/newsfirstlive-kannada/media/post_attachments/wp-content/uploads/2024/12/BBK11_MANJU.jpg)
ಬಿಗ್ಬಾಸ್ ಶೋ ಈಗಾಗಲೇ 90 ದಿನಗಳನ್ನು ದಾಟಿರುವುದರ ಜೊತೆಗೆ ಹೊಸ ವರ್ಷಕ್ಕೆ ವೆಲ್ಕಮ್ ಹೇಳಲು ಸಿದ್ಧವಾಗಿದೆ. ಶನಿವಾರ, ಭಾನುವಾರದ ಪಂಚಾಯತಿಯಲ್ಲಿ ಕಿಚ್ಚನ ಸಮ್ಮುಖದಲ್ಲಿ ಎಲ್ಲ ಸ್ಪರ್ಧಿಗಳು ಉಡುಗೊರೆಯನ್ನು ತಮ್ಮಷ್ಟಿದ ಸ್ನೇಹಿತರಿಗೆ ನೀಡಿದ್ದಾರೆ. ಐಶ್ವರ್ಯ ಮನೆ ಖಾಲಿ ಮಾಡಿದ್ದು ಈ ವಾರ ಮನೆಯಲ್ಲಿ 9 ಸ್ಪರ್ಧಿಗಳಿದ್ದು ಅಖಾಡಕ್ಕೆ ದುಮುಕಿದ್ದಾರೆ.
ಮನೆಯಲ್ಲಿ ಹೊಸದೊಂದು ಟಾಸ್ಕ್ ಶುರು ಮಾಡಲಾಗಿದ್ದು 2ನೇ ವಾರ ಕ್ಯಾಪ್ಟನ್ ಆಗಿರುವ ಭವ್ಯ ಈ ಕುರಿತು ಓದಿ ಹೇಳಿದ್ದಾರೆ. ದಿನಸಿ ಸಾಮಾಗ್ರಿಗಳನ್ನು ಗಳಿಸಿ ಕೊಡುವ ಸಾಮರ್ಥ್ಯ ಇರುವ 6 ಸದಸ್ಯರು ಯಾರು ಎಂದು ಘೋಷಿಸಬೇಕೆಂದು ಭವ್ಯ ತಿಳಿಸಿದ್ದಾರೆ. ಈ ವೇಳೆ ಎಲ್ಲ ಸ್ಪರ್ಧಿಗಳು ನಾನು.. ನಾನು ಎನ್ನುವಂತೆ ಕೈ ಮೇಲೆ ಎತ್ತಿದ್ದರು. ಈ ವೇಳೆ ಮಂಜು ಯಾವುದೇ ಟಾಸ್ಕ್ ಕೊಟ್ಟರೂ ನಾವು ಆಡಲು ಸಿದ್ಧರಾಗಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:BIGG BOSS; ಮನೆಯಲ್ಲಿ ಭಾವನಾತ್ಮಕ ಸಂಬಂಧ.. ಗಿಫ್ಟ್ ಕೊಡುವಾಗ ಕಣ್ಣೀರು ಹಾಕಿದ ಐಶ್ವರ್ಯ, ಚೈತ್ರಾ
ಇದು ಅಲ್ಲದೇ ಚೈತ್ರಾ ಅವರು ಟಾಸ್ಕ್ಗಳನ್ನು ಆಡುವುದಕ್ಕೆ ಆಗಲ್ಲ ಎಂದು ಮಂಜು ನೇರವಾಗಿ ಹೇಳಿದ್ದಾರೆ. ಈ ವೇಳೆ ಧನರಾಜ್ ನಾನು ಆಡಬಲ್ಲೇ ಎಂದಿದ್ದಾರೆ. ಆದರೆ ಇದಕ್ಕೂ ಕೌಂಟರ್ ಕೊಟ್ಟ ಮಂಜು ಧನು ನಿನಗೆ ಆಡೋಕೆ ಆಗಿಲ್ಲ ಎಂದರೆ ಸೆಟ್ಬ್ಯಾಕ್ ಆಗು ಎಂದು ಬಿಟ್ಟರು. ಇದಕ್ಕೆ ಗರಂ ಆದ ತ್ರಿವಿಕ್ರಮ್ ನಿನ್ನ ಪ್ರಾಬ್ಲಂ ಏನಣ್ಣ ಎಂದು ಪ್ರಶ್ನಿಸುತ್ತಿದ್ದಂತೆ ಮಂಜು ಸಪ್ಪೆ ಮುಖ ಮಾಡಿಕೊಂಡು ಕುಳಿತು ಬಿಟ್ಟರು.
ಇನ್ನು ಇಂದು ಕೊಟ್ಟಿರುವ ಟಾಸ್ಕ್ನಲ್ಲಿ ಮಂಜು ಹಾಗೂ ಚೈತ್ರಾ ಇಬ್ಬರೂ ಫೇಲ್ ಆದಂತೆ ಕಾಣುತ್ತಿದೆ. ಏಕೆಂದರೆ ಬಾಲ್ಗಳನ್ನು ಟೇಬಲ್ ಮೇಲೆ ಸರಿಯಾದ ಕ್ರಮದಲ್ಲಿ ಬಾಯಿಯ ಮೂಲಕವೇ ಮುಂದಕ್ಕೆ ಸಾಗಿಸಬೇಕು. ಆದರೆ ಈ ಗೇಮ್ನಲ್ಲಿ ಮಂಜು, ಚೈತ್ರಾ ಎಡವಿದಂತೆ ಕಾಣುತ್ತಿದ್ದಾರೆ. ಮನೆಯಲ್ಲಿ ದಿನಸಿಗಳು ಬೇಕು ಎಂದರೆ ಟಾಸ್ಕ್ ಅನ್ನು ಪೂರ್ತಿಯಾಗಿ ಮುಗಿಸಲೇ ಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ