/newsfirstlive-kannada/media/post_attachments/wp-content/uploads/2024/12/BBK_MOTHERS.jpg)
ಬಿಗ್ ಬಾಸ್ ಸೀಸನ್ 11 ಇನ್ನು ಕೆಲವು ದಿನಗಳು ಮಾತ್ರ ಇರಬಹುದು, ಏಕೆಂದರೆ 100 ದಿನಗಳ ಸಮೀಪಕ್ಕೆ ಬಂದಿದೆ. ಈ ಬಾರಿ ಗೆಲ್ಲುವ ಸ್ಪರ್ಧಿ ಯಾರು ಎನ್ನುವುದು ಮಾತ್ರ ಎಲ್ಲರಲ್ಲೂ ಮೂಡಿರುವ ಕುತೂಹಲವಾಗಿದೆ. ಅದರಂತೆ ಮನೆಯಲ್ಲಿ ಹೊಸ ಹೊಸ ಟಾಸ್ಕ್ ನೀಡಲಾಗುತ್ತಿದ್ದು ಸ್ಪರ್ಧಿಗಳು ಅಷ್ಟೇ ಸೊಗಸಾಗಿ ಟಾಸ್ಕ್ ಪೂರ್ಣಗೊಳಿಸುತ್ತಿದ್ದಾರೆ. ತ್ರಿವಿಕ್ರಮ್ ಹಾಗೂ ಭವ್ಯ ಈ ಇಬ್ಬರ ತಾಯಂದಿರಿಗೆ ಬಿಗ್ ಮನೆಗೆ ವೆಲ್ಕಮ್ ಹೇಳಿದ್ದಾರೆ.
ಅಮ್ಮನ ಬರುವಿಕೆಗಾಗಿ ಭವ್ಯ, ಮನೆಯ ಮೇನ್ ಡೋರ್ ಕಡೆಯೇ ಆಶ್ಚರ್ಯದಿಂದ ನೋಡುತ್ತ ನಿಂತಿದ್ದರು. ಹಾಗೆ ನೋಡುತ್ತಿದ್ದಂತೆ ಮುಖ್ಯದ್ವಾರ ತೆರೆದಿದ್ದು ಭವ್ಯ ಅವರ ಅಮ್ಮ ಆಗಮಿಸಿದ್ದಾರೆ. ಬರುತ್ತಿದ್ದಂತೆ ಹಾಯ್ ಬಂಗಾರಿ ಎಂದು ಹೇಳುತ್ತ, ಕೆನ್ನೆಗೆ ಪ್ರೀತಿಯಿಂದ ಭವ್ಯಗೆ ಮುತ್ತುಕೊಟ್ಟಿದ್ದಾರೆ. ಅಮ್ಮನನ್ನ ತಬ್ಬಿಕೊಂಡು ಭವ್ಯ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: BBK11; ರಾಧೆ-ಕೃಷ್ಣ ಹಾಗೆ ಇದ್ದೀರಿ, ಭವ್ಯ ಮೇಲಿನ ಮನದಾಳ ಹಂಚಿಕೊಂಡ ತ್ರಿವಿಕ್ರಮ್ ತಾಯಿ
ಇದಾದ ಬಳಿಕ ತ್ರಿವಿಕ್ರಮ್ ಅವರ ತಾಯಿ ಕೂಡ ಆಗಮಿಸುತ್ತಿದ್ದಂತೆ ತ್ರಿವಿಕ್ರಮ್ ನಿಂತಲ್ಲೇ ಕಣ್ಣೀರು ಹಾಕಿದ್ದಾರೆ. ಎಲ್ಲರ ಭೇಟಿ ನಂತರ ಭವ್ಯ ಹಾಗೂ ತ್ರಿವಿಕ್ರಮ್ ಕುಳಿತು ಮಾತನಾಡಿದ್ದಾರೆ. ಆಗ ನನ್ನ ಮಗನ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಜೊತೆಗಿದ್ದಿಯಾ. ರಾಧ-ಕೃಷ್ಣನ ಥರ ಇದೀರಿ ಎಂದು ತ್ರಿವಿಕ್ರಮ್ ತಾಯಿ ಹೇಳುತ್ತಿದ್ದಂತೆ ಭವ್ಯ ಸಂತಸ ಪಟ್ಟಿದ್ದಾರೆ.
ಪಜಲ್ ಅನ್ನು 10 ನಿಮಿಷದೊಳಗೆ ಪೂರ್ಣಗೊಳಿಸಿದರೆ ಮಾತ್ರ ಅಮ್ಮನನ್ನು ಭೇಟಿ ಆಗುವ ಅವಕಾಶವನ್ನು ಬಿಗ್ಬಾಸ್ ನೀಡಿದ್ದರು. ಬಿಗ್ ಬಾಸ್ ನೀಡಿದ್ದ ಟಾಸ್ಕ್ನಲ್ಲಿ ತ್ರಿವಿಕ್ರಮ್ ಹಾಗೂ ಭವ್ಯ ಇಬ್ಬರು ಯಶಸ್ವಿಯಾದ ಬೆನ್ನಲ್ಲೇ ತಾಯಂದಿರು ಮನೆಗೆ ಬಂದಿದ್ದಾರೆ. ಆದರೆ ಹೆಚ್ಚು ಸಮಯ ಏನು ಇರಲಿಲ್ಲ ಅಂತೆ ಕಾಣಿಸುತ್ತೆ. ಹೀಗಾಗಿಯೇ ತಾಯಿ ಹೊರಗಡೆ ಹೋಗುವಾಗ ಇನ್ನು 10 ನಿಮಿಷ ಸಮಯ ಕೊಡಿ ಎಂದು ತ್ರಿವಿಕ್ರಮ್ ಅಳುತ್ತಲೇ ಕೇಳಿದ್ದರು. ಆದರೆ ಇದಕ್ಕೆ ಬಿಗ್ಬಾಸ್ ಸಮ್ಮತಿ ಕೊಡಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ