newsfirstkannada.com

BBK10: ಬಿಗ್‌ಬಾಸ್ ಮನೆಯಿಂದ ಹೊರ ಬಂದ ತನಿಷಾ ಸೀಕ್ರೆಟ್​ ರೂಮ್‌ನಲ್ಲಿದ್ದಾರಾ?

Share :

Published January 18, 2024 at 7:48pm

    ಪ್ರೋಮೋ ಬಿಟ್ಟಿದ್ದಕ್ಕೆ ಸೀಕ್ರೆಟ್​ ರೂಮ್​ ಪ್ರೊಸಸ್​ ಇರಬಹುದಾ?

    ಮನೆಯಿಂದ ಹೊರ ಬಂದ ತನಿಷಾ ಮನೆಗೂ ಕೂಡ ಹೋಗಿಲ್ಲ?

    ಬಿಗ್​ಬಾಸ್​ ಸೀಸನ್- 10ರ ಮಹತ್ವದ ತಿರುವು, ತನಿಷಾ ಎಲ್ಲಿದ್ದಾರೆ?

ಬಿಗ್​ ಬಾಸ್​ ಮನೆಯಲ್ಲಿ ಯಾವಾಗ ಏನಾಗುತ್ತೋ ಗೊತ್ತಿಲ್ಲ. ಪ್ರತಿ ವಾರಾಂತ್ಯಕ್ಕಾಗಿ ಕಾಯುತ್ತಿದ್ದ ಪ್ರೇಕ್ಷಕರು ಎಲಿಮಿನೇಷನ್​ ಪ್ರಕ್ರಿಯೆ ಕಣ್ಣು ಬಿಟ್ಟು ನೋಡುತ್ತಿದ್ದರು. ಆದರೆ ಈ ವಾರ ಮಾತ್ರ ಬಿಗ್​ ಬಾಸ್​ ವಾರದ ಮಧ್ಯೆ ಬಿಗ್‌ ಶಾಕ್​ ಕೊಟ್ಟಿದ್ದಾರೆ. ಕರುನಾಡ ಜನರ ಮೆಚ್ಚಿದ ಬಿಗ್​​ಬಾಸ್ ಆಟಗಾರ್ತಿ ತನಿಷಾ ಕುಪ್ಪಂಡ ಅವರನ್ನ ಮಧ್ಯದಲ್ಲೇ ಹೊರಗೆ ಕಳುಹಿಸಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಫಿನಾಲೆಗೆ ಸಮೀಪಿಸುತ್ತಿದ್ದಂತೆ ಬಿಗ್​ಬಾಸ್​ ಸೀಸನ್- 10ರ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಮಾಹಿತಿಗಳ ಪ್ರಕಾರ ಬಿಗ್​ ಬಾಸ್​ ಶೋನಲ್ಲಿ ಯಾವ ಸೀಸನ್​​ನಲ್ಲೂ ಎಲಿಮಿನೇಷನ್​ ಪ್ರೋಮೋ ಬಿಟ್ಟಿರಲಿಲ್ಲ. ಆದರೆ ಈಗ ಪ್ರೋಮೋ ಬಿಟ್ಟಿದ್ದಕ್ಕೆ ಸೀಕ್ರೆಟ್​ ರೂಮ್​ ಪ್ರೊಸಸ್​ ಇರಬಹುದಾ ಎಂದು ಪ್ರೇಕ್ಷರಲ್ಲಿ ಗುಸು, ಗುಸು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ತನಿಷಾ ಅವರನ್ನು ಸೀಕ್ರೆಟ್ ರೂಮ್​ನಲ್ಲಿ ಇರಿಸಿ ಮತ್ತೆ ಮನೆಯೊಳಗೆ ಕರೆಸಿಕೊಳ್ಳೋ ಪ್ಲಾನ್ ಇರಬಹುದಾ?. ಇದು ಅಲ್ಲದೇ ಶನಿವಾರ ಕಿಚ್ಚ ಸುದೀಪ್​ ಅವರೊಟ್ಟಿಗೆ ಮಾತನ್ನಾಡಿಸಿ ಬಳಿಕ ಎಲಿಮಿನೇಟ್​ ಮಾಡುವ ತಂತ್ರ ಇರಬಹುದಾ ಎನ್ನುವ ಪ್ರಶ್ನೆಗಳು ಪ್ರೇಕ್ಷಕರಲ್ಲಿವೆ.

ಇಷ್ಟೇ ಅಲ್ಲದೇ ತನಿಷಾ ಅವರನ್ನು ಎಲಿಮಿನೇಷನ್ ಮಾಡಿರುವುದರ ಬಗ್ಗೆ ಯಾವುದೇ ಮಾಹಿತಿ ಅವರ ಕುಟುಂಬಕ್ಕೆ ಇಲ್ಲ. ಅಲ್ಲದೇ ಮನೆಯಿಂದ ಹೊರ ಬಂದಿರೋ ತನಿಷಾ ಮನೆಗೂ ಕೂಡ ಹೋಗಿಲ್ಲ. ಹಾಗಾದ್ರೆ ಬಿಗ್​ಬಾಸ್​ನ ಮುಂದಿನ ತಂತ್ರವೇನು? ಮತ್ತೆ ಅವರನ್ನು ಮನೆಗೆ ಕರೆದುಕೊಳ್ಳುತ್ತಾರಾ, ಇಲ್ವಾ. ಇದೆಲ್ಲವನ್ನು ಮುಂಬರುವ ಬಿಗ್​ಬಾಸ್​ ಎಪಿಸೋಡ್​ನಲ್ಲಿ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಬಿಗ್‌ಬಾಸ್ ಮನೆಯಿಂದ ಹೊರ ಬಂದ ತನಿಷಾ ಸೀಕ್ರೆಟ್​ ರೂಮ್‌ನಲ್ಲಿದ್ದಾರಾ?

https://newsfirstlive.com/wp-content/uploads/2024/01/BIG_TANISHA.jpg

Load More