BIGG BOSS; 5 ಕಂಟೆಸ್ಟೆಂಟ್ಸ್​ನಲ್ಲಿ 1 ಕೋಟಿ ವೋಟ್ ಪಡೆದ ಸ್ಪರ್ಧಿ ಯಾರು?

author-image
Bheemappa
Updated On
BIGG BOSS; 5 ಕಂಟೆಸ್ಟೆಂಟ್ಸ್​ನಲ್ಲಿ 1 ಕೋಟಿ ವೋಟ್ ಪಡೆದ ಸ್ಪರ್ಧಿ ಯಾರು?
Advertisment
  • ವೋಟಿಂಗ್​ನಲ್ಲಿ ದಾಖಲೆ ಬರೆದ ಬಿಗ್​ಬಾಸ್ ಸೀಸನ್- 11
  • ಬಿಗ್​ಬಾಸ್​ನ ಕೊನೆ ಘಳಿಗೆಯಲ್ಲಿ ಹೊರ ಬಂದ ಭವ್ಯಗೌಡ
  • ಇಂದು ನಡೆಯುವುದು ಕಿಚ್ಚನ ಕೊನೆ ಬಿಗ್​ಬಾಸ್ ನಿರೂಪಣೆ

ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಇಂದು ಕೊನೆ ದಿನವಾಗಿದ್ದು ವಿನ್ನರ್ ಯಾರೆಂದು ಗೊತ್ತಾಗಲಿದೆ. ಅದ್ಧೂರಿ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಸ್ಪರ್ಧಿಯ ಕೈ ಮೇಲೆ ಎತ್ತುವ ಮೂಲಕ ವಿನ್ನರ್ ಅನ್ನು ಘೋಷಣೆ ಮಾಡಲಿದ್ದಾರೆ. ಅಲ್ಲದೇ ಈ ಬಾರಿ ದಾಖಲೆ ಮಟ್ಟದಲ್ಲಿ ಪ್ರೇಕ್ಷಕರಿಂದ ವೋಟ್​ಗಳು ಬಂದಿರುವುದು ಅಚ್ಚರಿ ಮೂಡಿಸಿದೆ. ಇದರ ಜೊತೆಗೆ ಕಿಚ್ಚ ಸುದೀಪ್ ಅವರಿಗೆ ಇದು ಕೊನೆಯ ಬಿಗ್​ಬಾಸ್ ನಿರೂಪಣೆ ಆಗಿದೆ.

ಶನಿವಾರದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಿಂದ ಭವ್ಯಗೌಡ ಅವರು ಎಲಿಮಿನೇಷನ್ ಆಗಿದ್ದಾರೆ. ಆರನೇ ಸ್ಥಾನಕ್ಕೆ ಭವ್ಯ ತೃಪ್ತಿ ಪಟ್ಟಿದ್ದು ಕೊನೆಯ ಹಂತದಲ್ಲಿ ಮನೆಯಿಂದ ಹೊರ ಬಂದಿದ್ದಕ್ಕೆ ಸಖತ್ ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಗ್ರ್ಯಾಂಡ್​ ಫಿನಾಲೆಯಲ್ಲಿ ಇಬ್ಬರು ವೈಲ್ಡ್​ ಕಾರ್ಡ್​ ಎಂಟ್ರಿ ಸೇರಿ ಒಟ್ಟು ಐವರು ಸ್ಪರ್ಧಿಗಳು ಇದ್ದಾರೆ. ಇದರಲ್ಲಿ ಒಬ್ಬರ ಕೊರಳಿಗೆ ಮಾತ್ರ ವಿಜಯಮಾಲೆ ಬೀಳಲಿದೆ. ಇಂದು ಸಂಜೆ ವಿನ್ನರ್ ಯಾರು ಎಂಬುದು ಅಂತಿಮವಾಗಲಿದೆ.

publive-image

ಇದನ್ನೂ ಓದಿ:Doctor​ ಕಿಡ್ನಾಪ್ ಕೇಸ್; 3 ಕೋಟಿ ಹಣ, 3 ಕೋಟಿ ಮೊತ್ತದ ಚಿನ್ನಕ್ಕೆ ಡಿಮ್ಯಾಂಡ್.. ಕೊನೆಗೆ 300 ರೂ ಕೊಟ್ಟು ಹೋದ ಖದೀಮರು

ಈ ಬಾರಿಯ ಬಿಗ್​ಬಾಸ್ ವೋಟ್​ನಲ್ಲಿ ಭಾರೀ ಹೆಚ್ಚಳವಾಗಿದ್ದು ಒಟ್ಟು 5,23,89,318 ಮತಗಳು ಬಂದಿವೆ. ಇದರಲ್ಲಿ ಒಬ್ಬ ಸ್ಪರ್ಧಿಗೆ ಕೋಟಿ ವೋಟ್​ಗಳು ಬಿದ್ದಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಶೋ ನಡೆಸುತ್ತಿರುವ ಚಾನೆಲ್ ಸೋಶಿಯಲ್ ಮೀಡಿಯಾದಲ್ಲಿ ಗ್ರ್ಯಾಂಡ್ ಫಿನಾಲೆಯಲ್ಲಿ ಟ್ರೋಫಿ ಹಿಡಿಯೋ ಕೋಟಿ ವೋಟಿನ ಅಧಿಪತಿ ಯಾರು? ಎಂದು ಟ್ಯಾಗ್​ಲೈನ್ ಕೊಟ್ಟಿದೆ. ಅಂದರೆ ಹನುಮಂತು, ತ್ರಿವಿಕ್ರಮ್, ರಜತ್, ಮಂಜು ಹಾಗೂ ಮೋಕ್ಷಿತಾ ಇವರಲ್ಲಿ ಒಬ್ಬ ಸ್ಪರ್ಧಿ ಕೋಟಿ ವೋಟ್​ಗಳನ್ನು ಪಡೆದು ದಾಖಲೆ ಬರೆದಿದ್ದಾರೆ ಎನ್ನುವುದಂತೂ ದಿಟ. ಸದ್ಯಕ್ಕೆ ಆ ಸ್ಪರ್ಧಿ ಯಾರು ಎನ್ನುವುದು ಸಸ್ಪೆನ್ಸ್​ ಆಗಿದೆ.

ರಿಯಾಲಿಟಿ ಶೋ ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ ಇಂದು ಸಂಜೆ 6 ಗಂಟೆಗೆ ಶುರುವಾಗಲಿದ್ದು ವಿಜಯಿಶಾಲಿ ಹೊರಹೊಮ್ಮಲಿದ್ದಾರೆ. ಇನ್ನು ಬಿಗ್​ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಭವ್ಯಗೌಡ 6ನೇ ಪೈನಲಿಸ್ಟ್​ ಆಗಿ ಆಚೆ ಬಂದಿದ್ದಾರೆ. ಕನ್ನಡ ಕಿರುತೆರೆಯ ಗೀತಾ ಸೀರಿಯಲ್​ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡಿದ್ದರು. ಇಂದು ಸಂಜೆ ನಡೆಯುವ ಶೋಗಾಗಿ ಪ್ರೇಕ್ಷಕರೆಲ್ಲಾ ಎದುರು ನೋಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment