/newsfirstlive-kannada/media/post_attachments/wp-content/uploads/2024/10/BBK113.jpg)
ಕನ್ನಡ ಬಿಗ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಕಣ್ಣೀರು ಸುರಿಸಿದ್ದಾರೆ. ಇಷ್ಟು ದಿನ ಜೋರು ಗಲಾಟೆ ಮಾಡಿಕೊಳ್ಳುತ್ತಿದ್ದ ಸ್ಪರ್ಧಿಗಳು ಮನಸ್ಸಿನ ಭಾರವನ್ನು ಇಳಿಸಿದ್ದಾರೆ. ಹೌದು, ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ತಮ್ಮ ಜೀವನದಲ್ಲಿ ಆದ ಕಷ್ಟಗಳನ್ನು ನೆನೆದು ಅತ್ತಿದ್ದಾರೆ.
ಇದನ್ನೂ ಓದಿ:ದೀಪಾವಳಿ ಹಬ್ಬದ ಸ್ಪೆಷಲ್.. ರಿಲಯನ್ಸ್ ಕಡೆಯಿಂದ ಜಿಯೋ ಫೈಬರ್ ಗ್ರಾಹಕರಿಗೆ ಭರ್ಜರಿ ಕೊಡುಗೆ
ಬಿಗ್ಬಾಸ್ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಕನ್ಫೆಷನ್ ರೂಂಗೆ ಕರೆದಿದ್ದಾರೆ. ಬಳಿಕ ನಿಮ್ಮ ಜೀವನದಲ್ಲಿ ಆದ ಕಹಿ ಘಟನೆ ಬಗ್ಗೆ, ಅದರಲ್ಲೂ ಯಾರ ಮುಂದಿಯೂ ಇಲ್ಲಿಯವರೆಗೆ ಹಂಚಿಕೊಳ್ಳದ ಒಂದು ವಿಚಾರವನ್ನು ಹೇಳಿ ಅಂತ ಬಿಗ್ಬಾಸ್ ಹೇಳಿದ್ದಾರೆ.
View this post on Instagram
ಆಗ ಬಿಗ್ಬಾಸ್ ಸ್ಪರ್ಧಿಗಳು ತಮ್ಮ ಜೀವನದಲ್ಲಿ ಉಂಟಾದ ಕಹಿ ನೆನಪನ್ನು ಮೆಲುಕು ಹಾಕಿದ್ದಾರೆ. ಈಗ ಕಲರ್ಸ್ ಕನ್ನಡದಲ್ಲಿ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಐಶ್ವರ್ಯಾ ಸಿಂಧೋಗಿ, ಉಗ್ರಂ ಮಂಜು, ಚೈತ್ರಾ ಕುಂದಾಪುರ, ಶಿಶಿರ್, ತ್ರಿವಿಕ್ರಮ್ ಕೂಡ ಕಣ್ಣೀರು ಹಾಕಿದ್ದಾರೆ.
ಚೈತ್ರಾ ಕುಂದಾಪುರ.. ಒಂದು ವರ್ಷ ನಾನು ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡ್ತಾ ಇದ್ದೇ ಅಂತ ಕಣ್ಣೀರು ಸುರಿಸಿದ್ದಾರೆ.
ಉಗ್ರಂ ಮಂಜು... ಊಟ ಮಾಡಿದೀಯಾ, ಚೆನ್ನಾಗಿದ್ದೀಯಾ ಅಂತ ಹೇಳೋರು, ಕೇಳುವವರು ಯಾರು ಇರಲಿಲ್ಲ. ಇನ್ನೂ ಕೆಲವು ಚಟಗಳಿಗೆ ಬಿದ್ದಿದ್ದೆ ಅಂತ ಹೇಳಿದ್ದಾರೆ.
ಐಶ್ವರ್ಯಾ ಸಿಂಧೋಗಿ.. ನಮ್ಮ ತಾಯಿ ಮನೆಯಲ್ಲಿ ಮಲಗಿಕೊಂಡಿರುತ್ತಾರೆ. ನಮ್ಮ ಸಂಬಂಧಿಕರು ಅಮ್ಮನ ತಲೆಯಲ್ಲಿ ಏನೇನೋ ತುಂಬುತ್ತಿದ್ದರು. ಆಗ ನಾನು ಅದೇ ವಿಚಾರಕ್ಕೆ ಅಮ್ಮನ ಮೇಲೆ ಕಿರುಚಾಡುತ್ತೇನೆ. ಆ ಗಲಾಟೆ ಆಗಿ ಕೆಲವು ದಿನಗಳ ಬಳಿಕ ಅಮ್ಮ ನನ್ನ ಬಿಟ್ಟು ಹೋಗಿರುತ್ತಾರೆ. ಅದು ಒಂದು ತಪ್ಪು ನಾನು ಮಾಡಬಾರದಾಗಿತ್ತು ಅಂತ ಹೇಳಿ ಅತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ