Bigg Boss; ಫ್ರೆಂಡ್​ಶಿಪ್ ಕಟ್ ಮಾಡಿಕೋ ಎಂದಿದ್ದ ಗೌತಮಿ ಗಂಡ.. ಮಂಜು ರಿಯಾಕ್ಟ್ ಮಾಡಿದ್ದು ಹೇಗೆ?

author-image
Bheemappa
Updated On
ಕಿಚ್ಚ ಹೇಳಿದರೂ ಗೌತಮಿ ಜೊತೆ ಫ್ರೆಂಡ್​ಶಿಪ್ ಕಟ್​ ಮಾಡಲಿಲ್ಲ ಯಾಕೆ.. ಮಂಜು ಕೊಟ್ಟ ಕಾರಣಗಳೇನು?
Advertisment
  • ಮಂಜು ಸಹೋದರಿ ಫೋನ್ ಮಾಡಿ ಗೌತಮಿ ಬಗ್ಗೆ ಏನ್ ಹೇಳಿದ್ರು?
  • ಮಂಜು ಜೊತೆ ಫ್ರೆಂಡ್​ಶಿಪ್ ಕಟ್ ಮಾಡು ಎಂದಿದ್ದ ಗೌತಮಿ ಗಂಡ
  • ನ್ಯೂಸ್​​ಫಸ್ಟ್​ನ ಸ್ಪೆಷಲ್ ಸಂದರ್ಶನದಲ್ಲಿ ಮಂಜು ಹೇಳಿರುವುದು ಏನು?

ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ಸೀಸನ್ 11 ಮುಗಿದು ಹೋಗಿದೆ. ಸದ್ಯ ಮನೆಯಲ್ಲಿ ಗೌತಮಿ ಅವರೊಂದಿಗಿನ ಸ್ನೇಹದ ಬಗ್ಗೆ ಮಂಜು ಅವರು ಮಾತನಾಡಿದ್ದಾರೆ.

ನ್ಯೂಸ್​ಫಸ್ಟ್​ನ ಸ್ಪೆಷಲ್ ಸಂದರ್ಶನದಲ್ಲಿ ಮಾತನಾಡಿದ ಬಿಗ್​ಬಾಸ್ ಸ್ಪರ್ಧಿ ಮಂಜು ಅವರು, ಬಿಗ್ ಬಾಸ್ ಮನೆ ಏನು ಅಂದರೆ, ಕಪ್ ಗೆಲ್ಲುವುದು, ದುಡ್ಡು ಗೆಲ್ಲುವುದು ಒಂದೇ ಅಲ್ಲ. ನೀ ಗೆದ್ದುಕೊಂಡು ಹೋಗೋದು. ನಿನ್ನನ್ನ ನೀನು ಗೆದ್ದುಕೊಂಡು ಹೋಗೋದು ಮುಖ್ಯ ಎಂದು ಗೌತಮಿ ಹೇಳಿದ್ದರು. ನಿಜವಾಗಲೂ ಅದು ಸತ್ಯ ಎಂದು ಹೇಳಿದರು.

ತಂದೆ ಬಂದಿದ್ದು ಗೆಲುವೇ, ತಾಯಿ ಬಂದು ಊಟ ಕೊಟ್ಟಿದ್ದೇ ಗೆಲುವೇ, ಮಟನ್ ಊಟ ಇಷ್ಟಪಟ್ಟಿದ್ದು ಗೆಲುವೇ, ತಂಗಿಯರು, ತಂಗಿಯರ ಮಕ್ಕಳು ಬಂದಿದ್ದು ಎಲ್ಲವೂ ಗೆಲುವು. ಕಪ್​ ಎತ್ತಿರುವುದೇ ಗೆಲುವಲ್ಲ. ಟ್ರೋಫಿ ಕೂಡ ಮುಖ್ಯ. ಆದರೆ ಚಿಕ್ಕ ಚಿಕ್ಕ ಇಂತಹ ಸಂಗತಿಗಳು ಕೂಡ ದೊಡ್ಡ ಗೆಲುವು. ಇವೆಲ್ಲಾ ನೆನಪಲ್ಲಿ ಉಳಿಯುವಂತವುಗಳು ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ:BIGG BOSS ಟ್ರೋಫಿ ಮಿಸ್ ಆಗಿದ್ದು ಯಾಕೆ.. ಈ ಬಗ್ಗೆ ಮಂಜು ಹೇಳಿರುವುದು ಏನೇನು?

ಗೌತಮಿ ಜೊತೆ ಫ್ರೆಂಡ್​ಶಿಪ್ ಕಟ್ ಮಾಡಿಕೊ ಎನ್ನುವುದರ ಬಗ್ಗೆ ಮಾತನಾಡಿದ ಮಂಜು, ಗೌತಮಿ ಗಂಡ ಬಂದು ಮೊದಲು ಕೇಳಿದ್ದು ಅದೇ. ಮಂಜು ವಿಚಾರಕ್ಕೆ ನೀನು ಯಾಕೆ ನಡುವೆ ಹೋಗುತ್ತಿದ್ದೇಯಾ?. ಮಂಜು ಈ ತರ ಮಾತನಾಡುತ್ತಿದ್ದಾರೆ ಎಂದರೆ ಅವರ ಗೇಮ್ ಆಡುತ್ತಿದ್ದಾರೆ. ನೀನು ಇನ್ವಾಲ್ ಆಗಬೇಡ ಎಂದಿದ್ದರು. ನನ್ನ ತಂಗಿನೂ ಬಂದು ನನಗೆ ಗೌತಮಿ ಜೊತೆ ಸೇರಬೇಡ ಎಂದು ಹೇಳಿದ್ದು ಇದೇ.

ಗೌತಮಿ ಜೊತೆ ಮಾತನಾಡುವಾಗ ನನ್ನ ತಂಗಿಯರು ಅಂಗಲ್ಲ. ಗೇಮ್ ವಿಚಾರದ ಬಗ್ಗೆ ಬಂದು ಅವರು ನಿನ್ನ ಬಳಿ ಮಾತನಾಡಬೇಡ ಎಂದು ಹೇಳಿದ್ದಾರೆ ಅಷ್ಟೇ ಅಂತ ಗೌತಮಿಗೆ ಹೇಳಿದ್ದೆ. ಚಿಕ್ಕ ತಂಗಿ ಫೋನ್ ಮಾಡಿ, ಗೌತಮಿ ಜೊತೆ ಫ್ರೆಂಡ್ ಆಗಿ ಇರು. ಶಾಂತವಾಗಿ ಕೋಪವೆಲ್ಲ ಹೋಗುತ್ತೆ ಎಂದು ಹೇಳಿದ್ದಳು. ಹೊರಗೆ ಬಂದ ಮೇಲೆ ಆಟದ ವಿಚಾರವಾಗಿ ಮಾತ್ರ ಆ ರೀತಿ ಮಾತನಾಡಿದ್ದು ಎಂದು ಗೌತಮಿ ಬಳಿ ತಂಗಿ ಮಾತನಾಡಿದ್ದಾರೆ. ಆಟದ ಸಮಯದಲ್ಲಿ ಗೌತಮಿ ಜೊತೆ ಫ್ರೆಂಡ್​ಶಿಪ್ ಕಟ್ ಮಾಡು ಅಂತ ನಮ್ಮ ಫ್ಯಾಮಿಲಿ ಹೇಳಿದ್ದು ಅಷ್ಟೇ. ಹೊರಗಡೆ ಏನು ಆಗುತ್ತಿದೆ ಎಂದು ನಮಗೆ ಒಳಗೆ ಗೊತ್ತಿರಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment