newsfirstkannada.com

ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡಿದೀನಿ.. ತನ್ನ ಮೌನದ ಹಿಂದಿನ ಸತ್ಯ ಬಿಚ್ಚಿಟ್ಟ ಡ್ರೋನ್​ ಪ್ರತಾಪ್​​

Share :

Published January 29, 2024 at 10:12pm

  ಬಿಗ್​​ಬಾಸ್​ ಗ್ರ್ಯಾಂಡ್​ ಫಿನಾಲೆಯಲ್ಲಿ 2ನೇ ಸ್ಥಾನದ ಪಡೆದ ಪ್ರತಾಪ್

  ಬಿಗ್​ ಬಾಸ್​ ಬಗ್ಗೆ ಮಾತಾಡಬೇಕಾದರೆ ಮಾತುಗಳು ತೊದಲುತ್ತವೆ

  ಮೈಂಡ್​ನಲ್ಲಿ ಏನು ಬರುತ್ತೋ ಅದನ್ನು ಮಾಡಿದರೆ ಚೆನ್ನಾಗಿ ಇರುತ್ತೆ

ಬಿಗ್​ಬಾಸ್​​​ ಫಿನಾಲೆಗೂ ಮೊದಲೇ ಡ್ರೋನ್ ಪ್ರತಾಪ್ ಗೆದ್ದು ಟ್ರೋಫಿಗೆ ಮುತ್ತಿಕ್ಕುತ್ತಾರೆ ಎಂದುಕೊಂಡಿದ್ದರು. ಆದರೆ ಜನರ ತೀರ್ಮಾನದಂತೆ ಕಾರ್ತಿಕ್ ವಿನ್ ಆಗಿದ್ದಾರೆ. ಬಿಗ್​ಬಾಸ್​ ಸೀಸನ್​​-​ 10ರ ಗ್ರ್ಯಾಂಡ್​ ಫಿನಾಲೆಯಲ್ಲಿ ಡ್ರೋನ್ ಪ್ರತಾಪ್ 2ನೇ ಸ್ಥಾನ ಪಡೆದು ತೃಪ್ತಿ ಪಟ್ಟಿದ್ದಾರೆ. ಮನೆಯಲ್ಲಿ ಎಲ್ಲಿ ಮಾತಾಡಬೇಕು ಅಲ್ಲಿ ಮಾತಾಡಿದ್ದೀನಿ. ಬಿಗ್​ ಮನೆಲಿ ಸ್ಟ್ರಾಟರ್ಜಿ ಮಾಡಿಲ್ಲ ಎಂದು ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್ ಹೇಳಿದ್ದಾರೆ.

ಈ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಡ್ರೋನ್ ಪ್ರತಾಪ್, ಬಿಗ್​ ಬಾಸ್​ ಬಗ್ಗೆ ಮಾತನಾಡಬೇಕಾದರೆ ಮಾತುಗಳು ತೊದಲುತ್ತವೆ. ಪ್ಲಾನ್ ಮಾಡಿ ಏನಾದರೂ ಮಾಡೋಕೆ ಹೋದರೆ ಖಂಡಿತ ಅಲ್ಲಿ ವರ್ಕ್​ ಆಗಲ್ಲ. ಎಲ್ಲರೂ ಮುಗ್ಗರಿಸಿ ಬಿದ್ದಿದ್ದಾರೆ. ಮನಸ್ಸಿನಿಂದ, ಮೈಂಡ್​ನಲ್ಲಿ ಏನು ಬರುತ್ತೋ ಅದನ್ನು ಮಾಡಬೇಕು. ನಮಗೆ ಏನ್ ಅನಿಸುತ್ತೋ ಅದನ್ನು ಮಾಡಿಕೊಂಡು ಹೋದರೆ ಅದು ನ್ಯಾಚುರಲ್ ಆಗಿ ಬರುತ್ತದೆ ಎಂದು ಪ್ರತಾಪ್ ಹೇಳಿದ್ದಾರೆ.

ಬಿಗ್​ಬಾಸ್​ನಲ್ಲಿ 100 ದಿನದಲ್ಲಿ ಅಂತಹ ಸಂದರ್ಭಗಳು ಬಂದರೆ ಮನುಷ್ಯ ಮಾತನಾಡಲೇಬೇಕು ಅನಿಸುತ್ತದೆ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಿದ್ದೀನಿ. ಎಲ್ಲಿ ಮೌನವಾಗಿರಬೇಕೋ ಅಲ್ಲಿ ಮೌನವಾಗಿದ್ದೀನಿ. ಕಡೆ ವಾರಗಳಲ್ಲಿ ಮಾತನಾಡಬೇಕು ಅನಿಸಿತು. ಎಲ್ಲರೂ ಮೌನವಾಗಿದ್ದರು. ಹೀಗಾಗಿ ನನಗೆ ಮಾತನಾಡೋಕೆ ಅವಕಾಶ ಸಿಕ್ಕಿದ್ದರಿಂದ ಮಾತನಾಡಿದೆ.

ಮನೆಯಲ್ಲಿ ಯಾವಾಗಲೂ ಯೋಚನೆಯಲ್ಲಿ ಕುಳಿತುಕೊಳ್ಳಲು ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್, ಮನೆಯಲ್ಲಿ ಯಾರದರೂ ಏನಾದರು ಅಂದರೆ ಅದರ ಬಗ್ಗೆ ಯೋಚನೆ ಮಾಡುತ್ತ ಕುಳಿತುಕೊಳ್ಳುತ್ತಿದ್ದೆ. ನಾನು ಸಾಮಾನ್ಯ ಮನುಷ್ಯ ಯೋಚನೆ ಮಾಡುತ್ತಿದ್ದೆ ಎಂದು ಪ್ರತಾಪ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡಿದೀನಿ.. ತನ್ನ ಮೌನದ ಹಿಂದಿನ ಸತ್ಯ ಬಿಚ್ಚಿಟ್ಟ ಡ್ರೋನ್​ ಪ್ರತಾಪ್​​

https://newsfirstlive.com/wp-content/uploads/2024/01/DRONE_PRATAP.jpg

Load More