/newsfirstlive-kannada/media/post_attachments/wp-content/uploads/2024/12/BIG_BOSS_CHAITRA.jpg)
ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ಶೋನ ಸೂಪರ್ ಸಂಡೇ ಪ್ರೋಮೋ ರಿಲೀಸ್ ಆಗಿದೆ. ಮನೆಯಲ್ಲಿ ಎಲ್ಲರೂ ನಗುನಗುತ್ತ ಇದ್ದು ಉಡುಗೊರೆಗಳನ್ನು ತಮಗಿಷ್ಟ ಬಂದವರಿಗೆ ಕೊಟ್ಟು ಸಖತ್ ಖುಷಿಯಾಗಿದ್ದಾರೆ. ಇದರ ಜೊತೆಗೆ ಕಣ್ಣೀರು ಕೂಡ ಹಾಕಿದ್ದಾರೆ. ಆ ಕಣ್ಣೀರು ಹಾಕಿದ್ದು ಯಾರು, ಯಾಕೆ ಕಣ್ಣೀರು ಹಾಕಿದರು ಎಂದು ಕಾರಣ ಇಲ್ಲಿದೆ.
ಬಿಗ್ ಬಾಸ್ ಸೀಸನ್ 11 ಈಗಾಗಲೇ 90 ದಿನಗಳನ್ನು ದಾಟಿ ಮುನ್ನುಗ್ಗಿತ್ತಿದೆ. ಕನ್ನಡಿಗರನ್ನು ರಂಜಿಸುವ ಈ ಶೋ ಎಲ್ಲರ ಮನೆ ಮಾತಾಗಿದೆ. ವಾರದ ಕೊನೆಯಲ್ಲಿ ಅಂದರೆ ಶನಿವಾರ, ಭಾನುವಾರ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಪಂಚಾಯತಿಯು, ಪ್ರೇಕ್ಷಕರ ಕೇಂದ್ರ ಬಿಂದುವಾಗಿರುತ್ತದೆ. ಕಿಚ್ಚ ಅವರು ಕೊನೆಯಲ್ಲಿ ಏನು ಹೇಳುತ್ತಾರೆಂದು ಕಾಯುತ್ತಿರುತ್ತಾರೆ.
ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಸುದೀಪ್ ಅವರು, ಹೊಸ ವರ್ಷಕ್ಕೆ ನಿಮ್ಮ ಪರ್ಸನಲ್ ವಸ್ತುವನ್ನು ಯಾರಿಗೆ ಕೊಡಲು ಇಷ್ಟ ಪಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ರಜತ್ ಅವರು ಧನರಾಜ್ಗೆ ವಸ್ತ್ರವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಮೋಕ್ಷಿತಾಗೆ ಐಶ್ವರ್ಯ ನೀಡಿದರೆ, ಮಂಜುಗೆ ಗೌತಮಿ ಗಿಫ್ಟ್ವೊಂದನ್ನು ನೀಡಿದ್ದಾರೆ. ಐಶ್ವರ್ಯಗೆ ಚೈತ್ರಾ ಉಡುಗೊರೆಯೊಂದನ್ನು ಕೊಟ್ಟಿದ್ದಕ್ಕೆ, ತಮ್ಮ ತಾಯಿಯನ್ನು ನೆನೆದು ಐಶ್ವರ್ಯ ಕಣ್ಣೀರು ಹಾಕಿದ್ದಾರೆ. ನನಗೆ ನೋಡಲು ಅಮ್ಮ ಇದಾರೆ, ಐಶ್ವರ್ಯ ಹೇಗೆ ಇರಬಹುದು ಎಂದು ಹೇಳಿ ಚೈತ್ರಾ ಅತ್ತಿದ್ದಾರೆ. ಗಿಫ್ಟ್ ಕೊಡುವಾಗ ಇಬ್ಬರು ಕಣ್ಣೀರು ಹಾಕಿದ್ದಾರೆ.
ಸ್ನೇಹಿತರಾದ ಹನುಮಂತು, ಧನರಾಜ್ ಒಬ್ಬರಿಗೊಬ್ಬರು ಏನೂ ಕೊಟ್ಟಿರುವುದು ವಿಡಿಯೋದಲ್ಲಿ ಇಲ್ಲ. ಭವ್ಯಗೌಡ ತ್ರಿವಿಕ್ರಮ್ಗೆ ಉಡುಗೊರೆ ಕೊಟ್ಟು ನಾಚಿ ನೀರಾಗಿದ್ದಾರೆ. ಇದಕ್ಕೆ ಎಂಥಾ ಸರ್ಪ್ರೈಸ್ ಅಲ್ಲ ಎಂದು ಕಿಚ್ಚ ಹೇಳಿದ್ದಕ್ಕೆ ಇಡೀ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ಇದರ ಜೊತೆಗೆ ಮನೆಯಿಂದ ಯಾರು ಹೋಗಬಹುದು ಎಂದು ರಾತ್ರಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ