newsfirstkannada.com

VIDEO: ಬಿಗ್‌ಬಾಸ್ ಬೆಡಗಿ ದೀಪಿಕಾ ದಾಸ್ ಅದ್ಧೂರಿ ಆರತಕ್ಷತೆ, ಬೀಗರೂಟ.. ಯಾರೆಲ್ಲಾ ಬಂದಿದ್ರು?

Share :

Published March 10, 2024 at 1:47pm

Update March 10, 2024 at 7:42pm

  ಬೆಂಗಳೂರಲ್ಲಿ ದೀಪಿಕಾ ದಾಸ್‌ ಆರತಕ್ಷತೆ, ಭರ್ಜರಿ ಬೀಗರೂಟ

  ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದ ಜೋಡಿ

  ಮದುವೆ ಔತಣಕೂಟಕ್ಕೆ ಸಿನಿಮಾ ಇಂಡಸ್ಟ್ರಿಯ ಗೆಳೆಯರು ಭಾಗಿ

ಬೆಂಗಳೂರು: ಕನ್ನಡದ ಬಿಗ್​ಬಾಸ್​ ಸೀಸನ್​ 7 ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ಆರತಕ್ಷತೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ. ಇತ್ತೀಚೆಗಷ್ಟೇ ದೀಪಿಕಾ ದಾಸ್‌, ತನ್ನ ಬಹುಕಾಲದ ಗೆಳೆಯ ದೀಪಕ್‌ ಜೊತೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ಸದ್ದಿಲ್ಲದೇ ಗೋವಾದಲ್ಲಿ ನಡೆದ ದೀಪಿಕಾ ದಾಸ್ ಮದುವೆ ಅವರ ಅಭಿಮಾನಿಗಳಿಗೆ ಸರ್‌ಪ್ರೈಸ್ ಆಗಿತ್ತು.

ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡ ಬಳಿಕ ದೀಪಿಕಾ ದಾಸ್‌ ಬೆಂಗಳೂರಿನಲ್ಲಿ ಆರತಕ್ಷತೆ ಮತ್ತು ಬೀಗರೂಟ ಏರ್ಪಡಿಸಿದ್ದಾರೆ. ದೀಪಿಕಾ ದಾಸ್ ಮದುವೆ ಸಂಭ್ರಮದಲ್ಲಿ ಅವರ ಕುಟುಂಬಸ್ಥರು ಹಾಗೂ ಗೆಳೆಯರು ಭಾಗಿಯಾಗಿದ್ದಾರೆ. ದೀಪಿಕಾ ದಾಸ್‌ ಮದುವೆ ಔತಣಕೂಟಕ್ಕೆ ಸಿನಿಮಾ ಇಂಡಸ್ಟ್ರಿಯ ಗೆಳೆಯರನ್ನು ಆಹ್ವಾನ ನೀಡಲಾಗಿತ್ತು.

ದೀಪಿಕಾ ದಾಸ್​ ಆರತಕ್ಷತೆ ಮತ್ತು ಬೀಗರೂಟ ಕಾರ್ಯಕ್ರಮಕ್ಕೆ ಬಿಗ್​ಬಾಸ್ ಖ್ಯಾತಿ ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ನೀತು ವನಜಾಕ್ಷಿ, ಅನುಪಮಾ ಗೌಡ, ಚಂದನಾ ಅನಂತಕೃಷ್ಣ, ಪ್ರಿಯಾಂಕಾ, ಪನ್ನಗ ಭರಣ, ಕಿಶನ್, ಗಾಯಕ ವಾಸುಕಿ ವೈಭವ್, ಸಿರಿ ಸೇರಿದಂತೆ ಅನೇಕರು ಭಾಗಿಯಾಗಿ ಶುಭ ಕೋರಿದ್ದಾರೆ.

ಇದನ್ನೂ ಓದಿ: ದೀಪಿಕಾ ದಾಸ್‌ ಕರಿಮಣಿ ಮಾಲೀಕ ಯಾರು.. ಬಿಗ್‌ಬಾಸ್‌ ಸ್ಪರ್ಧಿ ಸೀಕ್ರೆಟ್‌ ಮದುವೆ ಗುಟ್ಟೇನು?

ಕಳೆದ ಮಾರ್ಚ್‌ 1ರಂದು ದೀಪಿಕ್ ಹಾಗೂ ದೀಪಿಕಾ ದಾಸ್‌ ಮದುವೆ ಗೋವಾದಲ್ಲಿ ನೆರವೇರಿತ್ತು. ಈ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಕೇವಲ ಕುಟುಂಬಸ್ಥರಿಗೆ ಮಾತ್ರ ಮಾಹಿತಿ ನೀಡಲಾಗಿತ್ತು. ಇದಾದ ಬಳಿಕ ದೀಪಿಕಾ ದಾಸ್‌ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬಿಗ್‌ಬಾಸ್ ಬೆಡಗಿ ದೀಪಿಕಾ ದಾಸ್ ಅದ್ಧೂರಿ ಆರತಕ್ಷತೆ, ಬೀಗರೂಟ.. ಯಾರೆಲ್ಲಾ ಬಂದಿದ್ರು?

https://newsfirstlive.com/wp-content/uploads/2024/03/Deepika-Das-5.jpg

Load More