newsfirstkannada.com

ಬಿಗ್​​ಬಾಸ್​ನಲ್ಲಿ ಸಿಕ್ಕ ಬೈಕ್​ ಬಡವರಿಗೆ ದಾನ​.. ಸುದೀಪ್​ಗೆ ಕೊಟ್ಟ ಮಾತು ಉಳಿಸಿಕೊಂಡ ಡ್ರೋನ್ ಪ್ರತಾಪ್

Share :

Published February 20, 2024 at 7:52pm

    ಡ್ರೋನ್ ಪ್ರತಾಪ್ ತಮ್ಮ ಬೈಕ್​ ಅನ್ನು ಯಾರಿಗೆ ನೀಡಿರುವುದು ಗೊತ್ತಾ.?

    ಬಿಗ್​ ಬಾಸ್​ನ ಸ್ಪರ್ಧಿ ಹಾಗೂ ರನ್ನರ್​ ಅಪ್​ ಆಗಿದ್ದ ಡ್ರೋನ್​ ಪ್ರತಾಪ್

    ಇನ್​ಸ್ಟಾದಲ್ಲಿ ಫೋಟೋ ಶೇರ್ ಮಾಡಿ, ಸಂತಸ ಹಂಚಿಕೊಂಡ ಡ್ರೋನ್

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ನ ಸ್ಪರ್ಧಿ ಹಾಗೂ ರನ್ನರ್​ ಅಪ್​ ಆಗಿದ್ದ ಡ್ರೋನ್​ ಪ್ರತಾಪ್ ಅವರು ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. ಬಿಗ್​ಬಾಸ್​ನಲ್ಲಿ ಬಹುಮಾನವಾಗಿ ಬಂದಿದ್ದ ಬೈಕ್​ ಅನ್ನು ಯುವಕರೊಬ್ಬರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಿಗ್​ಬಾಸ್​ನಲ್ಲಿ ರನ್ನರ್ ಅಪ್ ವಿನ್ ಆಗಿದ್ದಾಗ ಸುದೀಪ್ ಅವರು ಬೈಕ್​ ಅನ್ನು ಏನು ಮಾಡುತ್ತೀರಾ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರತಾಪ್​ ಬೇರೆಯವರಿಗೆ ನೀಡುತ್ತೇನೆ ಎಂದಿದ್ದರು.

ಕಿಚ್ಚ ಸುದೀಪ್ ಅವರಿಗೆ ಕೊಟ್ಟ ಮಾತಿನಂತೆ ಡ್ರೋನ್ ಪ್ರತಾಪ್ ನಡೆದುಕೊಂಡಿದ್ದಾರೆ. ರಾಜು ಎನ್ನುವ ಯುವಕನಿಗೆ ಬೈಕ್​ ಅನ್ನು ಗಿಫ್ಟ್​ ಆಗಿ ನೀಡಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಫೋಟೋ ಸಮೇತ ಶೇರ್ ಮಾಡಿ ಕೆಲ ಲೈನ್ಸ್​ಗಳನ್ನ ಬರೆದುಕೊಂಡಿದ್ದಾರೆ. ಬಿಗ್‌ಬಾಸ್​ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಎನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆವರೆಗೂ ಹೋಟೆಲ್​ನಲ್ಲಿ ಕೆಲಸ ಮಾಡಿ‌ ಹಾಗೂ ಸಂಜೆಯ ಮೇಲೆ ಫುಡ್​​ ಡೆಲಿವರಿ ಕೆಲಸ ಮಾಡುತ್ತಾರೆ. ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು. ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕ್​ನ್ನು ಬ್ಯಾಂಕ್​ನವರು ಸೀಜ್ ಮಾಡಿದ್ದರು. ಹಾಗಾಗಿ ಇವರಿಗೆ, ಬಹುಮಾನವಾಗಿ ಬಂದ ಎಲೆಕ್ಟ್ರಿಕ್​ ಬೈಕ್​ ಅನ್ನು ನೀಡುತ್ತಿದ್ದೇನೆ. ಈ ಬೈಕ್ ಹುಡುಗನಿಗೆ ನೀಡಿರುವುದು ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

View this post on Instagram

A post shared by Prathap N M (@droneprathap)

ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್​ ಸಾಕಷ್ಟು​ ಕುತೂಹಲ ಮೂಡಿಸಿತ್ತು. ಕೊನೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಪ್ರೇಕ್ಷಕರ ಎದೆ ಬಡಿತ ಜಾಸ್ತಿ ಮಾಡಿತ್ತು. ವೀಕ್ಷಕರ ವೋಟ್​ಗಳಂತೆ ಪ್ರಥಮ ಸ್ಥಾನವನ್ನು ಕಾರ್ತಿಕ್ ಮಹೇಶ್ ಪಡೆದುಕೊಂಡರು. ಹಾಗೇ ದ್ವಿತೀಯ ಸ್ಥಾನವನ್ನು ಡ್ರೋನ್​ ಪ್ರತಾಪ್ ಪಡೆದುಕೊಂಡಿದ್ದರು. ಇದೇ ವೇಳೆ ಪ್ರತಾಪ್​​ಗೆ ಈ ಬೈಕ್​ ಅನ್ನು ನೀಡಲಾಗಿತ್ತು. ಸದ್ಯ ಡ್ರೋನ್​ ಪ್ರತಾಪ್ ಮಾಡಿದ ಕಾರ್ಯಕ್ಕೆ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ಬಾಸ್​ನಲ್ಲಿ ಸಿಕ್ಕ ಬೈಕ್​ ಬಡವರಿಗೆ ದಾನ​.. ಸುದೀಪ್​ಗೆ ಕೊಟ್ಟ ಮಾತು ಉಳಿಸಿಕೊಂಡ ಡ್ರೋನ್ ಪ್ರತಾಪ್

https://newsfirstlive.com/wp-content/uploads/2024/02/BIGG_BOSS_DRONE_PRATAM.jpg

Load More