ಬಿಗ್​ಬಾಸ್ ಖ್ಯಾತಿಯ ರಂಜಿತ್ ಕುಮಾರ್​​ ಮನೆಯಲ್ಲಿ ಮದುವೆ ಸಂಭ್ರಮ; ಭಾವಿ ಪತ್ನಿ ಜೊತೆಗೆ ಫುಲ್ ಮಿಂಚಿಂಗ್!

author-image
Veena Gangani
Updated On
ಬಿಗ್​ಬಾಸ್ ಖ್ಯಾತಿಯ ರಂಜಿತ್ ಕುಮಾರ್​​ ಮನೆಯಲ್ಲಿ ಮದುವೆ ಸಂಭ್ರಮ; ಭಾವಿ ಪತ್ನಿ ಜೊತೆಗೆ ಫುಲ್ ಮಿಂಚಿಂಗ್!
Advertisment
  • ಬಿಗ್​ಬಾಸ್​ ಸ್ಪರ್ಧಿ ರಂಜಿತ್​ ಕುಮಾರ್​ ಮನೆಯಲ್ಲಿ ಭಾರೀ ಸಂಭ್ರಮ
  • ಪ್ರೀತಿಸಿದ ಹುಡುಗಿ ಜೊತೆಗೆ ಎಂಗೇಜ್​ ಆಗಿದ್ದ ಬಿಗ್​ಬಾಸ್​ ರಂಜಿತ್​
  • ಮಾನಸಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ರಂಜಿತ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11ರ ಸ್ಪರ್ಧಿಗಳು ಒಬ್ಬೊಬ್ಬರಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಿನ್ನೆಯಷ್ಟೇ ಚೈತ್ರಾ ಕುಂದಾಪುರ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸೀಸನ್​11ರ ಮತ್ತೋರ್ವ ಸ್ಪರ್ಧಿ ಮದುವೆಯಾಗೋದಕ್ಕೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?

publive-image

ಹೌದು, ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್​ ಕುಮಾರ್​ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಳೆ ಅಂದ್ರೆ ಮೇ 11ರಂದು ರಂಜಿತ್​ ಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ.

publive-image

ಹೀಗಾಗಿ ರಂಜಿತ್​ ಕುಮಾರ್ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಇನ್ನೂ, ರಂಜಿತ್ ಅವರು ಭಾವಿ ಪತ್ನಿ ಜೊತೆಗೆ ಮೆಹೆಂದಿ ಹಾಗೂ ಸಂಗೀತ ಶಾಸ್ತ್ರದಲ್ಲಿ ಸಖತ್ ಮಿಂಚಿದ್ದಾರೆ. ಭಾವಿ ಪತ್ನಿ ಮಾನಸಾ ಅವರ ಕೈಗೆ ಮೆಹೆಂದಿ ಹಾಕಿ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಭಾವಿ ಪತ್ನಿ ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ.


ಈ ಹಿಂದೆ ನಟ ರಂಜಿತ್​ ಹಾಗೂ ಮಾನಸಾ ಗೌಡ ಜೊತೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಟ ರಂಜಿತ್​ ಹಾಗೂ ಮಾನಸಾ ಗೌಡ ಅವರ ನಿಶ್ಚಿತಾರ್ಥಕ್ಕೆ ಬಿಗ್​ಬಾಸ್​ ಸ್ಪರ್ಧಿಗಳಾದ ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ, ಅನುಷಾ ರೈ ಹಾಗೂ ಭವ್ಯಾ ಗೌಡ ಸೇರಿದಂತೆ ಕಿರುತೆರೆ ನಟ, ನಟಿಯರು ಭಾಗಿಯಾಗಿದ್ದರು. ರಂಜಿತ್​ ಅವರು ಮದುವೆಯಾಗುತ್ತಿರೋ ಹುಡುಗಿಯ ಹೆಸರು ಮಾನಸಾ ಗೌಡ. ಇವರು ಫ್ಯಾಷನ್ ಡಿಸೈನರ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment