/newsfirstlive-kannada/media/post_attachments/wp-content/uploads/2025/01/BBK11_1-2.jpg)
ಕನ್ನಡ ಕಿರುತೆರೆಯ ದೊಡ್ಡ ಶೋ ಬಿಗ್​ಬಾಸ್ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಮನೆಯಲ್ಲಿ ಉಳಿದ ಆರು ಸ್ಪರ್ಧಿಗಳಲ್ಲಿ ವಿನ್ನರ್ ಯಾರು ಆಗುತ್ತಾರೆ ಎಂದು ಪ್ರೇಕ್ಷಕರೆಲ್ಲಾ ಎದುರು ನೋಡುತ್ತಿದ್ದಾರೆ. ಶೋ ಎಲ್ಲ ಅಂದುಕೊಂಡಂತೆ ಯಶಸ್ವಿಯಾಗಿ ಸಾಗಿದೆ. ಇದರ ಜೊತೆ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕೊನೆಯ ಬಿಗ್​ಬಾಸ್ ಶೋ ಇದಾಗಿದೆ. 17 ವಾರ ಬಿಗ್​ಬಾಸ್ ಕನ್ನಡಿಗರನ್ನು ರಂಜಿಸಿದೆ.
ಗ್ರ್ಯಾಂಡ್ ಫಿನಾಲೆ ಸಮಾರಂಭದ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಯಾವ ಸ್ಪರ್ಧಿಯ ಕೈ ಮೇಲೆ ಎತ್ತುತ್ತಾರೋ ಆ ಸ್ಪರ್ಧಿ ವಿನ್ನರ್ ಆಗಲಿದ್ದಾರೆ. ಆ ಅದೃಷ್ಟವಂತ ಯಾರು ಎನ್ನುವುದೇ ಸದ್ಯದ ಕುತೂಹಲವಾಗಿದೆ. ಇದಕ್ಕಾಗಿ ಎರಡು ದಿನ ಅಂದರೆ ಜನವರಿ 25 ಹಾಗೂ 26 ರಂದು ಸಂಜೆ 6 ಗಂಟೆಗೆ ಬಿಗ್​ಬಾಸ್ ಆರಂಭವಾಗಲಿದೆ. ಈ ವೇಳೆ ಸಾಕಷ್ಟು ಮನರಂಜನೆ ಕಾರ್ಯಕ್ರಮಗಳು ವೀಕ್ಷಕರಿಗೆ ಮನರಂಜನೆ ನೀಡಲಿವೆ.
ಇದನ್ನೂ ಓದಿ: BIGG BOSS ಜರ್ನಿ ಶೇರ್ ಮಾಡಿಕೊಳ್ಳಲಿರೋ ಸ್ಪರ್ಧಿಗಳು.. ಕುತೂಹಲ ಹಚ್ಚಿಸಿದ ಇಂದಿನ ಶೋ
17 ವಾರಗಳಿಂದ ಯಶಸ್ವಿಯಾಗಿ ಸಾಗಿಕೊಂಡ ಬಂದ ಬಿಗ್​​ಬಾಸ್​ಗೆ ಗ್ರ್ಯಾಂಡ್​ ಫಿನಾಲೆ ಬಳಿಕ ತೆರೆ ಬೀಳಲಿದೆ. ಈ ಬಾರಿ ವೈಲ್ಡ್​ ಕಾರ್ಡ್​ನಿಂದ ಎಂಟ್ರಿಕೊಟ್ಟಿದ್ದ ಕಂಟೆಸ್ಟೆಂಟ್ಸ್​ ಸೇರಿ ಒಟ್ಟು 20 ಸ್ಪರ್ಧಿಗಳು ಮನೆಯಲ್ಲಿ ಟಾಸ್ಕ್​ಗಳಲ್ಲಿ ಆಡಿದ್ದಾರೆ. ಚೆನ್ನಾಗಿ ಆಡಿದವರು ಫಿನಾಲೆವರೆಗೆ ತಲುಪಿದ್ದಾರೆ. ಟಾಸ್ಕ್​ನಲ್ಲಿ ಅಷ್ಟಕಷ್ಟೇ ಆಡಿದವರು ಮನೆ ಖಾಲಿ ಮಾಡಿ ಹೊರಗಿದ್ದಾರೆ. ಆದರೆ ಈಗ ಎಲ್ಲರ ಯೋಚನೆ ಯಾರು ಆ ಬಿಗ್​ಬಾಸ್​ ವಿನ್ನರ್ ಎನ್ನುವುದು ಆಗಿದೆ. ಹನುಮಂತು, ತ್ರಿವಿಕ್ರಮ್, ಮಂಜು, ಭವ್ಯ, ಮೋಕ್ಷಿತಾ ಹಾಗೂ ರಜತ್ ಕಿಶನ್ ಇವರಲ್ಲಿ ಒಬ್ಬರು ಗೆಲುವು ಸಾಧಿಸಲಿದ್ದಾರೆ.
ಒಂದು ಕಡೆ ಹನುಮಂತನೇ ಈ ಬಾರಿ ಬಿಗ್​ಬಾಸ್​ ಟ್ರೋಫಿ ಗೆಲ್ಲುತ್ತಾನೆ ಎಂದು ಹೆಚ್ಚಿನ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಮಾಡುತ್ತಿದ್ದಾರೆ. ಅಲ್ಲದೇ ಉಳಿದ ಸ್ಪರ್ಧಿಗಳು ಕೂಡ ಜನರ ಬಳಿ ವೋಟ್​ಗಾಗಿ ಮನವಿ ಮಾಡಿದ್ದಾರೆ. ಹೆಚ್ಚಿನ ವೋಟ್ ಯಾರಿಗೆ ಬರುತ್ತಾವೋ ಅವರೇ ವಿನ್ನರ್ ಎಂದು ಘೋಷಣೆ ಮಾಡಲಾಗುತ್ತದೆ. ಮತದಾರರು ಯಾರ ಕಡೆ ಒಲವು ತೋರಿದ್ದಾರೆ ಎಂದು ಕಾದು ನೋಡಬೇಕಿದೆ. ಸ್ಪರ್ಧಿಗಳಿಗೆ ತಾವು ಆಡಿದ ಆಟದ ಜೊತೆಗೆ ಕೊಂಚ ಅದೃಷ್ಟನೂ ಕೈ ಹಿಡಿಯಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ