/newsfirstlive-kannada/media/post_attachments/wp-content/uploads/2024/12/BIG_BOSS_BHAVYA.jpg)
ಬಿಗ್ಬಾಸ್ ಮನೆಯಲ್ಲಿ ಸ್ನೇಹ, ಪ್ರೀತಿ ಹೀಗೆ ಸ್ಪರ್ಧಿಗಳಲ್ಲಿ ಒಂದಕ್ಕೊಂದು ಭಾವನಾತ್ಮಕ ಸಂಬಂಧ ಬೆಳೆದು ಬಿಡುತ್ತೆ. ಕೆಲವೊಂದು ಅರ್ಧದಲ್ಲೇ ಕೈಕೊಟ್ರೆ, ಕೆಲವೊಂದು ದೀರ್ಘವಾಗಿ ಸಾಗುತ್ತವೆ. ಸ್ಪರ್ಧಿಗಳಲ್ಲಿ ಸಂತಸದ ವಾತಾವರಣ ಮೂಡಿದ್ದು ಎಲ್ಲರು ಸುದೀಪ್ ಮುಂದೆ ಫುಲ್ ಜೋಶ್ ಆಗಿ ಮಾತನಾಡಿದ್ದಾರೆ. ಸದ್ಯ ವಿಷ್ಯ ಏನೆಂದರೆ, ತ್ರಿವಿಕ್ರಮ್ ಹಾಗೂ ಭವ್ಯಗೌಡ ನಡುವೆ ಏನಿದೆ?. ಕಿಚ್ಚ ಹೇಳಿದ ಮಾತಿಗೆ ಭವ್ಯ ನಾಚಿರೋದು ಯಾಕೆ?.
ಮನೆಯಲ್ಲಿ ತ್ರಿವಿಕ್ರಮ್, ಭವ್ಯ, ಗೌತಮಿ, ಮೋಕ್ಷಿತಾ, ಮಂಜು, ಹನುಮಂತ, ಧನರಾಜ್, ರಜತ್, ಚೈತ್ರಾ ಹಾಗೂ ಐಶ್ವರ್ಯ ಸೇರಿ ಒಟ್ಟು 10 ಸ್ಪರ್ಧಿಗಳಿದ್ದಾರೆ. ಇದರಲ್ಲಿ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಒಬ್ಬರು ಅಥವಾ ಇಬ್ಬರು ಮನೆ ಖಾಲಿ ಮಾಡಬಹುದು. ಅದು ಯಾರು ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ. ಇದರ ಜೊತೆಗೆ ಸದ್ಯದ ಕುತೂಹಲ ಕೂಡ ಆಗಿದೆ. ಚೈತ್ರಾ, ಗೌತಮಿ, ಧನರಾಜ್, ಮೋಕ್ಷಿತಾ, ತ್ರಿವಿಕ್ರಮ್, ಹನುಮಂತ, ಮಂಜು ನಾಮಿನೇಟ್ ಆಗಿದ್ದು ಯಾರು ಹೊರಕ್ಕೆ ಹೋಗ್ತಾರೆ ಎಂದು ಕಾದು ನೋಡಬೇಕು.
ಇದನ್ನೂ ಓದಿ:BIGG BOSS; ಮನೆಯಲ್ಲಿ ಭಾವನಾತ್ಮಕ ಸಂಬಂಧ.. ಗಿಫ್ಟ್ ಕೊಡುವಾಗ ಕಣ್ಣೀರು ಹಾಕಿದ ಐಶ್ವರ್ಯ, ಚೈತ್ರಾ
ಸುದೀಪ್ ಅವರು ಹೊಸ ವರ್ಷಕ್ಕೆ ನಿಮ್ಮ ಪರ್ಸನಲ್ ವಸ್ತುವನ್ನು ಯಾರಿಗೆ ಕೊಡುತ್ತೀರಾ ಎಂದು ಹೇಳಿದ್ದರು. ಹೀಗಾಗಿ ಧನರಾಜ್ಗೆ ರಜತ್ ಉಡುಗೊರೆ ಕೊಟ್ರೆ, ಮಂಜುಗೆ ಗೌತಮಿ ಗಿಫ್ಟ್ವೊಂದನ್ನು ಕೊಟ್ಟರು. ಐಶ್ವರ್ಯಗೆ ಚೈತ್ರಾ ಉಡುಗೊರೆ ಕೊಡುತ್ತಿದ್ದಂತೆ ಇಬ್ಬರು ಕಣ್ಣೀರು ಹಾಕಿದರು. ಇದಾದ ಮೇಲೆ ಭವ್ಯಗೆ ನೀವು ಯಾರಿಗೆ ಗಿಫ್ಟ್ ಕೊಡಬೇಕು ಎಂದು ಕೇಳಿದಾಗ, ತ್ರಿವಿಕ್ರಮ್ಗೆ ಕೊಡಲು ಇಷ್ಟ ಪಡುತ್ತೇನೆ ಎಂದು ಭವ್ಯ ಹೇಳಿದ್ದಾರೆ. ಈ ವೇಳೆ ಸುದೀಪ್ ಇದು ಎಂಥಾ ಸರ್ಪ್ರೈಸ್ ಅಲ್ವಾ ಎಂದು ಹೇಳುತ್ತಿದ್ದಂತೆ ಎಲ್ಲರು ನಕ್ಕಿದ್ದಾರೆ.
ನಾಚುತ್ತಲೇ ತ್ರಿವಿಕ್ರಮ್ ಕುರಿತು ಮಾತನಾಡಿದ ಭವ್ಯ, ಈ ವ್ಯಕ್ತಿ ನೋಡುವುದಕ್ಕೆ ತುಂಬಾ ಹಾರ್ಸ್ ಅನಿಸ್ತಾರೆ. ಆದರೆ ಅವರು ವೇರಿ ಸ್ವೀಟ್ ಆ್ಯಂಡ್ ಎಂದು ಹೇಳುತ್ತಿದ್ದರು. ಆಗ ತಮಾಷೆಯಾಗಿ ಸುದೀಪ್ ಸ್ವಾರಿ.. ಏನ್ ಹೇಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಭವ್ಯ ನಿಂತಲ್ಲೇ ನೀರಾಗಿ ಹೋಗಿದ್ದಾರೆ. ಮತ್ತೆ ಮಾತನಾಡಿದ ಭವ್ಯ, ತ್ರಿವಿಕ್ರಮ್ರನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಸರ್. ಅರ್ಥ ಮಾಡಿಕೊಂಡ ಮೇಲೆ ತ್ರಿವಿಕ್ರಮ್ನಿಂದ ದೂರ ಹಾಗೋದು ಕಷ್ಟ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ