/newsfirstlive-kannada/media/post_attachments/wp-content/uploads/2025/01/MOKSHITHA_BROTHER_1.jpg)
ಕರ್ನಾಟಕದ ದೊಡ್ಡ​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 90ಕ್ಕೂ ಹೆಚ್ಚು ದಿನಗಳನ್ನು ಪೂರೈಸಿದೆ. ಇನ್ನೇನೂ ಕೆಲವು ದಿನಗಳಲ್ಲಿ ಈ 11ರ ಸೀಸನ್ ಗ್ರ್ಯಾಂಡ್​ ಫಿನಾಲೆ ಸಮೀಪಿಸುತ್ತಿದೆ. ಮೆನೆಯಲ್ಲಿ ಟಫ್ ಟಾಸ್ಕ್​ಗಳನ್ನು ಕೊಡಲಾಗುತ್ತಿದೆ. ಇದರ ಜೊತೆಗೆ ಸ್ಪರ್ಧಿಗಳ, ಕುಟುಂಬಸ್ಥರು ಬಿಗ್​ಬಾಸ್ ಮನೆಗೆ ಬಂದು ಹೋಗುತ್ತಿದ್ದಾರೆ. ಇಂದು ಮೋಕ್ಷಿತಾ ಕುಟುಂಬ ಬಂದಿದ್ದು ಅಕ್ಕ-ತಮ್ಮನ ಭಾವನಾತ್ಮಕ ಕ್ಷಣಗಳನ್ನು ಕಂಡು ಬಿಗ್​​ಬಾಸ್​ ಮನೆ ಸದಸ್ಯರು ಕಣ್ಣೀರಿಟ್ಟಿದ್ದಾರೆ.
ಭವ್ಯ, ತ್ರಿವಿಕ್ರಮ್ ತಾಯಿಯವರು ಮನೆಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದರು. ಇವರ ಬಳಿಕ ರಜತ್ ಅವರ ಕುಟುಂಬ ಆಗಮಿಸಿತ್ತು. ಇದರ ಬೆನ್ನಲ್ಲೇ ಇಂದು ಮನೆಗೆ ಮೋಕ್ಷಿತಾ ಅವರ ಫ್ಯಾಮಿಲಿ ಆಗಮಿಸಿದೆ. ಹೊಸ ವರ್ಷದಂದೇ ಮೋಕ್ಷಿತಾ ಫ್ಯಾಮಿಲಿ ಬಂದಿದೆ. ತಂದೆ, ತಾಯಿ ಹಾಗೂ ಸಹೋದರನ ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಹೋದರನನ್ನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2025/01/MOKSHITHA_BROTHER_2.jpg)
ಅಕ್ಕ ತಮ್ಮ ಒಂದಾಗೋ ಭಾವನಾತ್ಮಕ ಘಟಳಿಗೆಯಲ್ಲಿ ಇಡೀ ಮನೆ ಸದಸ್ಯರು ಕಣ್ಣೀರಿಟ್ಟಿದ್ದಾರೆ. ಸಹೋದರನನ್ನು ನೋಡಿದ ತಕ್ಷಣ ಮೋಕ್ಷಿತಾ, ಖುಷಿ ಬಂದಿದ್ದಾನೆಂದು ಅಳುತ್ತಲೇ ಓಡೋಡಿ ಬಂದರು. ಇಷ್ಟು ದಿನ ಬಿಟ್ಟು ಇದ್ದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ನನ್ನನ್ನು ಮರೆತು ಹೋಗಿಬಿಟ್ಟಿದ್ದಾನೆ ಎಂದು ತಮ್ಮನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಸುರಿಸಿದ್ದಾರೆ.
ಅಕ್ಕ-ತಮ್ಮನ ಬಾಂಧವ್ಯ ನೋಡಿ ತಂದೆ, ತಾಯಿ ಕೂಡ ಅತ್ತಿದ್ದಾರೆ. ಈ ಚಿಕ್ಕ ಕುಟುಂಬವನ್ನು ನೋಡಿದ ರಜತ್, ಹನುಮಂತು, ಮಂಜು, ಚೈತ್ರಾ, ಗೌತಮಿ, ತ್ರಿವಿಕ್ರಮ್, ಭವ್ಯ ಎಲ್ಲರೂ ಫುಲ್ ಸೈಲೆಂಟ್ ಆಗಿದ್ದರು. ಮೋಕ್ಷಿತಾ ಅಳುವುದನ್ನು ನೋಡಿ ತಡೆಯಲಾಗದೇ ಗೌತಮಿ ಕೂಡ ಅತ್ತಿದ್ದಾರೆ. ಅಕ್ಕ-ತಮ್ಮನ ಭಾವನಾತ್ಮಕ ಕ್ಷಣಗಳಿಗೆ ಇಡೀ ಮನೆಯೇ ದುಃಖದಲ್ಲಿ ಮುಳುಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us