BIGG BOSS; ಇವತ್ತು ಒಬ್ಬರು, ನಾಳೆ ಒಬ್ಬರು ಮನೆ ಖಾಲಿ ಮಾಡ್ತಾರಾ.. ಎಲಿಮಿನೇಷನ್ ಹೇಗೆ?

author-image
Bheemappa
Updated On
BIGG BOSS; ಇವತ್ತು ಒಬ್ಬರು, ನಾಳೆ ಒಬ್ಬರು ಮನೆ ಖಾಲಿ ಮಾಡ್ತಾರಾ.. ಎಲಿಮಿನೇಷನ್ ಹೇಗೆ?
Advertisment
  • ಮನೆಯಲ್ಲಿ ಕುಚುಕು ಗೆಳೆಯನಿಗೆ ಕೈಕೊಟ್ಟನಾ ಹನುಮಂತು?
  • ರಿಸಲ್ಟ್ ಬಗ್ಗೆ ಏನು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ- ಮಂಜು
  • ಭಾನುವಾರ ಇಬ್ಬರನ್ನು ಎಲಿಮಿನೇಷನ್ ಮಾಡಿ ಬಿಡುತ್ತಾರಾ?

ಬಿಗ್​ಬಾಸ್​ನಲ್ಲಿ ಇಂದು ಮತ್ತು ನಾಳೆ ಕಿಚ್ಚ ಸುದೀಪ್ ಅವರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಇದು ನಾಮಿನೇಟ್ ಆಗಿರುವ ಸ್ಪರ್ಧಿಗಳ ಆಟವನ್ನು ನಿರ್ಧಾರ ಮಾಡಲಿದೆ. ಮಿಡ್ ವೀಕ್ ಎಲಿಮಿನೇಷನ್ ತಪ್ಪಿಸಿಕೊಂಡ ಕಂಟೆಸ್ಟೆಂಟ್​ಗಳಿಗೆ ಡಬಲ್ ಎಲಿಮಿನೇಷನ್ ಭೂತ ಬಂದು ಎರಗಿದೆ. ಇದರಿಂದ ಇಬ್ಬರನ್ನು ಒಂದೇ ಬಾರಿಗೆ ಹೊರ ಕಳಿಸುತ್ತಾರಾ ಅಥವಾ ಇವತ್ತು ಒಬ್ಬರು, ನಾಳೆ ಒಬ್ಬರು ಹೊರಗೆ ಹೋಗ್ತಾರಾ ಎನ್ನುವುದು ಖಚಿತವಾಗಿಲ್ಲ.

ಹನುಮಂತ ಅವರು ಎಲಿಮಿನೇಷನ್​​ನಿಂದ ಮೋಕ್ಷಿತಾ ಪೈರನ್ನು ಬಚಾವ್ ಮಾಡಿದ್ದಾರೆ. ಹನುಮಂತ ಸೇವ್ ಮಾಡಿದ್ದರಿಂದ ಮೋಕ್ಷಿತಾ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆ ತ್ರಿವಿಕ್ರಮ್ ಸೇಫ್ ಆಗಿದ್ದಾರೆ. ಉಳಿದಂತೆ ಗೌತಮಿ, ರಜತ್, ಮಂಜು, ಭವ್ಯ ಹಾಗೂ ಧನರಾಜ್ ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆದವರಲ್ಲಿ ಇಬ್ಬರಿಗೆ ಗೇಟ್ ಪಾಸ್​ ಕೊಟ್ಟರೇ ಕೊನೆ ವಾರದಲ್ಲಿ 6 ಸ್ಪರ್ಧಿಗಳು ಇರಲಿದ್ದಾರೆ. ಈ 6 ಸ್ಪರ್ಧಿಗಳಲ್ಲಿ ಮತ್ತೆ ಒಬ್ಬರು ಮನೆ ಖಾಲಿ ಮಾಡುತ್ತಾರೆ. ಕೊನೆಯಲ್ಲಿ 5 ಸ್ಪರ್ಧಿಗಳು ಮಾತ್ರ ಉಳಿಯುತ್ತಾರೆ.

publive-image

ಬಿಗ್ ಬಾಸ್ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಯಾರು ಮನೆ ಬಿಟ್ಟು ಬರುತ್ತಾರೆ ಎನ್ನುವುದು ಕಾಡುತ್ತಿದೆ. ಇದರಲ್ಲಿ ಇಬ್ಬರು ಇಂದೇ ಜಾಗ ಖಾಲಿ ಮಾಡ್ತಾರಾ ಅಥವಾ ಇವತ್ತು ಒಬ್ಬರು, ಭಾನುವಾರ ಅಂದರೆ ನಾಳೆ ಒಬ್ಬರು ಹೊರ ಬರುತ್ತಾರಾ ಎಂದು ಕಾದು ನೋಡಬೇಕಿದೆ. ಇಲ್ಲವಾದರೆ ಭಾನುವಾರವೇ ಇಬ್ಬರಿಗೆ ನಿಮ್ಮ ಆಟ ಮುಗಿತು, ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ ಎಂದು ಬಿಗ್​ಬಾಸ್ ಹೇಳಬಹುದಾ?. ಸದ್ಯ ಬಿಟ್ಟಿರುವ ಪ್ರೋಮೋದಲ್ಲಿ ಡೋರ್ ಅಂತೂ ಓಪನ್ ಆಗಿದೆ. ಯಾರು ಕೂಡ ಹೊರ ಹೋಗಿರುವುದನ್ನು ತೋರಿಸಿಲ್ಲ.

ಇನ್ನು ಡಬಲ್ ಎಲಿಮಿನೇಷನ್ ಇರುವ ಕಾರಣ ನಾಮಿನೇಟ್ ಆಗಿರುವ ಗೌತಮಿ, ರಜತ್, ಮಂಜು, ಭವ್ಯ ಹಾಗೂ ಧನರಾಜ್ ಮೊಗದಲ್ಲಿ ಆತಂಕ ಕಾಡುತ್ತಿದೆ. ನಗು ಎನ್ನುವುದು ಮಾಯವಾಗಿ ಕಣ್ಣೀರು ಬಾಕಿ ಉಳಿದಿದೆ. ಕೊನೆ ಹಂತಕ್ಕೆ ಬಂದು ಹೊರ ನಡೆದರೆ ಹೇಗೆ ಎಂದು ಯೋಚನೆಯಲ್ಲಿ ತೊಡಗಿದ್ದಾರೆ. ಹನುಮಂತು, ಮೋಕ್ಷಿತಾ ಅವರನ್ನು ಉಳಿಸಿಕೊಂಡಿದ್ದು ಧನರಾಜ್​ಗೆ ಕೈಕೊಟ್ಟಿದ್ದಾರೆ. ಮಂಜು, ಮೋಕ್ಷಿತಾ ಜೊತೆ ಮಾತನಾಡಿದ್ದು ರಿಸಲ್ಟ್ ಬಗ್ಗೆ ಏನು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇಷ್ಟು ದಿನ ಮಾಡಿರೋದೆ ರಿಸಲ್ಟ್​ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment