BBK11; ಹನುಮಂತು, ಧನರಾಜ್ ಫುಲ್ ಟ್ರೋಲ್​.. ಇಣುಕಿ ನೋಡಿದ್ದಕ್ಕೆ ಕಿಚ್ಚನ ಕಚಗುಳಿ ಮಾತುಗಳು

author-image
Bheemappa
Updated On
BBK11; ಹನುಮಂತು, ಧನರಾಜ್ ಫುಲ್ ಟ್ರೋಲ್​.. ಇಣುಕಿ ನೋಡಿದ್ದಕ್ಕೆ ಕಿಚ್ಚನ ಕಚಗುಳಿ ಮಾತುಗಳು
Advertisment
  • ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಸ್ಪರ್ಧಿಗಳು
  • ಕಿಚ್ಚ ಸುದೀಪ್ ಅವರ ಮಾತುಗಳಿಗೆ ಬಿದ್ದು ಬಿದ್ದು ನಕ್ಕ ಮನೆ ಮಂದಿ
  • ಅಲ್ಲಿ ಬೇರೆ ಏನಾದರೂ ಕಾಣಿಸಿದ್ರೆ ಧನರಾಜ್ ಏನ್ ಮಾಡುತ್ತಿದ್ದರು?

ಶನಿವಾರದ ಎಪಿಸೋಡ್​ನಲ್ಲಿ ಕೋಪಗೊಂಡು ಮನೆಯಿಂದ ಹೊರ ಹೋಗಿದ್ದ ಕಿಚ್ಚ ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿ ಸಖತ್ ಖುಷಿ ಖುಷಿಯಾಗಿದ್ದಾರೆ. ಬಿಗ್​ಬಾಸ್​ ಸ್ಪರ್ಧಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಗೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರಿಗೂ ಮನವರಿಕೆ ಮಾಡಿದ್ದಾರೆ. ಅಲ್ಲದೇ ಬಿಗ್​ಬಾಸ್​ ಫ್ರೆಂಡ್ಸ್​ ಧನರಾಜ್ ಹಾಗೂ ಹನುಮಂತು ಇಣುಕಿ ನೋಡಿದ್ದರ ಬಗ್ಗೆ ಕಿಚ್ಚ ಫುಲ್ ತಮಾಷೆ ಮಾಡಿದ್ದಾರೆ.

publive-image

ಬಾದ್​ಷಾ ಸುದೀಪ್ ಜೊತೆ ಸೂಪರ್ ಸಂಡೇ ಸ್ಪೆಶಲ್ ಟಾಕ್​ನ ಪ್ರೋಮೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಿಚ್ಚನ ಮಾತುಗಳಿಗೆ ಮನೆ ಸದಸ್ಯರೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹೊರಗಡೆ ಟ್ರೋಲ್ ಅಂತ ನಡೆಯುತ್ತಿರುತ್ತೆ. ನಿಮಗೆ ಯಾವ ಥರ ಇಮೇಜ್ ಇರಬಹುದು ಎಂದು ಸುದೀಪ್ ಪ್ರಶ್ನಿಸಿದ್ದಾರೆ. ವಿಡಿಯೋಗಳನ್ನು ಕೂಡ ಪ್ಲೇ ಮಾಡಿಸಿದ್ದಾರೆ.

ಗೌತಮಿ ಜಾಧವ್​ರನ್ನ ಮಾತನಾಡಿಸಲು ಗಂಡ ಅಭಿಷೇಕ್ ಅವರು ಬಂದಾಗ ಇಬ್ಬರು ಬೇರೆ ರೂಮ್​ಗೆ ಹೋಗಿ ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿದ್ದರು. ಈ ವೇಳೆ ರೂಮ್ ಹೊರಗಡೆಯಿಂದ ಹನುಮಂತು, ಧನರಾಜ್ ಇಣುಕಿ ನೋಡುತ್ತಿದ್ದರು. ಇದು ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿರುವ ಸುದೀಪ್ ಅವರು, ನಿಮಗೆ ಏನ್ ನೋಡುವ ಕ್ಯೂರಾಸಿಟಿ ಇತ್ತು ಎಂದಿದ್ದಾರೆ. ಇದಕ್ಕೆ ಹನುಮಂತು ಕೇಕ್ ತಿನ್ನಿಸುತ್ತಿದ್ದರಲ್ಲ, ಅದನ್ನ ನೋಡುತ್ತಿದ್ದೇವು ಸರ್ ಎಂದಿದ್ದಾರೆ.

publive-image

ಇದನ್ನೂ ಓದಿ:BIGG BOSS; ಅಕ್ಕ-ತಮ್ಮನ ಭಾವನಾತ್ಮಕ ಕ್ಷಣ ಕಂಡು ಕಣ್ಣೀರಿಟ್ಟ ಬಿಗ್​​ಬಾಸ್​ ಮನೆ

ಮತ್ತೆ ಪ್ರಶ್ನೆ ಮಾಡಿದ ಸುದೀಪ್ ಅವರು, ಏನ್ ಎಕ್ಸ್​ಪರ್ಟ್ ಮಾಡುತ್ತಿದ್ದೀರಿ ಧನರಾಜ್ ಎಂದು ಕೇಳಿದಾಗ, 3 ತಿಂಗಳು ಆಯಿತಲ್ಲ ಸರ್.. ಎನ್ನುತ್ತಿದ್ದಂತೆ ಎಲ್ಲರು ನಕ್ಕಿದ್ದಾರೆ. ಒಂದು ವೇಳೆ ನೀವಿಬ್ಬರು ನೋಡುವಾಗ ಏನಾದರೂ ಕಂಟೇಂಟ್ ಸಿಕ್ಕಿದ್ದರೇ ಏನ್ ಮಾಡುತ್ತಿದ್ದೀರಿ ಎಂದು ಕಿಚ್ಚ ಪ್ರಶ್ನೆ ಮಾಡುತ್ತಿದ್ದಂತೆ, ಅದನ್ನೇ ರಿವೆಂಡ್ ಮಾಡಿ.. ರಿವೆಂಡ್ ಮಾಡಿ ಮನಸಲ್ಲೇ ಯೋಚನೆ ಮಾಡುತ್ತಿದ್ದೆ ಎಂದು ಹೇಳಿ ಎಲ್ಲರನ್ನೂ ಧನರಾಜ್ ನಗಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment