ.
ಟಾಸ್ಕ್​ನಿಂದ ಒಬ್ಬರನ್ನು ಹೊರಗಿಡಬೇಕು ಎಂದು ಡ್ರೋನ್ ಪ್ರತಾಪ್​​ಗೆ ಬಿಗ್ ಬಾಸ್​ ಹೇಳುತ್ತಾರೆ. ಹಾಗ ಪ್ರತಾಪ್​ ಸಂಗೀತಾ ಅವರನ್ನು ಹೊರಗಿಡಲು ಬಯಸುತ್ತೇನೆ. ಈಗ ನಾನು ಸಮಯೋಚಿತ ಬುದ್ಧಿ ಉಪಯೋಗಿಸಿ ಅವರನ್ನು ಹೊರಗಿಡದಿದ್ದರೆ ಅದು ಯಾವಾಗ್ಲೂ ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ಸಂಗೀತಾ ಇಷ್ಟೇ, ಇಲ್ಲಿಗೆ ಪ್ರತಾಪ್​​ಗೆ ನನ್ನ ಸಪೋರ್ಟ್​ ಮುಗಿದು ಹೋಗುತ್ತೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us