/newsfirstlive-kannada/media/post_attachments/wp-content/uploads/2025/03/rakshitha5.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಆದ್ರೆ, ಈಗ ಅಪ್ಪು ಹಾಡಿಗೆ ಥಿಯೇಟರ್ನಲ್ಲೇ ಬಿಗ್ಬಾಸ್ ಮಾಜಿ ಸ್ಪರ್ಧಿಗಳು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಸುನಿತಾ ವಿಲಿಯಮ್ಸ್ಗೆ ಕಾಡಿದ ಅನಾರೋಗ್ಯ ಸಮಸ್ಯೆ; ಸವಾಲುಗಳು ಏನೇನು..?
ಹೌದು, ನಿಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ‘ಅಪ್ಪು’ ಸಿನಿಮಾ ರಿ-ರಿಲೀಸ್ ಆಗಿತ್ತು. ಬರೋಬ್ಬರಿ 23 ವರ್ಷದ ಬಳಿಕ ಮರು ಬಿಡುಗಡೆ ಆಗಿರುವ ‘ಅಪ್ಪು’ ಸಿನಿಮಾ ನೋಡಲು ಥಿಯೇಟರ್ನಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅದರಲ್ಲೂ ಅಪ್ಪು ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಲು ಅಭಿಮಾನಿಗಳ ಜೊತೆಗೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳು, ಸ್ಟಾರ್ ನಿರೂಪಕಿ ಅನುಶ್ರೀ, ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್, ಹಾಗೂ ಸೂರ್ಯ ಕೂಡ ಭಾಗಿಯಾಗಿದ್ದರು.
ನಿನ್ನೆ ಬೆಂಗಳೂರಿನ ಹಲವೆಡೆ ಫ್ಯಾನ್ಸ್ ಶೋ ಭರ್ಜರಿಯಾಗಿ ನಡೆಯುತ್ತಿದ್ದು, ಮೊದಲ ದಿನದ ಟಿಕೆಟ್ ಆಲ್‌ಮೋಸ್ಟ್ ಸೋಲ್ಡ್ಔಟ್ ಆಗಿತ್ತು. ನರ್ತಕಿ, ವಿರೇಶ್ ಹಾಗೂ ಶ್ರೀನಿವಾಸ, ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಕಡೆಯಿಂದ ಭರ್ಜರಿ ಸೆಲೆಬ್ರೇಷನ್ ಕೂಡ ನಡೆದಿತ್ತು. ಒಂದು ಕಡೆ ಅಪ್ಪು ಕುಟುಂಬಸ್ಥರೂ ಹಾಗೂ ಸಿನಿಮಾ ಟೀಮ್ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ.
View this post on Instagram
ಮತ್ತೊಂದು ಕಡೆ ಬಿಗ್ಬಾಸ್ ಸ್ಪರ್ಧಿಗಳು ತಾಲಿಬಾನ್ ಅಲ್ಲ ಅಲ್ಲ ಸಾಂಗ್ಗೆ ಥಿಯೇಟರ್ನಲ್ಲೇ ಡ್ಯಾನ್ಸ್ ಮಾಡಿದ್ದಾರೆ. ನಮ್ರತಾ ಗೌಡ, ರಕ್ಷಕ್ ಬುಲೆಟ್, ಕಿಶನ್ ಹಾಗೂ ಬಿಗ್ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಕೂಡ ಮಸ್ತ್ ಎಂಜಾಯ್ ಮಾಡಿದ್ದಾರೆ. ಇನ್ನೂ ನಮ್ರತಾ ಗೌಡ ರಕ್ಷಕ್ ಬುಲೆಟ್, ಕಿಶನ್ ಭರ್ಜರಿಯಾಗಿ ಡ್ಯಾನ್ಸ್ ಮಾಡಿರೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನಟಿ ನಮ್ರತಾ ಗೌಡ ಅವರ ಡ್ಯಾನ್ಸ್ ನೋಡಿ ಅಭಿಮಾನಿಗಳು ಕೂಡ ಖುಷ್ಆಗಿದ್ದಾರೆ. ಅಲ್ಲದೇ ನಮ್ರತಾ ಗೌಡ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಇದಕ್ಕೆ ಸಾಕ್ಷಿ ಎಂದರೆ ಅವರ ಬಲಗೈ ಮೇಲೆ ಅಪ್ಪು ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ