newsfirstkannada.com

BBKSeason10: ಬಿಗ್‌ಬಾಸ್ ಫಿನಾಲೆ ಸ್ಪರ್ಧಿಗಳಿಗೆ ಕೋಟಿಗಟ್ಟಲೇ ವೋಟ್ಸ್‌; ವಿನ್ನರ್ ಯಾರು?

Share :

Published January 27, 2024 at 10:50pm

Update January 27, 2024 at 10:51pm

    ಸೀಸನ್ 10ರ ಟಾಪ್ 5 ವೋಟ್‌ಗಳು ಕೋಟಿಗಳಲ್ಲಿ ಇದೆ ಅಂತೆ

    ಕಾರ್ತಿಕ್‌ಗೆ ಬಂದಿರೋ ವೋಟ್‌ಗಳ ನಂಬರ್ ಬರೋಬ್ಬರಿ 38,808

    ಫೈನಲಿಸ್ಟ್‌ಗಳಿಗೆ ಬಂದಿರೋ ವೋಟಿಂಗ್ ನಂಬರ್ ರಿವೀಲ್‌!

ಬಿಗ್‌ಬಾಸ್ ಸೀಸನ್‌ 10 ಎಷ್ಟು ಡಿಫರೆಂಟ್ ಆಗಿತ್ತೋ ಗ್ರ್ಯಾಂಡ್ ಫಿನಾಲೆ ಕೂಡ ಅಷ್ಟೇ ಡಿಫರೆಂಟ್ ಆಗಿದೆ. ಈ ಸೀಸನ್‌ನಲ್ಲಿರೋ ಫೈನಲಿಸ್ಟ್‌ಗಳಿಗೆ ಬಂದಿರೋ ವೋಟಿಂಗ್ ನಂಬರ್ ನೋಡಿದ್ರೆ ನಿಜಕ್ಕೂ ಶಾಕ್ ಆಗಿದೆ. ಬಿಗ್‌ಬಾಸ್ ಫಿನಾಲೆಯಲ್ಲಿ ಖುದ್ದು ಕಿಚ್ಚ ಸುದೀಪ್ ಅವರೇ ಟಾಪ್ 6 ಕಂಟೆಸ್ಟೆಂಟ್‌ಗಳಿಗೆ ಬಂದಿರೋ ವೋಟಿಂಗ್ ನಂಬರ್ ಅನ್ನು ರಿವೀಲ್ ಮಾಡಿದ್ದಾರೆ.

ಅಬ್ಬಾ.. ಬಿಗ್‌ಬಾಸ್ ಸೀಸನ್‌ 10ರ ಸ್ಪರ್ಧಿಗಳಿಗೆ ಕೋಟಿಗಟ್ಟಲೇ ವೋಟಿಂಗ್ ನಡೆದಿದೆ. ಫಿನಾಲೆಯ ಎಲಿಮಿನೇಷನ್ ರೌಂಡ್‌ನಲ್ಲಿ ಕಿಚ್ಚ ಸುದೀಪ್ ಅವರೇ ಈ ಸುಳಿವು ಬಿಟ್ಟುಕೊಟ್ಟಿದ್ದಾರೆ. ಟಾಪ್ 5 ವೋಟ್‌ಗಳು ಕೋಟಿಗಳಲ್ಲಿ ಇದೆ ಎಂದಿರೋ ಕಿಚ್ಚ ಸುದೀಪ್ ಅವರು ಯಾರಿಗೆ ಎಷ್ಟು ವೋಟ್ ಬಂದಿದೆ ಅನ್ನೋದನ್ನ ತೋರಿಸಿ ಹೇಳ್ತೀವಿ ನಿಮಗೆ ಎಂದಿದ್ದಾರೆ.

ಬಿಗ್‌ಬಾಸ್‌ ಫಿನಾಲೆಯಲ್ಲಿರುವ ಸ್ಪರ್ಧಿಗಳಿಗೆ ಈ ಬಾರಿ ಕೋಟಿಗಟ್ಟಲೇ ಜನರು ವೋಟ್ ಮಾಡಿದ್ದಾರೆ. ಒಬ್ಬೊಬ್ಬರಿಗೆ ಹಾಕಿರೋ ವೋಟಿಂಗ್ ನಂಬರ್‌ ಓಡುತ್ತಲೇ ಇದೆ. ಸದ್ಯದ ಮಾಹಿತಿ ಪ್ರಕಾರ ಕಾರ್ತಿಕ್ ಅವರಿಗೆ 38808 ವೋಟ್‌ಗಳು ಬಂದಿವೆ. ತುಕಾಲಿ ಸಂತೋಷ್ ಅವರಿಗೆ ಬಿದ್ದಿರೋ ವೋಟ್‌ಗಳು ಸ್ವಲ್ಪ ಕಡಿಮೆಯಾಗಿದ್ದು 29059.

ಇದನ್ನೂ ಓದಿ: ವೇದಿಕೆ ಮೇಲೆ ರಕ್ಷಕ್ ಬುಲೆಟ್​ಗೆ ಕೌಂಟರ್​ ಕೊಟ್ಟ ಕಿಚ್ಚ ಸುದೀಪ್​; ಏನದು ಗೊತ್ತಾ?​​

ಇನ್ನು ಉಳಿದಂತೆ ಸಂಗೀತಾ, ಡ್ರೋನ್ ಪ್ರತಾಪ್, ವಿನಯ್ ಹಾಗೂ ವರ್ತೂರು ಸಂತೋಷ್ ಅವರಿಗೂ 38808 ವೋಟುಗಳು ಬಂದಿದೆ ಎನ್ನಲಾಗಿದೆ. ಸದ್ಯದ ವೋಟಿಂಗ್ ನಂಬರ್‌ನಲ್ಲಿ ತುಕಾಲಿ ಸಂತೋಷ್ ಅವರು 29059 ವೋಟ್‌ನಲ್ಲಿ ಮೊದಲ ಸುತ್ತಿನಲ್ಲೇ ಎಲಿಮಿನೇಟ್ ಆಗಿ ಹೊರ ಬಿದ್ದಿದ್ದಾರೆ. ಇದು ಮೊದಲ ರೌಂಡ್‌ನಲ್ಲಿ ತೋರಿಸಿರೋ ವೋಟಿಂಗ್ ನಂಬರ್ ಅಷ್ಟೇ. ಇನ್ನೂ ಕೋಟಿ, ಕೋಟಿ ವೋಟಿಂಗ್‌ಗಳ ಲೆಕ್ಕ ಮುಂದೆ ನಡೆಯಲಿದೆ.

ಟಾಪ್ 6ರ ಎಲಿಮಿನೇಟ್ ಬಂದಾಗ ಕಿಚ್ಚ ಸುದೀಪ್ ಅವರು ಇವಾಗಿಂದ ಒಬ್ಬೊಬ್ಬರಾಗೇ ಹೊರಗೆ ಬರಬೇಕಾಗುತ್ತೆ ಎಂದು ಎಲಿಮಿನೇಷನ್ ಆರಂಭಿಸಿದ್ದಾರೆ. ಇದರಲ್ಲಿ ತುಕಾಲಿ ಸಂತೋಷ್ ಅವರು ನನ್ನ ಮನಸ್ಸಿನಲ್ಲಿ ಅಂದುಕೊಂಡಿದ್ದು ಅಷ್ಟೇ ಅಣ್ಣ ಕಪ್ ತೆಗೆದುಕೊಂಡು ಮನೆಗೆ ಹೋಗ್ಬೇಕು ಎಂದಿದ್ದಾರೆ. ಸಂಗೀತಾ ಕೂಡ ನಾನು ಗೆಲ್ಲೋದಕ್ಕೆ ಬಂದಿದ್ದೇನೆ ಗೆಲ್ಲಬೇಕು ಅನ್ನೋದೇ ಆಸೆ ಅಂದ್ರು. ಕಾರ್ತಿಕ್ ಮಾಡಲೇಬೇಕು ಇಲ್ಲ ಅಂದ್ರೆ ಮಡಿ ಬೇಕು ಅಂದ್ರೆ ವಿನಯ್ ಅವರು ಇಲ್ಲಿವರೆಗೂ ಬಂದು ಎಲಿಮಿನೇಷನ್ ಅಂತ ಅಂದಾಗ ಭಯ ಅನ್ನೋದು ಆಗುತ್ತೆ ಎಂದಿದ್ದಾರೆ.

ಒಟ್ಟಿನಲ್ಲಿ ವಿನಯ್, ಕಾರ್ತಿಕ್, ಸಂಗೀತಾ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಟಾಪ್ 5ರಲ್ಲಿ ಉಳಿದುಕೊಂಡಿದ್ದು, ಯಾರು ಔಟ್ ಆಗ್ತಾರೆ ಅನ್ನೋದು ಕುತುಹೂಲ ಕೆರಳಿಸಿದೆ. ಕಿಚ್ಚ ಸುದೀಪ್ ಅಕ್ಕ-ಪಕ್ಕ ನಿಂತು ಗೆಲ್ಲೋದು ಯಾರು ಅನ್ನೋದು ಕೆಲವೇ ಗಂಟೆಯಲ್ಲಿ ಬಹಿರಂಗವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBKSeason10: ಬಿಗ್‌ಬಾಸ್ ಫಿನಾಲೆ ಸ್ಪರ್ಧಿಗಳಿಗೆ ಕೋಟಿಗಟ್ಟಲೇ ವೋಟ್ಸ್‌; ವಿನ್ನರ್ ಯಾರು?

https://newsfirstlive.com/wp-content/uploads/2024/01/Bigg-Boss-Kannada-40.jpg

Load More