/newsfirstlive-kannada/media/post_attachments/wp-content/uploads/2025/01/MANJU_BIGG_BOSS.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಮುಕ್ತಾಯ ಕಂಡಿದೆ. ವಿನ್ನರ್ ಆಗಿ ಹನುಮಂತು ಅವರು ಹೊರ ಹೊಮ್ಮಿದ್ದು ತ್ರಿವಿಕ್ರಮ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್ ಫೈವ್ನಲ್ಲಿ ಸ್ಥಾನ ಪಡೆದಿದ್ದ ಮಂಜು ಅವರಿಗೆ ಟ್ರೋಫಿ ಮಿಸ್ ಆಗಿರುವುದು ಯಾಕೆ ಎಂಬುದರ ಬಗ್ಗೆ ಸ್ವತಹ ಅವರೇ ಮಾತನಾಡಿದ್ದಾರೆ.
ನ್ಯೂಸ್ಫಸ್ಟ್ನ ಸ್ಪೆಷಲ್ ಸಂದರ್ಶನದಲ್ಲಿ ಮಾತನಾಡಿದ ಬಿಗ್ಬಾಸ್ ಸ್ಪರ್ಧಿ ಮಂಜು ಅವರು, ನನಗೆ ಮೊದಲಿನಿಂದಲೂ ಆಟಗಳು ಎಂದರೆ ತುಂಬಾ ಇಷ್ಟ. ಶಾಲೆಯಲ್ಲಿ 4 ತರಗತಿಯಿಂದ ಕಾಲೇಜುವರೆಗೂ ಅಥ್ಲೆಟಿಕ್ಸ್ ಚಾಂಪಿಯನ್. ಪ್ರತಿಯೊಂದು ಅಥ್ಲೆಟ್ನಲ್ಲೂ ನಾನು ಮುಂದೆ ಇರುತ್ತಿದ್ದೆ. ಮನೆಯಲ್ಲಿ ನಾನು, ರಜತ್ ಆಡುವಾಗ ಸಖತ್ ಸ್ಪೀಡ್ ಅಲ್ಲಿ ಪಿಕ್ ಮಾಡುತ್ತಿದ್ದೇವು ಎಂದು ಹೇಳಿದ್ದಾರೆ.
ಇದನ್ನೂ ಓದಿ: BIGG BOSS ರನ್ನರ್ ಅಪ್ ತ್ರಿವಿಕ್ರಮ್ ಫಸ್ಟ್ ರಿಯಾಕ್ಷನ್.. ವಿನ್ನರ್ ಹನುಮಂತು ಬಗ್ಗೆ ಏನಂದ್ರು?
ಆಟದಲ್ಲಿ ನಮಗೆ ಯಾರು ವಿರೋಧಿಗಳು ಇರುತ್ತಾರೋ ಅವರ ಪ್ಲಸ್, ಮೈನಸ್ ತಿಳಿದುಕೊಂಡರೇ ನಮಗೆ ಗ್ರೇ ಏರಿಯಾ ಸಿಗುತ್ತದೆ. ಆದರೆ ಟ್ರೋಫಿ ಯಾಕೆ ಸಿಕ್ಕಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಕೊನೆ ವಾರಗಳಲ್ಲಿ ನನ್ನ ವ್ಯಕ್ತಿತ್ವ ಇಂಪಾರ್ಟೆಂಟ್ ಆಗಿತ್ತು. ಯಾರಾದರೂ ನನ್ನ ವಿರುದ್ಧ ಕೋಪ ತೋರಿಸಿದರೆ ನಾನು ಅವರಿಗಿಂತ ಹೆಚ್ಚು ಕೋಪ ಮಾಡಿಕೊಳ್ಳುತ್ತಿದ್ದೆ. ಮನೆಯಲ್ಲಿ ಯಾರ ಬಳಿ ಮಾತಾಡಲು ಇಷ್ಟ ಇಲ್ಲ ಎಂದರೆ ಮೈಮೇಲೆ ಬಿದ್ದು ಮಾತನಾಡಲು ಆಗಲ್ಲ ಎಂದು ಹೇಳಿದ್ದಾರೆ.
ನಾಮಿನೇಷನ್ ಪ್ರಕ್ರಿಯೆ ಬಂತು. ಗ್ರೂಪ್ ಪ್ರಾರಂಭ ಆಯಿತು. ಮಂಜುನೇ ಎಲ್ಲದರಲ್ಲೂ ಕಾಣಿಸುತ್ತಾನೆ ಅಂತ ಬಂತು. ಪ್ರತಿಸ್ಪರ್ಧಿಗಳು ಪ್ಲಾನ್ ಮಾಡಿದ್ದು ತಪ್ಪಿಲ್ಲ. ತಮ್ಮ ತಪ್ಪುಗಳನ್ನು ಮುಚ್ಚಿಕೊಂಡು ನಮ್ಮ ಚಿಕ್ಕಪುಟ್ಟ ತಪ್ಪುಗಳನ್ನು ಹೈಲೆಟ್ಸ್ ಮಾಡುತ್ತಾರೆ. ಈ ರೀತಿ ಆದಾಗ ಎಲ್ಲರಿಗೂ ರಿಯಾಕ್ಟ್ ಮಾಡೋಕೆ ಆಗಲ್ಲ. ಮನೆಯಲ್ಲಿ ಪ್ರಾರಂಭದಲ್ಲಿ ಎಲ್ಲರನ್ನು ಸೇರಿಸಿ ಮನರಂಜನೆ ಕಾರ್ಯಕ್ರಮ ಮಾಡಿದರು. ಒಬ್ಬನೇ ಮಾಡೋದು ಎಂದರೆ ಜೋಕರ್ ರೀತಿ. ಆ ತರನೂ ಪ್ರಯತ್ನ ಪಟ್ಟೆ. ಇದು ಬಿಟ್ಟರೇ ಟಾಸ್ಕ್ ವಿಚಾರಲ್ಲಿ ಕಾಣಿಸಿದ್ದೆ. ಆದರೆ ಗೆಲುವು, ಸೋಲು ಎಲ್ಲ ಮೇಲಿನವದ್ದು ಎಂದು ಮಂಜು ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ