BIGG BOSS; ಮಾರಿಹಬ್ಬ ಜಾತ್ರೆಯಲ್ಲಿ ಕುರಿನ ಬಲಿ ಕೊಟ್ಟಾಯಿತು.. ಧನರಾಜ್ ಬಗ್ಗೆ ಭವ್ಯ ವ್ಯಂಗ್ಯ

author-image
Bheemappa
Updated On
BBK11: ದೋಸ್ತಾ ಧನರಾಜ್​ಗೆ ಧೈರ್ಯ ತುಂಬಿದ ಹನುಮಂತ; ಇಬ್ಬರ ಗೆಳತನಕ್ಕೆ ವೀಕ್ಷಕರು ಫಿದಾ
Advertisment
  • ಫಿನಾಲೆ ಟಿಕೆಟ್​ನಿಂದ ಯಾರು ಯಾರು ಹೊರಗಿದ್ದಾರೆ.?
  • ಬಿಗ್ ಬಾಸ್ ಸೀಸನ್-11, ನೂರು ದಿನಗಳನ್ನ ಪೂರೈಸಿದೆ
  • ಭವ್ಯ ಹೇಳಿದ್ದಕ್ಕೆ ಮುಖ ಸಪ್ಪೆ ಮಾಡಿದ ಸ್ಪರ್ಧಿ ಧನರಾಜ್

ಕನ್ನಡದ ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದ್ದು ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿ ನಡೆಯುತ್ತಿದೆ. ಮನೆಯಲ್ಲಿ ಟಾಸ್ಕ್​ಗಾಗಿ ಸ್ಪರ್ಧಿಗಳಲ್ಲಿ ಕಿತ್ತಾಟ ನಡೆದಿದೆ. ಗೇಮ್​ಗಳ ನಿಯಮ ಮೀರಿ ಆಟ ಆಡುತ್ತಿದ್ದಾರೆ. ಫಿನಾಲೆ ಟಿಕೆಟ್​​ನಿಂದ ಒಬ್ಬರನ್ನು ಹೊರಗಿಡಬೇಕು ಎಂದು ಬಿಗ್​ಬಾಸ್ ಹೇಳಿದಾಗ ಸ್ಪರ್ಧಿಗಳೆಲ್ಲಾ ಸೇರಿ ವಿಭಿನ್ನ ನಿಲುವು ತಾಳುತ್ತಿದ್ದಾರೆ. ಸದ್ಯ ಧನರಾಜ್​ನನ್ನು ಫಿನಾಲೆಯಿಂದ ಹೊರಗಿಟ್ಟಿದ್ದಕ್ಕೆ ಭವ್ಯ, ಜಾತ್ರೆಯಲ್ಲಿ ಕುರಿನ ಬಲಿ ಕೊಟ್ಟಾಯಿತು ಎಂದಿದ್ದಾರೆ.

ಗೌತಮಿ, ಮಂಜು ಹಾಗೂ ಧನರಾಜ್ ಮೂವರು ಸೇರಿ ಯಾರನ್ನೂ ಫಿನಾಲೆಯಿಂದ ಹೊರಗಿಡಬೇಕು ಎನ್ನುವುದರ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ ಈ ಚರ್ಚೆಯಲ್ಲೇ ಏನ್ ನಿರ್ಧಾರ ಆಗಿದೆ ಗೊತ್ತಿಲ್ಲ. ಆದರೆ ಮಂಜು ಹಾಗೂ ಗೌತಮಿ ಇಬ್ಬರು ಸೇರಿ ಫಿನಾಲೆಯಿಂದ ಧನರಾಜ್​ ಅವರನ್ನು ಹೊರಗಿಡಬೇಕು ಎಂದು ಹೆಸರು ಹೇಳಿದ್ದಾರೆ. ಇದರಿಂದ ಧನರಾಜ್​ಗೆ ಸಿಡಿಲು ಬಂದು ಎದೆಗೆ ಬಡಿದಂತೆ ಆಗಿದೆ.

ಇದನ್ನೂ ಓದಿ: BBK11; ಧನರಾಜ್​​ಗೆ ಬಿಗ್ ಶಾಕ್ ಕೊಟ್ಟ ಮಂಜು, ಗೌತಮಿ.. ಫಿನಾಲೆ ಟಿಕೆಟ್​​ನಿಂದ ಔಟ್

publive-image

ಮೂವರು ಸೇರಿ ಚರ್ಚೆ ಮಾಡುವಾಗ ತ್ರಿವಿಕ್ರಮ್ ಹಾಗೂ ಭವ್ಯ ಇಬ್ಬರು ಸೇರಿ ನಿಂತಿರೋದು ನೋಡಿದ್ರೆ ಗೊತ್ತಗಲ್ವಾ, ಯಾರನ್ನು ಹೊರಗಿಡುತ್ತಾರೆ ಎಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರುತ್ತಾರೆ. ಚರ್ಚೆಯ ಬಳಿಕ ಗೌತಮಿ ಹಾಗೂ ಮಂಜು, ಫಿನಾಲೆ ಟಿಕೆಟ್​​ನಿಂದ ಧನರಾಜ್ ಹೊರಗಿಡಲು ಹೆಸರು ಹೇಳುತ್ತಾರೆ. ಆರಂಂಭದಲ್ಲಿ 2-3 ವಾರ ಧನು ಚೆನ್ನಾಗಿ ಆಡಿಲ್ಲ ಎಂದು ಕಾರಣ ನೀಡಿದ್ದಾರೆ. ಆಗ ಭವ್ಯ ನಗುತ್ತಲೇ ಮಾರಿಹಬ್ಬ ಜಾತ್ರೆಯಲ್ಲಿ ಕುರಿನ ಬಲಿ ಕೊಟ್ಟಾಯಿತು ಎಂದು ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಧನರಾಜ್ ಮುಖ ಸಪ್ಪೆ ಮಾಡಿದ್ದಾರೆ.

ಇನ್ನು ಧನರಾಜ್ ಹೆಸರು ಹೇಳಿದ್ದನ್ನ ಕ್ಯಾಪ್ಟನ್ ರಜತ್ ಅವರು ಪ್ರಶ್ನೆ ಮಾಡಿದ್ದಾರೆ. ಬಿಗ್​ಬಾಸ್​ನಲ್ಲಿ ಗೌತಮಿಗಿಂತ ಧನರಾಜ್ ವೀಕ್ ಆಗಿದ್ದಾರಾ?. ಆ ಹೆಸರು ಹೇಗೆ ಆಯ್ಕೆ ಮಾಡಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಮಂಜು ನಾನು ಇಲ್ಲಿ ಒಬ್ಬನೇ ಆಡುತ್ತಿರೋದು, ಯಾರನ್ನೂ ಜೊತೆಯಲ್ಲೇ ಕರೆದುಕೊಂಡಿಲ್ಲ ಎಂದು ಗೌತಮಿಯನ್ನ ದೂರ ಇಟ್ಟವರಂತೆ ಕೋಪದಲ್ಲೇ ಹೇಳಿದ್ದಾರೆ.

ಇನ್ನು ಚೈತ್ರಾ, ಧನರಾಜ್ ಇಬ್ಬರು ಫಿನಾಲೆ ಟಿಕೆಟ್​ನಿಂದ ಹೊರ ಬಿದ್ದಂತೆ ಆಗಿದೆ. ಆದರೆ ಈ ವಾರ ಬಿಗ್ ಮನೆಯಿಂದ ಹೊರಗಡೆ ಯಾರು ಬರುತ್ತಾರೆ ಎನ್ನುವುದು ಪ್ರೇಕ್ಷಕರ ಕುತೂಹಲ ಆಗಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಬಂದು ತೆರೆ ಎಳೆಯಬೇಕಿದೆ. ಅಲ್ಲಿವರೆಗೂ ಅಭಿಮಾನಿಗಳು ಕಾಯುವುದಂತು ಇದ್ದೆ ಇದೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment