BBK11; ಬಿಗ್​​ಬಾಸ್​​ನಲ್ಲಿ ಸಿಹಿ ಮುತ್ತಿನ ಸುರಿಮಳೆ.. ಯಾರು ಯಾರಿಗೆ ಎಷ್ಟು ಕಿಸ್ ಕೊಟ್ಟರು?

author-image
Bheemappa
Updated On
BBK11; ಬಿಗ್​​ಬಾಸ್​​ನಲ್ಲಿ ಸಿಹಿ ಮುತ್ತಿನ ಸುರಿಮಳೆ.. ಯಾರು ಯಾರಿಗೆ ಎಷ್ಟು ಕಿಸ್ ಕೊಟ್ಟರು?
Advertisment
  • ಹೆಚ್ಚು ಕಿಸ್ ಕೊಟ್ಟಿದ್ದಕ್ಕೆ ಚೈತ್ರಾಗೆ, ರಜತ್ ಅವರು ಏನೆಂದು ಹೇಳಿದರು?
  • ಈ ವಾರ ಮನೆ ಖಾಲಿ ಮಾಡಿಕೊಂಡು ಹೋಗುವ ಸ್ಪರ್ಧಿ ಯಾರು.?
  • ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​

ಕಿಸ್​ ಕಿಸ್​​ ಕಿಸ್ ಕಿಸ್ಕಾ.. ಕಿಸ್​ ಕಿಸ್​​ ಕಿಸ್ ಕಿಸ್ಕಾ ಎಂದು ಪುಷ್ಪ2 ಸಿನಿಮಾದಲ್ಲಿ ಶ್ರೀಲೀಲಾ ಭರ್ಜರಿಯಾಗಿ ಸೊಂಟ ಬಳುಕಿಸಿ ಹುಡುಗರ ಕಣ್ಣು ಕೆಂಪಾಗುವಂತೆ ಮಾಡಿದ್ದರು. ಕನ್ನಡದ ಕಿಸ್ ಮೂವಿ ಹೀರೋಯಿನ್, ಪುಷ್ಪ -2ದಲ್ಲಿ ಕಿಸ್ ಸಾಂಗ್​ಗೂ ಶ್ರೀಲೀಲಾನೇ ನಟಿ. ಕಿಸ್​ಗೂ ಶ್ರೀಲೀಲಾಗೂ ಏನೋ ಒಂದು ನಂಟು. ಇದು ಏನೇ ಇರಲಿ, ಇದೀಗ ಕನ್ನಡದ ಬಿಗ್​ಬಾಸ್​ನಲ್ಲೂ ಕಿಸ್​ಗಳು ಜೋರಾಗಿದ್ದು ಕಚಗುಳಿ ಇಡುವ ಮಾತುಗಳು ಎಲ್ಲರನ್ನು ನಗಿಸಿವೆ.

ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಇನ್ನೇನು ಕೊನೆಯ ಹಂತಕ್ಕೆ ಬಂದಿದೆ ಎಂದು ಹೇಳಬಹುದು. ಎಲ್ಲ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಬಂದು ಹೋಗಿದ್ದಾರೆ. ಇದರಲ್ಲಿ ಕೆಲವರು ಕಣ್ಣೀರು ಹಾಕಿದ್ರೆ ಇನ್ನು ಕೆಲವರು ಹೀಗೆ ಆಡಬೇಕು, ಹಾಗೇ ಆಡಬೇಕು ಎಂದು ಧೈರ್ಯ ಹೇಳಿ ವಾಪಸ್ ಹೋಗಿದ್ದಾರೆ. ಸದ್ಯ ಈ ವಾರ ಯಾರು ಮನೆಯಿಂದ ಹೋಗುತ್ತಾರೆ ಎನ್ನುವುದು ಎಲ್ಲರ ದೃಷ್ಟಿಯನ್ನು ಕೇಂದ್ರಿಕರಿಸಿದೆ. ಇದಕ್ಕೆ ಉತ್ತರ ಶನಿವಾರ ಅಥವಾ ಭಾನುವಾರ ಸಿಗಲಿದೆ.

publive-image

ಇದನ್ನೂ ಓದಿ:BIGG BOSS; ಅಮ್ಮನನ್ನು ತಬ್ಬಿಕೊಂಡು ಭವ್ಯ ಕಣ್ಣೀರು.. ತ್ರಿವಿಕ್ರಮ್ ಅತ್ತಿದ್ದು ಯಾಕೆ?

ಇನ್ನು ಕಿಸ್ ಸಮಾಚಾರಕ್ಕೆ ಬಂದರೆ ಬಿಗ್ ಮನೆಯಲ್ಲಿ ಒಂದು ಟಾಸ್ಕ್ ಕೊಡಲಾಗಿದೆ. ಅದೇ ಕೆಂಪು ಕಲರ್ ಲಿಫ್ಟಿಕ್​ ಅನ್ನು ತುಟಿಗೆ ಹಚ್ಚಿಕೊಂಡು ಬಳಿಕ ಅದನ್ನು ವೈಟ್ ಬೋರ್ಡ್​ಗೆ ಹೋಗಿ ಕಿಸ್ ಕೊಡಬೇಕು. ಈ ರೀತಿ ಕಿಸ್ ಕೊಡುವಾಗ ಕಚಗುಳಿ ಇಡುವ ಕೆಲ ಮಾತುಗಳು ಎಲ್ಲರನ್ನೂ ನಕ್ಕಿ ನಗಿಸಿವೆ. ಹೀಗೆ ಯಾರು ಹೆಚ್ಚು ಕಿಸ್​ಗಳನ್ನು ಕೊಡುತ್ತಾರೋ ಅವರೇ ವಿನ್ನರ್ ಅನಿಸುತ್ತೆ. ಅದಕ್ಕೆ ಹನುಮಂತು, ಧನರಾಜ್, ಚೈತ್ರಾ ನಾ ಮುಂದು ನೀ ಮುಂದು ಎನ್ನುವಂತೆ ಓಡೋಡಿ ಹೋಗಿ ಬೋರ್ಡ್​ಗೆ ಕಿಸ್​ಗಳನ್ನು ಕೊಟ್ಟಿದ್ದಾರೆ.

ಚೈತ್ರಾ ಬೋರ್ಡ್​ಗೆ 25 ಕಿಸ್​ಗಳನ್ನು ಕೊಟ್ಟಿದ್ದರಿಂದ ಇದೆಲ್ಲಾ ಟ್ಯಾಲೆಂಟ್​ ಇದೆಯಾ ನಿನ್ನತ್ರ.. ಎಂದು ರಜತ್ ಕೇಳುತ್ತಿದ್ದಂತೆ ಚೈತ್ರಾ ಸೇರಿ ಎಲ್ಲರೂ ನಗಾಡಿದ್ದಾರೆ. ಇದೇ ವೇಳೆ ಹನುಮಂತು ಕೂಡ ಕಿಸ್ ಕೊಡುವಾಗ ರಜತ್ ಹನುಮಂತು ತಂದೆ, ತಾಯಿಯರನ್ನ ಚೆನ್ನಾಗಿ ಆಟ ಆಡಿಸಿದ್ದಾರೆ. ಬೋರ್ಡ್​ ಬದಲು ಹುಡುಗಿ ಇದ್ದಿದ್ರೆ ಮಗ ಚೆನ್ನಾಗಿ ಕಿಸ್ ಕೊಡಲಿ ಎಂದು ಬೈಯದೇ ಸುಮ್ಮನೇ ಇರುತ್ತಿದ್ರಾ ಎಂದು ತಮಾಷೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment